Big News: ನನ್ನ ತಂದೆಯನ್ನು ಕುತಂತ್ರದಿಂದ ಕೊಲ್ಲಲಾಯಿತು; ಕೆಸಿಆರ್ ವಿರುದ್ಧ ವೈಎಸ್ಆರ್ ಪುತ್ರಿ ಶರ್ಮಿಳಾ ಗಂಭೀರ ಆರೋಪ
YS Sharmila: ನನ್ನ ತಂದೆ ರಾಜಶೇಖರ್ ರೆಡ್ಡಿಯವರನ್ನು ಕುತಂತ್ರದಿಂದ ಕೊಂದರು. ಈಗ ನನ್ನನ್ನು ಕೂಡ ಕೊಲ್ಲುವ ಸಾಧ್ಯತೆ ಇದೆ ಎಂದು ಕೆಸಿಆರ್ ಮೇಲೆ ವೈಎಸ್ ಆರ್ ಪುತ್ರಿ ಶರ್ಮಿಳಾ ಗಂಭೀರ ಆರೋಪ ಮಾಡಿದ್ದಾರೆ.
ಹೈದರಾಬಾದ್: ಕೆಲವು ದಿನಗಳ ಹಿಂದೆ ಟಿಆರ್‌ಎಸ್ ಶಾಸಕರು ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ವೈಎಸ್ ಶರ್ಮಿಳಾ ಅಸಭ್ಯ ಭಾಷೆ ಬಳಸಿರುವ ಬಗ್ಗೆ ಸ್ಪೀಕರ್‌ಗೆ ದೂರು ನೀಡಿದ್ದರು. ಇದನ್ನೇ ಬಳಸಿಕೊಂಡು ತೆಲಂಗಾಣ ರಾಜಕಾರಣದಲ್ಲಿ ಶರ್ಮಿಳಾ ಸಕ್ರಿಯರಾಗಲು ಪ್ರಯತ್ನಿಸುತ್ತಿದ್ದಾರೆ. ವೈಎಸ್‌ಆರ್‌ಟಿಪಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಈಗ ತನ್ನ ತಂದೆಯ ಸಾವಿನ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದು, ಇದು ತೀವ್ರ ಚರ್ಚೆಗೀಡಾಗಿದೆ.
ನನ್ನ ತಂದೆ ರಾಜಶೇಖರ್ ರೆಡ್ಡಿಯವರನ್ನು ಕುತಂತ್ರದಿಂದ ಸಾಯಿಸಲಾಗಿದೆ ಎಂದು ಕೆಸಿಆರ್ ಮೇಲೆ ವೈಎಸ್ ಆರ್ ಪುತ್ರಿ ಶರ್ಮಿಳಾ ಗಂಭೀರ ಆರೋಪ ಮಾಡಿದ್ದಾರೆ. ನನ್ನನ್ನು ಕೂಡ ಕೊಲ್ಲುವ ಸಾಧ್ಯತೆ ಇದೆ. ಆದರೆ, ನಾನು ಬದುಕಿರುವವರೆಗೂ, ನನ್ನ ಉಸಿರು ಇರುವವರೆಗೂ ಜನರಿಂದ ನನ್ನನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಅರಾಜಕತೆ ಬಗ್ಗೆ ನಾನು ಮಾತಾಡಿದ್ದೇನೆ. ನನ್ನ ಕತ್ತು ಹಿಸುಕುವುದು ನಿಮಗೆ ತರವಲ್ಲ. ಪೊಲೀಸರು ನಿಮ್ಮ ಪರವಾಗಿದ್ದಾರೆ. ಪೊಲೀಸರನ್ನು ನಿಮ್ಮ ಮನೆ ಕೆಲಸದವರಂತೆ ಬಳಸಿಕೊಳ್ಳುತ್ತಿದ್ದೀರಿ ಎಂದು ವೈಎಸ್ ಶರ್ಮಿಳಾ ಟೀಕಾ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ: ಆಂಧ್ರ ಮುಖ್ಯಮಂತ್ರಿ ಜಗನ್ರೆಡ್ಡಿ ಚಿಕ್ಕಪ್ಪ ಹತ್ಯೆಯಾಗಿ 2ವರ್ಷದ ಬಳಿಕ ಸಿಕ್ಕಿಬಿದ್ದ ಆರೋಪಿ; ಗೋವಾದಲ್ಲಿ ಸೆರೆ ಹಿಡಿದ ಸಿಬಿಐ
ಅವರು ನನ್ನ ತಂದೆ (ವೈಎಸ್‌ಆರ್) ವಿರುದ್ಧ ಸಂಚು ರೂಪಿಸಿ ಕೊಂದರು. ಅವರು ಈಗ ನನ್ನನ್ನು ಕೂಡ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ನಾನು ವೈಎಸ್ಆರ್ ಅವರ ಮಗಳು. ನಾನು ಯಾರಿಗೂ ಹೆದರುವುದಿಲ್ಲ ಎಂದು ಶರ್ಮಿಳಾ ಹೇಳಿದ್ದಾರೆ. ಈ ಹಿಂದೆ ವಿರೋಧ ಪಕ್ಷದಲ್ಲಿದ್ದ ಜಗನ್ ಕೂಡ ವೈಎಸ್‌ಆರ್ ಸಾವಿನ ಬಗ್ಗೆ ಇದೇ ರೀತಿಯ ಆರೋಪ ಮಾಡಿದ್ದರು. ವೈಎಸ್ಆರ್ ಸಾವಿನ ಹಿಂದೆ ಅಂಬಾನಿ ಕೈವಾಡವಿದೆ ಎಂದು ಆರೋಪಿಸಿ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ರಿಲಯನ್ಸ್ ಮಾರ್ಟ್ಸ್ ಮೇಲೆ ದಾಳಿ ಮಾಡಿದ್ದರು. ಆದರೆ ಜಗನ್ ಅಧಿಕಾರಕ್ಕೆ ಬಂದ ನಂತರ ಅಂಬಾನಿ ಅವರ ಆಪ್ತ ಸಹಾಯಕರಾದ ಪರಿಮಳಾ ನಾಥ್ವಾನಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು.
అవినీతిని ప్రశ్నిస్తే అరెస్ట్ చేస్తారా..
మీ బేడీలకు నేను భయపడను?
దమ్ముంటే అరెస్ట్ చేసుకోండి??#YSSharmila#TeamYSSR #YSRTP pic.twitter.com/QDb14i2ozI
— OMKAR KARTHEEK NAMBURI (@OmkarkarthikN) September 18, 2022
ಕೆಸಿಆರ್ಗೆ ಬಹಿರಂಗ ಸವಾಲ್ ಹಾಕಿರುವ ವೈಎಸ್ಆರ್ ಪುತ್ರಿ ವೈಎಸ್ ಶರ್ಮಿಳಾ, ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ಅವರೇ ನನಗೇನೂ ಬೇಡಿ (ಕೈಕೋಳ) ಎಂದರೆ ಭಯವಿಲ್ಲ. ನಿಮಗೆ ಧಮ್ ಇದ್ದರೆ ನನ್ನನ್ನು ಅರೆಸ್ಟ್ ಮಾಡಿಸಿ. ನನ್ನ ಹೆಸರು ವೈ.ಎಸ್. ಶರ್ಮಿಳಾ. ನಾನು ವೈ.ಎಸ್ ರಾಜಶೇಖರ್ ರೆಡ್ಡಿಯವರ ಪುತ್ರಿ. ನಾನು ಹುಲಿ ಮರಿ. ಕೈ ಕೋಳಗಳು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಇ.ಟಿ.ಸಿ.ಎಂ. ಆಸ್ಪತ್ರೆ ಲೆಕ್ಕಾಧಿಕಾರಿ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ: ಪಾದ್ರಿ ಸೇರಿ ನಾಲ್ವರು ಅರೆಸ್ಟ್
ನಿಮ್ಮ ಕಡೆ ಪೊಲೀಸರಿದ್ದರೆ ನನಗೆ ಜನರ ಬಲವಿದೆ. ನಾನು ಇಲ್ಲೇ ಜನರ ಮಧ್ಯೆ ಪಾದಯಾತ್ರೆಯಲ್ಲಿ ಇದ್ದೇನೆ, ಜನರಿಗೋಸ್ಕರ ಹೋರಾಡುತ್ತೇನೆ. ನನ್ನ ವಿರುದ್ಧ ಕೇಸ್ ಫೈಲ್ ಮಾಡಿದ್ದೀರ ಅಲ್ಲವೇ? ನಿಮಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ವೈಎಸ್ ಶರ್ಮಿಳಾ ಬಹಿರಂಗ ಸವಾಲು ಹಾಕಿದ್ದಾರೆ.
ಅಂದಹಾಗೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಖಮ್ಮಂ ಜಿಲ್ಲೆ ಪಾಲೇರು ಕ್ಷೇತ್ರದಿಂದ ಸ್ಪರ್ಧಿಸಲು ಶರ್ಮಿಳಾ ಸಜ್ಜಾಗಿದ್ದಾರೆ. ಪಾಲೇರು ಕ್ಷೇತ್ರವು ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಇಲ್ಲಿ ರೆಡ್ಡಿ ಸಮುದಾಯದವರೇ ಪ್ರಬಲರು. 2016ರಲ್ಲಿ ಟಿಆರ್‌ಎಸ್‌ನ ತುಮ್ಮಲ ನಾಗೇಶ್ವರ ರಾವ್ ಗೆದ್ದ ಉಪಚುನಾವಣೆ ಹೊರತುಪಡಿಸಿ 1999ರಿಂದ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆಲ್ಲುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕಂದಾಳ ಉಪೇಂದರ್ ರೆಡ್ಡಿ ಗೆಲುವು ಸಾಧಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Sun, 18 September 22