ದೆಹಲಿ: ಭಾನುವಾರ ಎಎಪಿಯ (AAP National Convention) ಮೊದಲ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅರವಿಂದ ಕೇಜ್ರಿವಾಲ್ (Arvind Kejriwal ) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ಬಿಜೆಪಿ ಎರಡನೇ ಹಂತದ ಆಪರೇಷನ್ ಕಮಲವನ್ನು ಪ್ರಾರಂಭಿಸಿದೆ ಎಂದು ಅವರು ಆರೋಪಿಸಿದರು. ಇದು ಚುನಾಯಿತ ಸರ್ಕಾರಗಳನ್ನು ಉರುಳಿಸುವ ಉದ್ದೇಶವನ್ನು ಹೊಂದಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ನಡೆಸಿದ ಅವರ ಹಿಂದಿನ ಪ್ರಯತ್ನಗಳು ವಿಫಲವಾಗಿದ್ದವು. ಈಗ, ಹೊಸ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
आम आदमी पार्टी को अब लोग देशभर में पसंद कर रहे हैं। पूरे देश में जनता द्वारा चुने गए AAP के सभी जनप्रतिनिधियों के साथ बातचीत। LIVE https://t.co/6vAQpQCLNO
— Arvind Kejriwal (@ArvindKejriwal) September 18, 2022
ಎಎಪಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದ ಒಂದು ದಿನದ ನಂತರ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. ಮನೀಶ್ ಸಿಸೋಡಿಯಾ ನಂತರ ಅಮಾನತುಲ್ಲಾ ಅವರನ್ನು ಬಂಧಿಸಲಾಗಿದೆ. ಮುಂದೆ ಅವರು ಕೈಲಾಶ್ ಗಹ್ಲೋಟ್ (ದೆಹಲಿ ಸಾರಿಗೆ ಸಚಿವ) ಅವರನ್ನು ಗುರಿಯಾಗಿಸುತ್ತಾರೆ. ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದಿದ್ದಾರೆ ಕೇಜ್ರಿವಾಲ್. ಈ ದೇಶದ ಸಂವಿಧಾನವನ್ನು ಉಳಿಸಲು 2012 ನವೆಂಬರ್ 26ರಂದು ಎಎಪಿ ಸ್ಥಾಪಿಸಲಾಯಿತು.ಇದು ಕಾಕತಾಳೀಯವಲ್ಲ ಎಂದು ಅವರು ಒತ್ತಿ ಹೇಳಿದರು.
ಇಂದು ನಾವು ದೇಶದ 20 ರಾಜ್ಯಗಳಲ್ಲಿ 1446 ಜನ ಪ್ರತಿನಿಧಿಗಳನ್ನು ಹೊಂದಿದ್ದೇವೆ. ಇವು ದೇವರು ಬಿತ್ತಿದ ನಮ್ಮ ಬೀಜಗಳು. ದೆಹಲಿ ಮತ್ತು ಪಂಜಾಬ್‌ನಲ್ಲಿ ಈ ಬೀಜಗಳು ಮರಗಳಾಗಿ ಮಾರ್ಪಟ್ಟಿವೆ ಮತ್ತು ಜನರಿಗೆ ನೆರಳು ಮತ್ತು ಹಣ್ಣುಗಳನ್ನು ನೀಡುತ್ತಿವೆ. ದೇವರು ಗುಜರಾತ್‌ನಲ್ಲಿ 27 ಬೀಜಗಳನ್ನು ಬಿತ್ತಿದ್ದಾನೆ. ಅವು ವೃಕ್ಷಗಳಾಗಲಿವೆ, ಗುಜರಾತ್‌ನಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದ ಕೇಜ್ರಿವಾಲ್, ರಾಜ್ಯ ಚುನಾವಣೆಯಲ್ಲಿ ಎಎಪಿ ಉತ್ತಮ ಸಾಧನೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Published On - 12:43 pm, Sun, 18 September 22