Tv9 Survey: ಲೋಕ ಸಭಾ ಚುನಾವಣೆಯಲ್ಲಿ ಯಾರ ಕೈ ಹಿಡಿಯಲಿದ್ದಾನೆ ಮತದಾರ ಪ್ರಭು, ಇಲ್ಲಿದೆ ಸಮೀಕ್ಷೆ ವಿವರ
ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬಕ್ಕೆ ಮುಹೂರ್ತ ಫಿಕ್ಸ್ ಆಗಿದೆ.. ಏಪ್ರಿಲ್ 19 ರಿಂದ 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಆದ್ರೆ ಚುನಾವಣೆಗೂ ಮುನ್ನವೇ ಮತದಾತರ ಪ್ರಭುಗಳ ಒಲವು ಯಾರ ಪರವಾಗಿದೆ ಅನ್ನೋದು TV9, ಪೀಪಲ್ಸ್ ಇನ್ ಸೈಟ್, ಪೋಲ್ ಸ್ಟ್ರಾಟ್ ನಡೆಸಿದ ಬೃಹತ್ ಸಮೀಕ್ಷೆಯಲ್ಲಿ ಹೊರ ಬಂದಿದೆ.
ಏಪ್ರಿಲ್ 19 ರಿಂದ 7 ಹಂತದಲ್ಲಿ ಲೋಕ ಸಭಾ ಚುನಾವಣೆ ನಡೆಯಲಿದೆ (Lok Sabha Election). ಸದ್ಯ TV9, ಪೀಪಲ್ಸ್ ಇನ್ ಸೈಟ್, ಪೋಲ್ ಸ್ಟ್ರಾಟ್ ನಡೆಸಿದ ಬೃಹತ್ ಸಮೀಕ್ಷೆಯಲ್ಲಿ ಮತದಾರ ಪ್ರಭು ಯಾರ ಮೇಲೆ ಹೆಚ್ಚು ಒಲವು ಇಟ್ಟುಕೊಂಡಿದ್ದಾನೆ ಎಂಬ ಅಂಶ ಹೊರ ಬಂದಿದೆ. ಫೆಬ್ರವರಿ 15ರಿಂದ ಮಾರ್ಚ್ 15ರವಗೆ ನಡೆದ ಸಮೀಕ್ಷೆಯಲ್ಲಿ ದೇಶದ 20 ಲಕ್ಷ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಲೋಕಸಭೆಯ 543 ಕ್ಷೇತ್ರ ಹಾಗೂ 4 ಸಾವಿರದ 123 ವಿಧಾನಸಭಾ ಕ್ಷೇತ್ರಗಳ ಮತದಾರರಿಂದ IVR ಅಂದ್ರೆ ಫೋನ್ ಮೂಲಕ ಮಾತನಾಡಿ ಡೇಟಾ ಸಂಗ್ರಹಿಸಲಾಗಿದೆ.
ಲೋಕಸಭೆ-ಮೆಗಾ ಸರ್ವೆ-2024 (ಉತ್ತರ ಪ್ರದೇಶ(80))
NDA | 73 |
INDIA | 07 |
OTH | 00 |
ಸಮೀಕ್ಷೆ ಪ್ರಕಾರ ಉತ್ತರ ಪ್ರದೇಶದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಮತದಾರರು ಜೈ ಹೋ ಎಂದಿದ್ದಾರೆ. 80 ಕ್ಷೇತ್ರಗಳು ಇರುವ ಉತ್ತರ ಪ್ರದೇಶದಲ್ಲಿ ಬರೋಬ್ಬರಿ 73 ಕ್ಷೇತ್ರಗಳಲ್ಲಿ ಎನ್ಡಿಎ ಭರ್ಜರಿ ಗೆಲುವು ದಾಖಲಿಸಲಿದೆ ಅಂತ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಆದ್ರೆ INDIA ಮೈತ್ರಿಕೂಟ ಕೇವಲ 7 ಕ್ಷೇತ್ರಗಳಲ್ಲಿ ಗೆಲ್ಲುತ್ತೆ ಅಂತ ಸಮೀಕ್ಷೆ ಹೇಳ್ತಿದೆ.
ಲೋಕಸಭೆ-ಮೆಗಾ ಸರ್ವೆ-2024 ಪಂಜಾಬ್ (13)
AAP | 11 |
ಬಿಜೆಪಿ | 02 |
ಇತರೆ | 00 |
ಇನ್ನು, ಪಂಜಾಬ್ ವಿಷ್ಯಕ್ಕೆ ಬಂದ್ರೆ ಕೇಜ್ರಿವಾಲ್ ನೇತೃತ್ವದ ಆಪ್ಗೆ ಮತದಾರರು ಮನಸೋತಿದ್ದಾರೆ. ಇರುವ 13 ಕ್ಷೇತ್ರಗಳಲ್ಲಿ AAP ಬರೋಬ್ಬರಿ 11 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ ಅಂತ ಸಮೀಕ್ಷೆ ಹೇಳ್ತಿದೆ.. ಅತ್ತ ಬಿಜೆಪಿ ಕೇವಲ2 ಸ್ಥಾನಗಳಲ್ಲಿ ಮಾತ್ರ ಗೆಲುವು ದಾಖಲಿಸು ಸಾಧ್ಯತೆ ಇದೆ.
ಲೋಕಸಭೆ-ಮೆಗಾ ಸರ್ವೆ-2024 ಗುಜರಾತ್ (26)
ಬಿಜೆಪಿ | 26 |
ಕಾಂಗ್ರೆಸ್ | 00 |
ಇನ್ನು, ಪ್ರಧಾನಿ ಮೋದಿ ತವರು ರಾಜ್ಯ, ಗುಜರಾತ್ನಲ್ಲಿ ಬಿಜೆಪಿ ವೈಟ್ ವಾಷ್ ಮಾಡಿದೆ. ಅಂದ್ರೆ ಗುಜರಾತ್ನಲ್ಲಿರುವ 26 ಲೋಕಸಭೆ ಕ್ಷೇತ್ರದಲ್ಲೂ ಕೇಸರಿ ಪಡೆ ಜಯಕ್ಕೆ ಮುತ್ತಿಕ್ಕಲಿದೆ ಎಂದು ಸಮೀಕ್ಷೆ ತಿಳಿಸುತ್ತಿದೆ.
ಲೋಕಸಭೆ-ಮೆಗಾ ಸರ್ವೆ-2024 ಕರ್ನಾಟಕ (28)
BJP | 22 |
CONG | 05 |
JDS | 01 |
ಇನ್ನು ಕರ್ನಾಟಕದಲ್ಲೂ ಬಿಜೆಪಿ ಮೇಲೆ ಮತದಾರರು ಒಲುವು ತೋರಿದ್ದಾರೆ ಅನ್ನೋದು ಸಮೀಕ್ಷೆ ಮೂಲಕ ಗೊತ್ತಾಗಿದೆ. ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 22 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ ಅಂತ ಸರ್ವೆ ಹೇಳ್ತಿದೆ. ಇನ್ನು 5 ಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಒಂದು ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿ ಜಯ ಗಳಿಸುತ್ತಾರೆ ಅನ್ನೋದು ಸಮೀಕ್ಷೆ ಮೂಲಕ ಗೊತ್ತಾಗಿದೆ.
ಹೀಗೆ ದೇಶದ 31 ರಾಜ್ಯ ಹಾಗೂ 8 ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಮೆಗಾ ಸರ್ವೇಯಲ್ಲಿ ಮತದಾರ ನುಡಿದ ಭವಿಷ್ಯ ಮತ್ತೊಂದು ಇತಿಹಾಸ ನಿರ್ಮಾಣ ಮಾಡುವ ಮುನ್ಸೂಚನೆ ನೀಡ್ತಿದೆ ಯಾಕಂದ್ರೆ, ಲೋಕಸಭೆಯ ಒಟ್ಟು 543 ಕ್ಷೇತ್ರಗಳಲ್ಲಿ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಈ ಬಾರಿ 376 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಅಂತಾ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಉಳಿದಂತೆ ಇಂಡಿಯಾ ಮೈತ್ರಿಕೂಟ ಶತಕದ ಗಡಿ ದಾಟಿ 133 ಸ್ಥಾನಗಳಿಸಲಿದೆಯಂತೆ ಇನ್ನು, 34 ಕ್ಷೇತ್ರಗಳಲ್ಲಿ ಇತರೆ ಪಕ್ಷಗಳು ಗೆಲ್ಲಲಿವೆ ಅಂತ ಸರ್ವೆ ಹೇಳ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ