ದೈನಿಕ ಕೊರೊನಾ ಸಂಖ್ಯೆ ಗಣನೀಯ ಇಳಿಕೆ, ನಾಲ್ಕು ತಿಂಗಳಲ್ಲಿ ಭಾರತೀಯರಿಗೆ ಸಮಾಧಾನಕರ ಸುದ್ದಿ!

ದೈನಿಕ ಕೊರೊನಾ ಸಂಖ್ಯೆ ಗಣನೀಯ ಇಳಿಕೆ, ನಾಲ್ಕು ತಿಂಗಳಲ್ಲಿ ಭಾರತೀಯರಿಗೆ ಸಮಾಧಾನಕರ ಸುದ್ದಿ!
ಸಾಂದರ್ಭಿಕ ಚಿತ್ರ

ದೆಹಲಿ:ಕೊರೊನಾ ಆತಂಕದಲ್ಲಿರುವ ಭಾರತೀಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ (ನವಂಬರ್ 17) 29,163 ಪ್ರಕರಣಗಳು ದಾಖಲಾಗುವ ಮೂಲಕ, ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾದಂತಾಗಿದೆ. ಈ ಮೂಲಕ, ಭಾರತದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 88,74,290 ತಲುಪಿದೆ. ನಿನ್ನೆ (ನವೆಂಬರ್ 16) 30,568 ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಈ ಹಿಂದೆ, ಜುಲೈ 15ಕ್ಕೂ ಮೊದಲು ಕೊವಿಡ್ ಪ್ರಕರಣಗಳ ಸಂಖ್ಯೆ 30 ಸಾವಿರಕ್ಕಿಂತ […]

sadhu srinath

|

Nov 17, 2020 | 4:02 PM

ದೆಹಲಿ:ಕೊರೊನಾ ಆತಂಕದಲ್ಲಿರುವ ಭಾರತೀಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ (ನವಂಬರ್ 17) 29,163 ಪ್ರಕರಣಗಳು ದಾಖಲಾಗುವ ಮೂಲಕ, ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾದಂತಾಗಿದೆ. ಈ ಮೂಲಕ, ಭಾರತದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 88,74,290 ತಲುಪಿದೆ. ನಿನ್ನೆ (ನವೆಂಬರ್ 16) 30,568 ಕೊರೊನಾ ಪ್ರಕರಣಗಳು ದಾಖಲಾಗಿದ್ದವು.

ಈ ಹಿಂದೆ, ಜುಲೈ 15ಕ್ಕೂ ಮೊದಲು ಕೊವಿಡ್ ಪ್ರಕರಣಗಳ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದ್ದವು. ನಂತರ ಹೊಸ ಪ್ರಕರಣಗಳ ಸಂಖ್ಯೆ ಏರಿಕೆ ಆಗಿತ್ತೇ ಹೊರತು ಇಳಿಕೆ ಕಂಡಿರಲಿಲ್ಲ. ಇದೀಗ ನಾಲ್ಕು ತಿಂಗಳ ಬಳಿಕ ಕೊವಿಡ್ ಪ್ರಕರಣಗಳು 30,000ಕ್ಕಿಂತ ಕಡಿಮೆಯಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿರುವಂತೆ, 82,90,370 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. 4,53,401 ಲಕ್ಷ ಕೊವಿಡ್ ಪ್ರಕರಣಗಳಿದ್ದು, ಸತತ ಏಳನೇ ದಿನ 5 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಕೊರೊನಾ ಪೀಡಿತರಲ್ಲಿ, ಶೇ. 93.42 ಪ್ರತಿಷತ ಜನರು ಗುಣಮುಖರಾಗುತ್ತಿದ್ದು, ಶೇ. 1.47ರಷ್ಟು ರೋಗಿಗಳು ಮರಣ ಹೊಂದುತ್ತಿದ್ದಾರೆ.

ಕೊವಿಡ್​ನಿಂದ ಮರಣ ಹೊಂದುತ್ತಿರುವವರಲ್ಲಿ ಶೇ. 70ರಷ್ಟು ಪೀಡಿತರು ಇತರ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವವರಾಗಿದ್ದಾರೆ ಎಂದೂ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Follow us on

Related Stories

Most Read Stories

Click on your DTH Provider to Add TV9 Kannada