ಬಿಜೆಪಿಯು ಮುಂಬರುವ ಲೋಕಸಭೆ ಚುನಾವಣೆ(Lok Sabha Election)ಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಕಾಲಿದಳದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಅಲ್ಲಿಗೆ ಪಂಜಾಬ್‌ನಲ್ಲಿ ಬಹುತೇಕ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸುವುದು ಪಕ್ಕಾ ಆಗಿದೆ.
ಪಂಜಾಬ್‌ನ 13 ಸ್ಥಾನಗಳಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸುನೀಲ್ ಜಾಖರ್ ಘೋಷಿಸಿದ್ದಾರೆ. ಜನರ ಮತ್ತು ಕಾರ್ಯಕರ್ತರ ಅಭಿಪ್ರಾಯದ ನಂತರ ಬಿಜೆಪಿ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದಿದ್ದಾರೆ.
ಭಾರತದ ಸದೃಢ ಪ್ರಗತಿಗೆ ಪಂಜಾಬ್‌ನ ಶಾಂತಿ ಮತ್ತು ನೆಮ್ಮದಿಯೊಂದೇ ದಾರಿ ಎಂದ ಅವರು, ರಾಜ್ಯದ ಎಲ್ಲ ವರ್ಗಗಳ ಅಭ್ಯುದಯಕ್ಕಾಗಿ ಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ನಿರ್ಧರಿಸಿದೆ.
ಶಿರೋಮಣಿ ಅಕಾಲಿ ದಳವು ಎನ್‌ಡಿಎಯಲ್ಲಿ ಬಿಜೆಪಿಯ ಹಳೆಯ ಮಿತ್ರವಾಗಿತ್ತು, ಆದರೆ ರೈತರ ಚಳವಳಿಯ ನಂತರ ಈ ಪಕ್ಷವು ಸೆಪ್ಟೆಂಬರ್ 2020 ರಲ್ಲಿ ಬಿಜೆಪಿಯನ್ನು ತೊರೆದಿದೆ. ಈಗ ಬದಲಾದ ಪರಿಸ್ಥಿತಿಯಲ್ಲಿ, ಪಕ್ಷವು ಬಿಜೆಪಿಯೊಂದಿಗೆ ಚುನಾವಣೆಯನ್ನು ಎದುರಿಸಲು ಬಯಸಿದೆ, ಆದರೆ ಅದು ಸಾಧ್ಯವಾಗಲಿಲ್ಲ.
ಮತ್ತಷ್ಟು ಓದಿ: Tv9 Survey: ಲೋಕ ಸಭಾ ಚುನಾವಣೆಯಲ್ಲಿ ಯಾರ ಕೈ ಹಿಡಿಯಲಿದ್ದಾನೆ ಮತದಾರ ಪ್ರಭು, ಇಲ್ಲಿದೆ ಸಮೀಕ್ಷೆ ವಿವರ
ಈ ಹಿಂದೆ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳದ ಮೈತ್ರಿ ಬಹುತೇಕ ಖಚಿತ ಎಂದು ಪರಿಗಣಿಸಲಾಗಿತ್ತು. ಇದಕ್ಕಾಗಿ ಎಸ್‌ಎಡಿ ಮುಖ್ಯಸ್ಥ ಸುಖಬೀರ್ ಬಾದಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಬೇಕಿತ್ತು. ಈ ಬಗ್ಗೆ ಬಿಜೆಪಿ ಸೂಚನೆ ನೀಡಿತ್ತು.
ಪಂಜಾಬ್‌ನಲ್ಲಿ ಬಿಜೆಪಿ ಮತ್ತು ಅಕಾಲಿದಳ (ಎಸ್‌ಎಡಿ) ನಡುವಿನ ಮೈತ್ರಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಊಹಾಪೋಹಗಳು ಕೊನೆಗೊಂಡಂತಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Tue, 26 March 24