Sign In

By signing in or creating an account, you agree with Associated Broadcasting Company's Terms & Conditions and Privacy Policy.

Congress Files: ಯುಪಿಎ ಅವಧಿಯಲ್ಲಿನ ಹಗರಣಗಳ ಕಾಂಗ್ರೆಸ್ ಫೈಲ್ಸ್ ವಿಡಿಯೊ ಹಂಚಿಕೊಂಡ ಬಿಜೆಪಿ

ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಬಿಜೆಪಿ, ಕೊಯ್ಲೇ ಕಿ ದಲಾಲಿ ಮೇ ಹಾತ್ ಕಾಲಾ ಎಂಬುದು ಕೇವಲ ಗಾದೆಯಲ್ಲ, ಆದರೆ ವಾಸ್ತವ ಪರಿಸ್ಥಿತಿ. 2012 ರಲ್ಲಿ ಕಾಂಗ್ರೆಸ್ ತನ್ನ ಕೈ ಮಾತ್ರವಲ್ಲದೆ ಮುಖವನ್ನೂ ಕಳಂಕ ಮಾಡಿಕೊಂಡಿತು ಎಂದು ಬಿಜೆಪಿ ಕುಟುಕಿದೆ.

Congress Files: ಯುಪಿಎ ಅವಧಿಯಲ್ಲಿನ ಹಗರಣಗಳ ಕಾಂಗ್ರೆಸ್ ಫೈಲ್ಸ್ ವಿಡಿಯೊ ಹಂಚಿಕೊಂಡ ಬಿಜೆಪಿ
ಸೋನಿಯಾ ಗಾಂಧಿ- ಮನಮೋಹನ್ ಸಿಂಗ್
Follow us
ರಶ್ಮಿ ಕಲ್ಲಕಟ್ಟ
|

Updated on: Apr 04, 2023 | 8:41 PM

ಬಿಜೆಪಿ (BJP) ಮಂಗಳವಾರ ತನ್ನ ‘ಕಾಂಗ್ರೆಸ್ ಫೈಲ್ಸ್’ (Congress Files) ವಿಡಿಯೊ ಅಭಿಯಾನದ ಮೂರನೇ ಕಂತನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ (Congress) ತನ್ನ 70 ವರ್ಷಗಳ ಆಡಳಿತದಲ್ಲಿ ಸಾರ್ವಜನಿಕರಿಂದ ₹ 48,20,69,00,00,000 (4.82 ಲಕ್ಷ ಕೋಟಿ) ಲೂಟಿ ಮಾಡಿದೆ ಎಂದು ಆರೋಪಿಸಿದ ನಂತರ, ಬಿಜೆಪಿ ಎರಡು ಅವಧಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (UPA) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಇತ್ತೀಚಿನ ವಿಡಿಯೊದಲ್ಲಿ 2019 ರಲ್ಲಿ ಯುಪಿಎ ₹1,86,000 ಮೌಲ್ಯದ ಕಲ್ಲಿದ್ದಲು ಹಗರಣಗಳನ್ನು ಮಾಡಿರುವುದಾಗಿ ಬಿಜೆಪಿ ಆರೋಪಿಸಿದೆ. ‘ಕೋಯ್ಲೆ ಕಿ ದಲಾಲಿ ಮೇ ಹಾತ್ ಕಾಲಾ’ ಶೀರ್ಷಿಕೆಯ ಮೂರು ನಿಮಿಷಗಳ ವಿಡಿಯೊದಲ್ಲಿ, ಯುಪಿಎ ಆಡಳಿತದಲ್ಲಿ ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿನ ಹಗರಣವನ್ನು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಬಿಜೆಪಿ, ಕೊಯ್ಲೇ ಕಿ ದಲಾಲಿ ಮೇ ಹಾತ್ ಕಾಲಾ ಎಂಬುದು ಕೇವಲ ಗಾದೆಯಲ್ಲ, ಆದರೆ ವಾಸ್ತವ ಪರಿಸ್ಥಿತಿ. 2012 ರಲ್ಲಿ ಕಾಂಗ್ರೆಸ್ ತನ್ನ ಕೈ ಮಾತ್ರವಲ್ಲದೆ ಮುಖವನ್ನೂ ಕಳಂಕ ಮಾಡಿಕೊಂಡಿತು ಎಂದು ಬಿಜೆಪಿ ಕುಟುಕಿದೆ.

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಸೀಸನ್ 1, ಎಪಿಸೋಡ್ 3 ಎಂಬ ವಿಡಿಯೊದಲ್ಲಿ ಯುಪಿಎ ಆಡಳಿತದಲ್ಲಿ ಕಲ್ಲಿದ್ದಲು ಆರ್ಥಿಕತೆಗೆ ತುಂಬಾ ಸಹಕಾರಿಯಾಗಿದ್ದು,ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ದೂರಿದೆ. ಮನಮೋಹನ್ ಸಿಂಗ್ ಅವರು ಎರಡನೇ ಬಾರಿಗೆ ಪ್ರಧಾನಿಯಾದಾಗ, ಅವರು ಅನೇಕ ಭರವಸೆಗಳನ್ನು ನೀಡಿದರು. ಆದರೆ ಅವರ ಅಧಿಕಾರಾವಧಿಯಲ್ಲಿ ಅವರ ಭರವಸೆಗಳ ಬದಲಿಗೆ ಭ್ರಷ್ಟಾಚಾರವೇ ಹೆಚ್ಚು ಸುದ್ದಿಯಾಗಿದ್ದು ಎಂದು ಬಿಜೆಪಿ ವಿಡಿಯೊದಲ್ಲಿ ಹೇಳಿದೆ.

ಕಾಂಗ್ರೆಸ್​​ನ ‘ಕಲ್ಲಿದ್ದಲು ಹಗರಣ’ದಿಂದಾಗಿ ರಾಷ್ಟ್ರೀಯ ಖಜಾನೆಗೆ ₹1,86,000 ಕೋಟಿ ನಷ್ಟವಾಗಿದೆ ಎಂದು ಬಿಜೆಪಿ ಹೇಳಿದೆ. 2004-2009ರ ನಡುವೆ ಸುಮಾರು 100 ಕಂಪನಿಗಳಿಗೆ ಕಲ್ಲಿದ್ದಲು ಗಣಿಗಳನ್ನು ಸರಿಯಾಗಿ ಹರಾಜು ಮಾಡದೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ವಿಡಿಯೊದಲ್ಲಿ ಹೇಳಲಾಗಿದೆ. ಕಲ್ಲಿದ್ದಲು ಗಣಿಗಳ ತಪ್ಪಾದ ಹಂಚಿಕೆಯನ್ನು ಸಿಎಜಿ ಕೂಡ ಎತ್ತಿ ತೋರಿಸಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ನ ಆಟವು ಕಲ್ಲಿದ್ದಲು ಕಂಪನಿಗಳೊಂದಿಗೆ ಆಡಿದ್ದು ಕೇವಲ ಭಾರತೀಯ ಆರ್ಥಿಕತೆಯನ್ನು ಮಾತ್ರವಲ್ಲದೆ ಅದರ ಪ್ರತಿಷ್ಠೆಗೂ ಹಾನಿಯಾಗಿದೆ ಎಂದು ವಿಡಿಯೊದಲ್ಲಿ ಹೇಳಿದೆ.

ಇದನ್ನೂ ಓದಿ:Ghulam Nabi Azad: ಯಾವುದೇ ರಾಜ್ಯದ ಚುನಾವಣೆ ಗೆಲುವಿನ ಶ್ರೇಯ ಕಾಂಗ್ರೆಸ್​​ ಕೇಂದ್ರ ನಾಯಕತ್ವಕ್ಕೆ ಸಲ್ಲದು; ಗುಲಾಂ ನಬಿ ಆಜಾದ್

ಅಷ್ಟೇ ಅಲ್ಲದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗಾಂಧಿ ಕುಟುಂಬದ ‘ರಿಮೋಟ್ ಕಂಟ್ರೋಲ್’ ಎಂದು ಕರೆಯುವ ಮೂಲಕ ಬಿಜೆಪಿ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದೆ. ಬಿಜೆಪಿ ಆರೋಪಗಳಿಗೆ ವಿರೋಧ ಪಕ್ಷ ಇನ್ನೂ ಪ್ರತಿಕ್ರಿಯಿಸಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ