AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕ ಕೆಎಸ್​ ಲಿಂಗೇಶ್ ವಿರುದ್ಧ ಅಕ್ರಮ ಭೂ ಮಂಜೂರಾತಿ ಆರೋಪ: ಇದು ಕಾಂಗ್ರೆಸ್, ಬಿಜೆಪಿ ಮಾಡಿರುವ ಷಡ್ಯಂತ್ರ ಎಂದ ಹೆಚ್​​ಡಿ ರೇವಣ್ಣ

ಬೇಲೂರು ಶಾಸಕ ಕೆ.ಎಸ್.ಲಿಂಗೇಶ್​​​ ಪ್ರಾಮಾಣಿಕ ವ್ಯಕ್ತಿ, ಅವರು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಚುನಾವಣೆ ಸಂದರ್ಭದಲ್ಲಿ ಇಂತಹ ಆರೋಪ ಮಾಡುತ್ತಿದ್ದಾರೆ ಅಷ್ಟೇ. ಇದು ಕಾಂಗ್ರೆಸ್, ಬಿಜೆಪಿ ಮಾಡಿರುವ ಷಡ್ಯಂತ್ರ ಎಂದು ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಹೇಳಿದರು.

ಶಾಸಕ ಕೆಎಸ್​ ಲಿಂಗೇಶ್ ವಿರುದ್ಧ ಅಕ್ರಮ ಭೂ ಮಂಜೂರಾತಿ ಆರೋಪ: ಇದು ಕಾಂಗ್ರೆಸ್, ಬಿಜೆಪಿ ಮಾಡಿರುವ ಷಡ್ಯಂತ್ರ ಎಂದ ಹೆಚ್​​ಡಿ ರೇವಣ್ಣ
ಮಾಜಿ ಸಚಿವ ಹೆಚ್​​.ಡಿ ರೇವಣ್ಣImage Credit source: news18.com
ಗಂಗಾಧರ​ ಬ. ಸಾಬೋಜಿ
|

Updated on:Apr 04, 2023 | 4:11 PM

Share

ಹಾಸನ: ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ (KS Lingesh) ​​​ಪ್ರಾಮಾಣಿಕ ವ್ಯಕ್ತಿ, ಅವರು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಚುನಾವಣೆ ಸಂದರ್ಭದಲ್ಲಿ ಇಂತಹ ಆರೋಪ ಮಾಡುತ್ತಿದ್ದಾರೆ ಅಷ್ಟೇ. ಇದು ಕಾಂಗ್ರೆಸ್, ಬಿಜೆಪಿ ಮಾಡಿರುವ ಷಡ್ಯಂತ್ರ ಎಂದು ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಹೇಳಿದರು. ಲಿಂಗೇಶ್​ ಒಂದೇ ಒಂದು ಇಂಚು ಭೂಮಿ ಅಕ್ರಮ ಮಾಡಿಲ್ಲ. ಅವರು ಕ್ಲೀನ್ ಹ್ಯಾಂಡ್ ಇದಾರೆ, ಬೇಕಿದ್ದರೆ ನಾನೇ ಸರ್ಟಿಫಿಕೇಟ್ ಕೊಡುತ್ತೇನೆ. ಜಿಲ್ಲೆಯಲ್ಲಿ ಯಾರು ಯಾರು ಹಣ ಹೊಡೆದಿದ್ದಾರೆ ನನಗೆ ಗೊತ್ತಿದೆ. ಲಿಂಗೇಶ್ ಒಬ್ಬ ಪಾಪದವನು, ಐದು ವರ್ಷ ಈ ತಾಲ್ಲೂಕಿಗೆ ಕಷ್ಟಪಟ್ಟಿದ್ದಾರೆ. ರಣಘಟ್ಟ ಯೋಜನೆ ತರಲು ಕಣ್ಣೀರು ಹಾಕಿಕೊಂಡು ಯಾರ ಮನೆಗೆ ತಿರುಗಿದ್ದಾನೆ ನನಗೆ ಗೊತ್ತಿದೆ. ಈ ತಾಲ್ಲೂಕಿಗೆ ಯಾವ ಯಾವ ಕೆಲಸ ಮಾಡಿದ್ದಾನೆ, ಅಂತಹ ವ್ಯಕ್ತಿನಾ ಚುನಾವಣೆ ಸಂದರ್ಭದಲ್ಲಿ ತೇಜೋವಧೆ ಮಾಡುತ್ತಿದ್ದಾರೆ. ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಶಿವಲಿಂಗೇಗೌಡ ಡಕೋಟ ಬಸ್ ಹತ್ತಿದ್ದಾರೆ, ಅದು ಎಲ್ಲಿ ಹೋಗಿ ನಿಂತುಕೊಳ್ಳುತ್ತದೆ ಗೊತ್ತಿಲ್ಲ  

ಸಂಸದ ಡಿ.ಕೆ.ಸುರೇಶ್, ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ಮಾಡಿದ ರೇವಣ್ಣ, ಕಾಂಗ್ರೆಸ್‌ನಲ್ಲಿ ಎಂತೆಂತಹವರು ಇದ್ದಾರೆ, ನಾವೇನು ಬೇಲ್ ಮೇಲೆ ಇದ್ದೇವಾ. ಕಳೆದ ಎರಡು ವರ್ಷದಿಂದ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕಾಂಗ್ರೆಸ್‌ನ 60 ವರ್ಷದ ಡಕೋಟ ಬಸ್ ಹತ್ತಿ ಎಂದು ಕಾಯುತ್ತಿದ್ದಾರೆ. ಅಪ್ಪಿತಪ್ಪಿ  ಶಿವಲಿಂಗೇಗೌಡ ಹತ್ತಿದ್ದು, ಅದು ಎಲ್ಲಿ ಹೋಗಿ ನಿಂತುಕೊಳ್ಳುತ್ತದೆ ಗೊತ್ತಿಲ್ಲ. ಈ ಕಡೆ ಅರಕಲಗೂಡುನವರನ್ನ ಬಸ್ ಹತ್ತಿ ಅಂದರು. ಇಲ್ಲಾ ಇದು ಕೆಟ್ಟು ಹೋಗಿರೋ‌ ಬಸ್ ಅಂತ ಬೇರೆ ಕಡೆ ಹೋದರು.

ಇದನ್ನೂ ಓದಿ: ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಅನಿತಾ ಕುಮಾರಸ್ವಾಮಿ

ಇದು ಎರಡು ರಾಷ್ಟ್ರೀಯ ಪಕ್ಷಗಳ ಷಡ್ಯಂತ್ರ

ಉತ್ತರ ಭಾರತದಿಂದ ಮೋದಿಯವರು ಖಾಲಿ ಮಾಡಿಸಿರುವ ಬಸ್ ಹತ್ತಿ ಎನ್ನುತ್ತಿದ್ದಾರೆ. ನಿಂಬೆಹಣ್ಣು ತಗೊಂಡು ನಾನು ಬೇಲ್ ಕ್ಯಾನ್ಸಲ್ ಮಾಡಿಸುವ ಅವಶ್ಯಕತೆ ಇಲ್ಲಾ. ಮಾನ, ಮರ್ಯಾದೆ, ಗೌರವಿದ್ದರೆ ಓಟು ಕೇಳಿ. ನಿಮ್ಮ ದಬ್ಬಾಳಿಕೆಗೆ ಹೆದರಲ್ಲ, ನಿಮ್ಮ ಚರಿತ್ರೆನೆ ಬಿಚ್ಚುತ್ತೇನೆ. ಇದು ಎರಡು ರಾಷ್ಟ್ರೀಯ ಪಕ್ಷಗಳ ಷಡ್ಯಂತ್ರ. ಇವರ ಕಾಲದಲ್ಲಿ ಮಾಡಿರುವ ದಾಖಲೆಗಳನ್ನು ಕೊಡಲು ಹೇಳಿ. ಹಾಸನದಲ್ಲಿ ಏನೇನ್​ ಹಗರಣ ಆಗಿದೆ ಅಂತ ತನಿಖೆ ನಡೆಸಲಿಕ್ಕೆ ಈಗೀನ ಮುಖ್ಯಮಂತ್ರಿಗಳ ಕೈಯಿಂದ ಆಗುತ್ತಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಲಿಂಗಾಯತರ ಬಗ್ಗೆ ಸಿಟಿ ರವಿ ಹೇಳಿಕೆ ವೈರಲ್: ಮೂವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್​ಐಆರ್​

ನೀನೇ ಸಾಕಿದ ಗಿಣಿ, ನಿನ್ನ ಹದ್ದಾಗಿ ಕುಕ್ಕಿತಲ್ಲೋ

ಒಬ್ಬ ಪ್ರಾಮಾಣಿಕ ಶಾಸಕ ಹಗಲು ರಾತ್ರಿ ದುಡಿದಿರುವವನು. ಕೆಲವರು ಹದಿನೈದು ವರ್ಷದಿಂದ ಈ ಪಕ್ಷದಿಂದ ಎಲ್ಲಾ ತಗೊಂಡಿದ್ದಾರೆ. ದೇವೇಗೌಡರು, ಕುಮಾರಣ್ಣನನ್ನು ಬಳಸಿಕೊಂಡರು. ಎಷ್ಟು ದಿನ ನಾಟಕ ನಡೆಯುತ್ತದೆ. ಆ ಚನ್ನಕೇಶವ ಸ್ವಾಮಿ ಪೂಜೆ ಮಾಡಿದ್ದೀನಿ, ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತೆ. ಯಾರು ಯಾರು ದೇವೇಗೌಡರಿಗೆ ಮೋಸ ಮಾಡಿದ್ದಾರೆ ಅರಸೀಕೆರೆಯಿಂದ ಹಿಡಿದು ಹದಿನೈದು ವರ್ಷ ಅವನನ್ನು ಗಿಣ ಸಾಕಿದ ಹಾಗೆ ಸಾಕಿದ್ದೇವೆ. ಒಂದು ಹಾಡು ಹೇಳುತ್ತಾರೆ. ನೀನೇ ಸಾಕಿದ ಗಿಣಿ, ಹದ್ದಾಗಿ ಕುಕ್ಕಿತಲ್ಲೀ ಹಂಗೆ ಆಗಿದೆ  ನಮ್ಮ‌ ಪರಿಸ್ಥಿತಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:10 pm, Tue, 4 April 23

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ