ಇ.ಟಿ.ಸಿ.ಎಂ. ಆಸ್ಪತ್ರೆ ಲೆಕ್ಕಾಧಿಕಾರಿ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ: ಪಾದ್ರಿ ಸೇರಿ ನಾಲ್ವರು ಅರೆಸ್ಟ್

ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ವಿರುದ್ಧ ನಕಲಿ ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಎಂದು ಸುಳ್ಳು ದೂರು ಕೊಡಿಸಿದ್ರು. ಸುಳ್ಳು ದೂರು ನೀಡಿರುವುದು ಸಾಬೀತಾದ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಕೋಲಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇ.ಟಿ.ಸಿ.ಎಂ. ಆಸ್ಪತ್ರೆ ಲೆಕ್ಕಾಧಿಕಾರಿ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ: ಪಾದ್ರಿ ಸೇರಿ ನಾಲ್ವರು ಅರೆಸ್ಟ್
Follow us
TV9 Web
| Updated By: ಆಯೇಷಾ ಬಾನು

Updated on:Sep 18, 2022 | 9:35 AM

ಕೋಲಾರ: ಇ.ಟಿ.ಸಿ.ಎಂ. ಆಸ್ಪತ್ರೆ ಲೆಕ್ಕಾಧಿಕಾರಿಯಿಂದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ದೂರು ನೀಡಿರುವುದು ಸಾಬೀತಾದ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಕೋಲಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೆಥೋಡಿಸ್ಟ್ ಚರ್ಚ್ ಪಾದ್ರಿ ರೆವರಂಟ್ ಶಾಂತಕುಮಾರ್, ಜನಿಫರ್, ಮಂಜು ಹಾಗೂ ಹಾಸ್ಟೆಲ್ ವಾರ್ಡನ್ ಶೀಲಾ ಬಂಧಿತ ಆರೋಪಿಗಳು.

ಆರೋಪಿಗಳು, ಇ.ಟಿ.ಸಿ.ಎಂ. ಆಸ್ಪತ್ರೆ ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ವಿರುದ್ಧ ನಕಲಿ ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಎಂದು ಸುಳ್ಳು ದೂರು ಕೊಡಿಸಿದ್ರು. ನ್ಯಾಯಾಧೀಶರ ಎದುರು ನಕಲಿ ವಿದ್ಯಾರ್ಥಿನಿಯರ ಹೇಳಿಕೆ ದಾಖಲು ಮಾಡಿಸಿದ್ರು. ಈ ಕುರಿತು ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ಪತ್ನಿ ಸವಿತಾ ಜಾನ್ ಎಸ್​​​ಪಿಗೆ ದೂರು ನೀಡಿದ್ದರು. ತನಿಖೆ ವೇಳೆ ಸುಳ್ಳು ದೂರು ನೀಡಿರುವುದು ಪತ್ತೆಯಾಗಿತ್ತು. ಹೀಗಾಗಿ ಸುಳ್ಳು ದೂರು ನೀಡಿರುವುದು ಸಾಬೀತಾದ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಕೋಲಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿಯಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್,​ ದೂರುದಾರರೇ ನಕಲಿ..!

ಏನಿದು ಪ್ರಕರಣ?

ಇದೇ ಆಗಸ್ಟ್​-30 ರಂದು ಕೋಲಾರ ಮೆಥಡಿಸ್ಟ್​ ಚರ್ಚ್​ಗೆ ಸೇರಿದ ಇ.ಟಿ.ಸಿ.ಎಂ ಆಸ್ಪತ್ರೆಯ ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ಅವರು ವಾರ್ಷಿಕ ಶುಲ್ಕ ಕಡಿಮೆ ಮಾಡುವ ಸಲುವಾಗಿ ನರ್ಸಿಂಗ್​ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕೋಲಾರದ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಪ್ರಕರಣಕ್ಕೆ ಬಿಗ್​ ಟ್ವಿಸ್​ ಸಿಕ್ಕಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿರುವ ವಿದ್ಯಾರ್ಥಿನಿಯರೇ ನಕಲಿ ಅನ್ನೋ ಅಂಶ ಬೆಳಕಿಗೆ ಬಂದಿದೆ.

ಇಬ್ಬರು ವಿದ್ಯಾರ್ಥಿನಿಯರ ಹೆಸರಲ್ಲಿ ದೂರು ನೀಡಲಾಗಿದ್ದು, ದೂರು ನೀಡಿರುವ ವಿಷಯ ಅಸಲಿ ಆ ವಿದ್ಯಾರ್ಥಿನಿಯರಿಗೇ ಗೊತ್ತಿಲ್ಲ, ಅಲ್ಲದೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೇರೆ ಇನ್ನಿಬ್ಬರು ನಕಲಿ ವಿದ್ಯಾರ್ಥಿನಿಯರು ಕೋಲಾರ ಮಹಿಳಾ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿ, ನ್ಯಾಯಾಧೀಶರ ಎದುರಲ್ಲೂ ನಕಲಿ ವಿದ್ಯಾರ್ಥಿನಿಯರೇ ಹೇಳಿಕೆ ನೀಡುವ ಮೂಲಕ ಪೊಲೀಸರನ್ನೇ ವಂಚಿಸಿದ್ದಾರೆ ಅನ್ನೋದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ. ಈ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:33 am, Sun, 18 September 22