ರಾಹುಲ್ ಗಾಂಧಿ ಕೆಟ್ಟ ಶಕುನ, ದೇಶದಲ್ಲಿ ಐತಿಹಾಸಿಕ ಕ್ಷಣ ಬಂದಾಗಲೆಲ್ಲಾ ಅವರು ಎದೆ ಹೊಡೆದುಕೊಳ್ಳುತ್ತಾರೆ: ಬಿಜೆಪಿ ವಕ್ತಾರ

ಯಾಕೆ ಹೀಗಾಗುತ್ತದೆ? ದೇಶವು ಪ್ರಗತಿಯಲ್ಲಿರುವಾಗ, ಶುಭ ಮುಹೂರ್ತದಲ್ಲಿ ಅವರು ಕೆಟ್ಟ ಶಕುನವಾಗಿ ಮುಂದೆ ಬರುತ್ತಾರೆ. ಹೊಸ ಸಂಸತ್ತಿನ ಕಟ್ಟಡವು ಪ್ರಜಾಪ್ರಭುತ್ವದ ಮಂದಿರವಾಗುವ ಇಂತಹ ಐತಿಹಾಸಿಕ ಕ್ಷಣವನ್ನು ಸ್ವಾಗತಿಸಲಾರದಂಥಾ ಸಣ್ಣತನವವನ್ನು ಅವರು ಹೊಂದಿದ್ದಾರೆ ಎಂದು ಭಾಟಿಯಾ ಹೇಳಿದ್ದಾರೆ.

ರಾಹುಲ್ ಗಾಂಧಿ ಕೆಟ್ಟ ಶಕುನ, ದೇಶದಲ್ಲಿ ಐತಿಹಾಸಿಕ ಕ್ಷಣ ಬಂದಾಗಲೆಲ್ಲಾ ಅವರು ಎದೆ ಹೊಡೆದುಕೊಳ್ಳುತ್ತಾರೆ: ಬಿಜೆಪಿ ವಕ್ತಾರ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: May 22, 2023 | 4:55 PM

ದೆಹಲಿ: ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಯನ್ನು, ಅಳುತ್ತಿರುವ ಕೂಸು ಎಂದು ಲೇವಡಿ ಮಾಡುವ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಎನ್‌ಡಿಟಿವಿಯೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ (Gaurav Bhatia), ದೇಶದಲ್ಲಿ ಐತಿಹಾಸಿಕ ಕ್ಷಣ ಬಂದಾಗಲೆಲ್ಲಾ ರಾಹುಲ್ ಗಾಂಧಿ ಎದೆ ಹೊಡೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ನೂತನ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕೇ ಹೊರತು ಪ್ರಧಾನಿಯಲ್ಲ ಎಂದು ರಾಹುಲ್ ಗಾಂಧಿ ಭಾನುವಾರ ಹೇಳಿದ್ದರು.

ಯಾಕೆ ಹೀಗಾಗುತ್ತದೆ? ದೇಶವು ಪ್ರಗತಿಯಲ್ಲಿರುವಾಗ, ಶುಭ ಮುಹೂರ್ತದಲ್ಲಿ ಅವರು ಕೆಟ್ಟ ಶಕುನವಾಗಿ ಮುಂದೆ ಬರುತ್ತಾರೆ. ಹೊಸ ಸಂಸತ್ತಿನ ಕಟ್ಟಡವು ಪ್ರಜಾಪ್ರಭುತ್ವದ ಮಂದಿರವಾಗುವ ಇಂತಹ ಐತಿಹಾಸಿಕ ಕ್ಷಣವನ್ನು ಸ್ವಾಗತಿಸಲಾರದಂಥಾ ಸಣ್ಣತನವವನ್ನು ಅವರು ಹೊಂದಿದ್ದಾರೆ ಎಂದು ಭಾಟಿಯಾ ಹೇಳಿದ್ದಾರೆ.

ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ಮತ್ತು ಮಾಜಿ ರಾಷ್ಟ್ರಪತಿಗಳನ್ನು ಆಹ್ವಾನಿಸದೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪದೇ ಪದೇ ಔಚಿತ್ಯಕ್ಕೆ ಅಗೌರವ ತೋರುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದು, ರಾಷ್ಟ್ರಪತಿಗಳ ಕಚೇರಿಯನ್ನು ಟೋಕನಿಸಂಗೆ ಇಳಿಸಲಾಗಿದೆ ಎಂದಿದ್ದಾರೆ.

ಮೋದಿ ಸರ್ಕಾರ ಕೇವಲ ಚುನಾವಣಾ ಕಾರಣಗಳಿಗಾಗಿ ದಲಿತ ಮತ್ತು ಬುಡಕಟ್ಟು ಸಮುದಾಯಗಳಿಂದ ಭಾರತದ ರಾಷ್ಟ್ರಪತಿಗಳ ಆಯ್ಕೆಯನ್ನು ಖಚಿತಪಡಿಸಿಕೊಂಡಂತೆ ತೋರುತ್ತಿದೆ ಎಂದು ಖರ್ಗೆ ಸರಣಿ ಟ್ವೀಟ್‌ ಮೂಲಕ ಟೀಕೆ ಮಾಡಿದ್ದಾರೆ.

ನಮಗೆ ಹೊಸ ಸಂಸತ್ ಭವನ ಬೇಕು ಎಂದು ಕಾಂಗ್ರೆಸ್ ನಾಯಕಿ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಹೇಳಿದ್ದರು ಎಂದು ಬಿಜೆಪಿ ನಾಯಕ ಗಮನ ಸೆಳೆದರು. ಕಾಂಗ್ರೆಸ್ ಅನ್ನು “ನಿಷ್ಪ್ರಯೋಜಕ” ಎಂದು ಕರೆದ ಭಾಟಿಯಾ, ಪ್ರಧಾನಿ ಮೋದಿ ತಮ್ಮ ಸ್ವಂತ ಕನಸುಗಳನ್ನು ನನಸಾಗಿಸುವಾಗಲೂ ಅವರಿಗೆ ಸಮಸ್ಯೆ ಇದೆ ಎಂದು ಹೇಳಿದರು.

ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಇದನ್ನು ಹೇಳಿದ್ದರು, ಅವರೇ ಅದರ ಬಗ್ಗೆ ಕನಸು ಕಾಣುತ್ತಿದ್ದರು. ನಂತರ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ಅವರಿಗೆ ಏನೇನೂ ಮಾಡಲು ಆಗಿಲ್ಲ. ಅವರು ತುಂಬಾ ನಿಷ್ಪ್ರಯೋಜಕರು. ಪ್ರಧಾನಿ ಮೋದಿ ಅವರ ಕನಸುಗಳನ್ನು ನನಸಾಗಿಸುವಾಗ ಇದು ದೇಶದ ಹಿತಾಸಕ್ತಿಯಾಗಿದೆ. ಆಗ ಅವರು ಎದೆ ಬಡಿದುಕೊಳ್ಳಲು ಶುರು ಮಾಡುತ್ತಾರೆ ಎಂದಿದ್ದಾರೆ. ಮೇ 28 ರಂದು ಹೊಸ ಸಂಸತ್ ಕಟ್ಟಡದ ಉದ್ಘಾಟನೆಯು ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರ ಜನ್ಮ ದಿನಾಚರಣೆಯ ಹೊತ್ತಲ್ಲೇ ನಡೆಯುತ್ತಿದೆ ಎಂದು ಹಲವಾರು ವಿರೋಧ ಪಕ್ಷಗಳು ಅದರ ಮೇಲೆ ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದೆ: ಸರಣಿ ಟ್ವೀಟ್ ಮೂಲಕ ಕಿಡಿಕಾರಿದ ಖರ್ಗೆ

ಇದು ದೇಶದ ಸಂಸ್ಥಾಪಕರಿಗೆ ಮಾಡಿದ “ಸಂಪೂರ್ಣ ಅವಮಾನ” ಎಂದು ಕಾಂಗ್ರೆಸ್ ಬಣ್ಣಿಸಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಭಾಟಿಯಾ, ವೀರ್ ಸಾವರ್ಕರ್ ಪ್ರತಿಯೊಬ್ಬ ಭಾರತೀಯನ ಹೆಮ್ಮೆ, ದಿನಾಂಕವನ್ನು ಪ್ರಶ್ನಿಸುವವರು, ವೀರ್ ಸಾವರ್ಕರ್ ಅವರ ಕಾಲಿನ ಧೂಳಿಗೆ ಸಹ ಯೋಗ್ಯರಲ್ಲ, ಅವರು ಅಮುಖ್ಯರು ಎಂದಿದ್ದಾರೆ..

ರಾಷ್ಟ್ರಪತಿಗಳ ಬದಲು ಪ್ರಧಾನಿ ಮೋದಿ ಸಂಸತ್ ಭವನವನ್ನು ಏಕೆ ಉದ್ಘಾಟಿಸುತ್ತಿದ್ದಾರೆ ಎಂದು ಹಲವು ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದ್ದಾರೆ. ಆರ್‌ಜೆಡಿ ನಾಯಕ ಮನೋಜ್ ಕುಮಾರ್ ಝಾ, ಸಿಪಿಐ ನಾಯಕ ಡಿ ರಾಜಾ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಕೇಂದ್ರದ ವಿರುದ್ಧ ಕಟುವಾದ ಟೀಕೆಗಳನ್ನು ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ