ಈಗ ಎಲ್ಲೆಲ್ಲೂ ರಾಹುಲ್ ಗಾಂಧಿಯ ಟೀ ಶರ್ಟ್​ನದ್ದೇ ಚರ್ಚೆ, ಆ ಟೀ ಶರ್ಟ್​ ಬೆಲೆ ಎಷ್ಟು?, ಎಲ್ಲಿ ಸಿಗುತ್ತೆ ಮಾಹಿತಿ ಇಲ್ಲಿದೆ

| Updated By: ನಯನಾ ರಾಜೀವ್

Updated on: Sep 09, 2022 | 6:11 PM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಧರಿಸಿದ್ದ ಟೀ ಶರ್ಟ್​ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ರಾಹುಲ್ ಗಾಂಧಿ 41 ಸಾವಿರ ರೂಪಾಯಿ ಮೌಲ್ಯದ ಟೀ ಶರ್ಟ್ ಧರಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವಿಟರ್ ವಾರ್ ಆರಂಭವಾಗಿದೆ.

ಈಗ ಎಲ್ಲೆಲ್ಲೂ ರಾಹುಲ್ ಗಾಂಧಿಯ ಟೀ ಶರ್ಟ್​ನದ್ದೇ ಚರ್ಚೆ, ಆ ಟೀ ಶರ್ಟ್​ ಬೆಲೆ ಎಷ್ಟು?, ಎಲ್ಲಿ ಸಿಗುತ್ತೆ ಮಾಹಿತಿ ಇಲ್ಲಿದೆ
Rahul Gandhi
Follow us on

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಧರಿಸಿದ್ದ ಟೀ ಶರ್ಟ್​ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ರಾಹುಲ್ ಗಾಂಧಿ 41 ಸಾವಿರ ರೂಪಾಯಿ ಮೌಲ್ಯದ ಟೀ ಶರ್ಟ್ ಧರಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವಿಟರ್ ವಾರ್ ಆರಂಭವಾಗಿದೆ.

ರಾಹುಲ್ ಗಾಂಧಿ ಟಿ-ಶರ್ಟ್ ಧರಿಸಿದ್ದರು, ಅದರ ಬೆಲೆ 41,000 ರೂ.ಗಿಂತ ಹೆಚ್ಚು ಎಂದು ಆರೋಪಿಸಲಾಗಿದೆ, ಇದಕ್ಕಾಗಿ ಬಿಜೆಪಿ ಈಗ ಅವರನ್ನು ಗುರಿಯಾಗಿಸಿದೆ. ಬಿಳಿ ಬರ್ಬೆರಿ ಟಿ-ಶರ್ಟ್‌ ಧರಿಸಿರುವ ರಾಹುಲ್ ಗಾಂಧಿ ಚಿತ್ರವನ್ನು ಬಿಜೆಪಿ ಹಂಚಿಕೊಂಡಿದೆ ಮತ್ತು ಅದಕ್ಕೆ ಭಾರತ, ನೋಡಿ ಎಂದು ಶೀರ್ಷಿಕೆ ನೀಡಿದೆ.

ಡಿಸೈನರ್ಸ್​ಗಳು ಕೂಡ ಲಭ್ಯ
ಅತಿ ಶ್ರೀಮಂತರು ಖರೀದಿಸುವ ಆನ್​ಲೈನ್ ಸ್ಟೋರ್ ಇದಾಗಿದ್ದು, ವೆಬ್​ಸೈಟ್​ನಲ್ಲಿ ಡಿಸೈನರ್ಸ್​ಗಳು ಕೂಡ ಲಭ್ಯವಿರುತ್ತಾರೆ, ಆ ಡಿಸೈನರ್ಸ್​ಗಳನ್ನು ನೀವು ಆಯ್ಕೆ ಮಾಡಿಕೊಂಡು ಅವರು ಸಿದ್ಧಪಡಿಸಿರುವ ಬಟ್ಟೆಗಳನ್ನು ನೀವು ಕೊಳ್ಳಬಹುದಾಗಿದೆ.

ಆಯ್ಕೆಗಳೇನೇನಿವೆ?
ಡಿಸೈನರ್ಸ್​ಕೂಡ ಲಭ್ಯವಿದ್ದಾರೆ, ನೀವು ಬೇಕಿದ್ದಲ್ಲಿ ನಿಮಗೆ ಇಷ್ಟವಾದ ಡಿಸೈನರ್ ಸಿದ್ಧಪಡಿಸಿದ ಬಟ್ಟೆಗಳನ್ನು ಆರ್ಡರ್ ಮಾಡಬಹುದು. ಗ್ರೂಮಿಂಗ್, ಆಕ್ಸೆಸರೀಸ್, ಕಿಡ್ಸ್​, ವೆಲ್​ನೆಸ್, ಸೇಲ್, ಎನ್ನುವ ಕ್ಯಾಟೆಗರಿಗಳಿವೆ.

ಟೀ ಶರ್ಟ್​ ಬೆಲೆ ಎಷ್ಟು ಎಲ್ಲಿ ಸಿಗುತ್ತೆ?
ರಾಹುಲ್ ಗಾಂಧಿ ಧರಿಸಿರುವ ಬಿಳಿ ಟೀ ಶರ್ಟ್​ ಬೆಲೆ 41,257 ರೂ ಆಗಿದ್ದು, ಇದು ಬರ್​ಬೆರಿ ಆನ್​ಲೈನ್ ಶಾಪಿಂಗ್ ಕಾರ್ಟ್​ನಲ್ಲಿ ಲಭ್ಯವಿದೆ.

ವೆಬ್​ಸೈಟ್​ ಲಿಂಕ್ ಇಲ್ಲಿದೆ
ವೆಬ್​ಸೈಟ್​ ಮೂಲಕ ಖರೀದಿ ಮಾಡಬಹುದಾಗಿದೆ. https://www.saksfifthavenue.com/ ನಲ್ಲಿ ಈ Burberry ಟೀಶರ್ಟ್​ ಲಭ್ಯವಿದೆ. ಆ ಟೀ ಶರ್ಟ್​ನ ಪೂರ್ಣ ಹೆಸರು ಬರ್ಬೆರಿ ಎಡ್ಡಿ ಕೋರ್ ಪೋಲೊ.

ಕಾಂಗ್ರೆಸ್​ ಟ್ವೀಟ್​
ಭಾರತ್ ಜೋಡೋ ಯಾತ್ರೆಯಲ್ಲಿ ನೆರೆದಿದ್ದ ಜನಸಮೂಹವನ್ನು ನೋಡಿ ನಿಮಗೆ ಭಯ ಆಗುತ್ತಿದೆಯೇ?  ಸಮಸ್ಯೆಯ ಬಗ್ಗೆ ಮಾತನಾಡಿ,  ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಿ. ನೀವು ಬಟ್ಟೆಯ ಬಗ್ಗೆ ಚರ್ಚಿಸಬೇಕಾದರೆ, ಮೋದಿ ಅವರ 10 ಲಕ್ಷ ಬೆಲೆಯ ಸೂಟ್ ಮತ್ತು 1.5 ಲಕ್ಷ ರೂ. ಬೆಲೆಯ ಕನ್ನಡಕದ ಬಗ್ಗೆಯೂ ಮಾತನಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

ಬರ್​ಬೆರಿ ಟೀ ಶರ್ಟ್​ ಫೇಮಸ್​ ಆಗಿರುವುದು ಏಕೆ?
ಚೀನಾದಲ್ಲಿ ಕಾರ್ಮಿಕರ ವೆಚ್ಚ ಹೆಚ್ಚಾಗಿದೆ. ನಿರ್ವಹಣೆ, ಸಿಬ್ಬಂದಿ, ಪ್ರಚಾರ ಮತ್ತು ಇತರ ಹಲವು ಅಂಶಗಳನ್ನೂ ಒಳಗೊಂಡಿರುತ್ತದೆ. ನಂತರ ಮಾರ್ಕೆಟಿಂಗ್ ವೆಚ್ಚವಿದೆ. ಅದು ತುಂಬಾ ಕಡಿದಾದ ಆಗಿರಬಹುದು.

ಹೀಗಾಗಿ ಅದರ ಬೆಲೆಯೂ ಹೆಚ್ಚಾಗಿರಬಹುದು, ಈ ಬಟ್ಟೆಯು ಗಣ್ಯರಿಗೆ ತುಂಬಾ ಸೂಕ್ತವಾಗಿದ್ದು ಎಂದೇ ಹೇಳಬಹುದು. ಉತ್ತಮ ಗುಣಮಟ್ಟದ ಬಟ್ಟೆಯೂ ಕೂಡ ಇದಾಗಿದೆ. ಈ ಕೆಲವೊಂದು ಅಂಶವು ಬ್ರ್ಯಾಂಡ್​ ಹೆಸರನ್ನು ಹೆಚ್ಚೆಚ್ಚು ಜನಪ್ರಿಯಗೊಳಿಸುತ್ತದೆ.

 

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:33 pm, Fri, 9 September 22