RTO Services: ಡ್ರೈವಿಂಗ್ ಲೈಸೆನ್ಸ್ ಸೇರಿ ಸಾರಿಗೆ ಇಲಾಖೆಯ 57 ಸೇವೆಗಳು ಈಗ ಆನ್​ಲೈನ್​ನಲ್ಲಿ ಲಭ್ಯ; ಇಲ್ಲಿದೆ ವಿವರ

ಸಾರಿಗೆ ಇಲಾಖೆ ಕಚೇರಿಗಳಿಗೆ ಜನರು ಭೇಟಿ ನೀಡಲೇಬೇಕು ಎನ್ನುವ ಅನಿವಾರ್ಯತೆಗೆ ಈ ನಿಯಮಗಳು ರಿಯಾಯ್ತಿ ನೀಡಿವೆ.

RTO Services: ಡ್ರೈವಿಂಗ್ ಲೈಸೆನ್ಸ್ ಸೇರಿ ಸಾರಿಗೆ ಇಲಾಖೆಯ 57 ಸೇವೆಗಳು ಈಗ ಆನ್​ಲೈನ್​ನಲ್ಲಿ ಲಭ್ಯ; ಇಲ್ಲಿದೆ ವಿವರ
ಸಂಗ್ರಹ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 18, 2022 | 11:26 AM

ದೆಹಲಿ: ಸಾರಿಗೆ ಇಲಾಖೆಯು ಒದಗಿಸುವ ಹಲವು ಸೇವೆಗಳನ್ನು ಈಗ ಸುಲಭವಾಗಿ ಮನೆಗಳಲ್ಲಿ ಇದ್ದೇ ಪಡೆದುಕೊಳ್ಳಬಹುದಾಗಿದೆ. ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (Ministry of Road Transport and Highways – MoRTH) ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಈ ಹೊಸ ಅಧಿಸೂಚನೆಯ ಪ್ರಕಾರ ಚಾಲನಾ ಪರವಾನಗಿ, ಕಂಡಕ್ಟರ್ ಲೈಸೆನ್ಸ್, ವಾಹನ ನೋಂದಣಿ, ಪರ್ಮಿಟ್, ಮಾಲೀಕತ್ವ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದ 58 ನಾಗರಿಕ ಸೇವೆಗಳನ್ನು ಸಂಪೂರ್ಣವಾಗಿ ಆನ್​ಲೈನ್​ನಲ್ಲಿಯೇ ಪಡೆಯಬಹುದಾಗಿದೆ. ಸಾರಿಗೆ ಇಲಾಖೆ ಕಚೇರಿಗಳಿಗೆ ಜನರು ಭೇಟಿ ನೀಡಲೇಬೇಕು ಎನ್ನುವ ಅನಿವಾರ್ಯತೆಗೆ ಈ ನಿಯಮಗಳು ರಿಯಾಯ್ತಿ ನೀಡಿವೆ.

ಸಾರಿಗೆ ಇಲಾಖೆಯು ಈ ಸಂಬಂಧ ಸೆಪ್ಟೆಂಬರ್ 16ರಂದು ಅಧಿಸೂಚನೆ ಹೊರಡಿಸಿದೆ. ಈವರೆಗೆ 18 ನಾಗರಿಕ ಸೇವೆಗಳನ್ನು ಸಾರಿಗೆ ಇಲಾಖೆಯು ಆನ್​ಲೈನ್​ನಲ್ಲಿ ಒದಗಿಸುತ್ತಿತ್ತು. ಇದೀಗ ಈ ಸೇವೆಗಳ ಸಂಖ್ಯೆಯು 58ಕ್ಕೆ ಹೆಚ್ಚಾಗಲಿದೆ. ಈ ಎಲ್ಲ ಸೇವೆಗಳಿಗೆ ಆಧಾರ್ ದೃಢೀಕರಣ ಕಡ್ಡಾಯವಾಗಿದೆ. ಜನರು ಯಾವುದೇ ಮಧ್ಯವರ್ತಿಗಳ ಅಗತ್ಯ ಇಲ್ಲದಂತೆ ಈ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಲರ್ನರ್ ಲೈಸೆನ್ಸ್​ (ಎಲ್​ಎಲ್​), ನಕಲಿ ಚಾಲನಾ ಪರವಾನಗಿ, ಚಾಲನಾ ಪರವಾನಗಿ ನವೀಕರಣಕ್ಕಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ಅಂತರರಾಷ್ಟ್ರೀಯ ಚಾಲನಾ ಪರವಾನಗಿ, ಕಂಡಕ್ಟರ್ ಪರವಾನಗಿಯಲ್ಲಿ ವಿಳಾಸದ ಬದಲಾವಣೆ, ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆಗೆ ಅರ್ಜಿ ಸೇರಿದಂತೆ ಹಲವು ಸೇವೆಗಳನ್ನು ಆಧಾರ್ ದೃಢೀಕರಣದ ಮೂಲಕ ಪಡೆದುಕೊಳ್ಳಬಹುದು.

ಸಾರಿಗೆಗೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಒದಗಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರಿಗೆ ಸೇವೆಗಳನ್ನು ಕಾಂಟ್ಯಾಕ್ಟ್​ಲೆಸ್, ಫೇಸ್​ಲೆಸ್ ರೀತಿಯಲ್ಲಿ ಒದಗಿಸುವುದರಿಂದ ನಾಗರಿಕರ ಸಮಯವನ್ನು ಉಳಿಸುವಲ್ಲಿ ಮತ್ತು ಕಾಯುವಿಕೆಯ ಹೊರೆ ಕಡಿಮೆ ಮಾಡುವಲ್ಲಿ ಈ ಕ್ರಮಗಳು ನೆರವಾಗುತ್ತವೆ. ಈ ಸುಧಾರಣೆಗಳಿಂದಾಗಿ ಆರ್​ಟಿಒ ಕಚೇರಿಗಳಲ್ಲಿ ಜನದಟ್ಟಣೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ದಕ್ಷತೆಗೆ ಕಾರಣವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಆಧಾರ್ ಇಲ್ಲದಿದ್ದರೆ ಹೀಗೆ ಮಾಡಿ

ಸಿಎಂವಿಆರ್ 1989ರ ಪ್ರಕಾರ, ಆಧಾರ್ ಸಂಖ್ಯೆಯನ್ನು ಹೊಂದಿರದ ಯಾವುದೇ ವ್ಯಕ್ತಿಯು ಆಯಾ ಪ್ರಾಧಿಕಾರದೊಂದಿಗೆ ಭೌತಿಕವಾಗಿ ಪರ್ಯಾಯ ದಾಖಲೆಯನ್ನು ಸಲ್ಲಿಸುವ ಮೂಲಕ ತಮ್ಮ ಗುರುತು ಸಾಬೀತುಪಡಿಸಬೇಕು. ನಂತರ ಅವರು ಅಂತಹ ಸೇವೆಯನ್ನು ಭೌತಿಕ ರೂಪದಲ್ಲಿ ಪಡೆಯಬಹುದು.

ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
ಹುಡುಗಿ ಯಾರೇ ಆದರೂ ಬಂಜಾರಾ ಸಂಪ್ರದಾಯದಂತೆ ಮದುವೆ: ಮಾರುತಿ
ಹುಡುಗಿ ಯಾರೇ ಆದರೂ ಬಂಜಾರಾ ಸಂಪ್ರದಾಯದಂತೆ ಮದುವೆ: ಮಾರುತಿ