ಹಿಂದುತ್ವ: ಶಿವ ಸೇನಾ ಮತ್ತು ಬಿಜೆಪಿ ನಡುವೆ ನಿಲ್ಲದ ಜಗಳ | BJP-Shiv Sena again lock horns over Hindutva
ಮಹಾರಾಷ್ಟ್ರದಲ್ಲಿ ಶಿವ ಸೇನಾ ಮತ್ತು ಬಿಜೆಪಿ ಪಕ್ಷಗಳ ನಡುವೆ ನಿರಂತರವಾಗಿ ನಡೆಯುತ್ತಿರುವ ವಾಕ್ಸಮರ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಎರಡು ಪಕ್ಷಗಳು ಪ್ರಚಂಡ ಹಿಂದುತ್ವವಾದಿಗಳು. ಈ ವಿಷಯಯವಾಗೇ ಅವೆರಡರ ನಡುವೆ ವಾಗ್ವಾದಗಳು ನಡೆಯುತ್ತಿರುತ್ತವೆ. ಮಂಗಳವಾರದಂದು ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡಿದ ಶಿವ ಸೇನಾ ಹಿರಿಯ ನಾಯಕ ಸಂಜಯ ರಾವತ್ ದೇಶಕ್ಕೆ ಅಗತ್ಯಬಿದ್ದರೆ ತಮ್ಮ ಪಕ್ಷ ಹಿಂದುತ್ವದ ಖಡ್ಗವನ್ನೇ ಝಳಪಳಿಸುತ್ತಾ ಮುಂದೆ ಬರುತ್ತದೆ ಎಂದು ಹೇಳಿದರು. ‘‘ಶಿವ ಸೇನಾ ಹಿಂದೆಯೂ ಹಿಂದುತ್ವವಾದಿಯಾಗಿತ್ತು, ಇವತ್ತೂ ಆಗಿದೆ ಮತ್ತು ಮುಂದೆಯೂ ಹಿಂದುತ್ವವಾದಿಯಾಗಿಯೇ ಉಳಿಯುತ್ತದೆ. ಆದರೆ […]
ಮಹಾರಾಷ್ಟ್ರದಲ್ಲಿ ಶಿವ ಸೇನಾ ಮತ್ತು ಬಿಜೆಪಿ ಪಕ್ಷಗಳ ನಡುವೆ ನಿರಂತರವಾಗಿ ನಡೆಯುತ್ತಿರುವ ವಾಕ್ಸಮರ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಎರಡು ಪಕ್ಷಗಳು ಪ್ರಚಂಡ ಹಿಂದುತ್ವವಾದಿಗಳು. ಈ ವಿಷಯಯವಾಗೇ ಅವೆರಡರ ನಡುವೆ ವಾಗ್ವಾದಗಳು ನಡೆಯುತ್ತಿರುತ್ತವೆ. ಮಂಗಳವಾರದಂದು ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡಿದ ಶಿವ ಸೇನಾ ಹಿರಿಯ ನಾಯಕ ಸಂಜಯ ರಾವತ್ ದೇಶಕ್ಕೆ ಅಗತ್ಯಬಿದ್ದರೆ ತಮ್ಮ ಪಕ್ಷ ಹಿಂದುತ್ವದ ಖಡ್ಗವನ್ನೇ ಝಳಪಳಿಸುತ್ತಾ ಮುಂದೆ ಬರುತ್ತದೆ ಎಂದು ಹೇಳಿದರು.
‘‘ಶಿವ ಸೇನಾ ಹಿಂದೆಯೂ ಹಿಂದುತ್ವವಾದಿಯಾಗಿತ್ತು, ಇವತ್ತೂ ಆಗಿದೆ ಮತ್ತು ಮುಂದೆಯೂ ಹಿಂದುತ್ವವಾದಿಯಾಗಿಯೇ ಉಳಿಯುತ್ತದೆ. ಆದರೆ ಬಿಜೆಪಿಯಂತೆ ನಾವು ರಾಜಕಾರಣಕ್ಕಾಗಿ ನಾವು ಹಿಂದುತ್ವದ ಕಾರ್ಡ್ ಪ್ರದರ್ಶಿಸುವುದಿಲ್ಲ. ದೇಶಕ್ಕೆ ಅವಶ್ಯಕತೆ ಬಿದ್ದಾಗ ನಾವು ಹಿದುತ್ವದ ಖಡ್ಗವನ್ನು ಹಿರಿದೇ ಮುಂದೆ ಬರುತ್ತೇವೆ,’’ ಎಂದು ಹೇಳಿದರು.
ಈ ವಾರದಲ್ಲಿ ಎರಡನೆ ಬಾರಿ ಶಿವ ಸೇನಾ ಮತ್ತು ಬಿಜೆಪಿ ಪಕ್ಷಗಳ ನಡುವೆ ಹಿಂದುತ್ವದ ಮೇಲೆ ಮಾತಿನ ಚಕಮಕಿ ನಡೆದಿದೆ. ಕಳೆದ ವಾರ ಶಿವ ಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನವೆಂಬರ್16ರಿಂದ ರಾಜ್ಯ ದಾದ್ಯಂತ ದೇವಸ್ಥಾನ ಮತ್ತು ಆರಾಧನೆ ನಡೆಯುವ ಎಲ್ಲ ಸ್ಥಳಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಪ್ರಕಟಿಸಿದಾಗ, ಅದು ಹಿಂದುತ್ವಕ್ಕೆ ಸಂದ ಜಯ ಅಂತ ಬಿಜೆಪಿ ಹೇಳಿತ್ತು.
ರವಿವಾರದಂದು ಬಿಜೆಪಿಯ ಕಾಮೆಂಟ್ಗೆ ಪ್ರತಿಕ್ರಿಯಿಸಿದ್ದ ರಾವತ್, ‘‘ಪ್ರಾರ್ಥನಾ ಮಂದಿರಗಳನ್ನು ನಾವು ಪುನರಾರಂಭಿಸಲು ನಿರ್ಧರಿಸಿದ್ದು ಯಾರ ಗೆಲುವೂ ಅಲ್ಲ, ಸೋಲೂ ಅಲ್ಲ. ಬಿಜೆಪಿ ನಾಯಕರು ಪ್ರಾಯಶಃ ಮರೆತಿರುವಂತೆ ಕಾಣುತ್ತಿದೆ. ದೇವಸ್ಥಾನಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಮುಚ್ಚಲಾಗಿತ್ತು. ಮೋದಿಯವರು ಲಾಕ್ಡೌನ್ ಘೋಷಿಸಿದಾಗ ದೇಶದೆಲ್ಲೆಡೆ ಪ್ರಾರ್ಥನಾ ಸ್ಥಳಗಳನ್ನು ಮುಚ್ಚಲಾಯಿತು. ಇದರಲ್ಲಿ ಬಿಜೆಪಿ ಕ್ರೆಡಿಟ್ ತೆಗೆದುಕೊಳ್ಳುವಂಥದ್ದೇನೂ ಇಲ್ಲ. ಈ ಅಂಶವನ್ನು ಪ್ರಧಾನ ಮಂತ್ರಿ ಮೋದಿಯವರು ತಮ್ಮ ಪಕ್ಷದ ಕಾರ್ಯರ್ತರಿಗೆ ವಿವರಿಸಿದರೆ ಒಳ್ಳೆಯದು ಅಂತ ಭಾವಿಸುತ್ತೇನೆ,’’ ಎಂದು ಹೇಳಿದ್ದರು.