ಮುಂಬೈ: ಶಿವಸೇನಾ ಕಾರ್ಯಕರ್ತರು ಜಲ್ಗಾಂವ್ ಜಿಲ್ಲೆಯಲ್ಲಿರುವ ಬಿಜೆಪಿ ಕಚೇರಿಯೊಳಗೆ ಕೋಳಿಗಳನ್ನು ಬಿಟ್ಟ ನಂತರ ಬಿಜೆಪಿ ಕಾರ್ಯಕರ್ತರ ಗುಂಪೊಂದು ಅರ್ಚಕರನ್ನು ಕರೆಸಿ ಕಚೇರಿಯಲ್ಲಿ ಶನಿವಾರ “ಶುದ್ಧೀಕರಣ” ಸಮಾರಂಭವನ್ನು ನಡೆಸಿತು. ಶಿವಸೇನಾದ ಕ್ರಮವು ಪಕ್ಷದ ಭಾವನೆಗಳನ್ನು ಘಾಸಿಗೊಳಿಸಿದೆ. ಶಿವಸೇನಾ ಸದಸ್ಯರು ನಮ್ಮ ಪವಿತ್ರ ಶ್ರಾವಣ ಮಾಸದಲ್ಲಿ ನಮ್ಮ ಕೋಳಿಗಳನ್ನು ಬಿಟ್ಟಿದ್ದು ಇದು ಆವರಣವನ್ನು ಕಲುಷಿತಗೊಳಿಸಿದೆ ಬಿಜೆಪಿ ಕಾರ್ಯಕರ್ತ ದೀಪಕ್ ಸೂರ್ಯವಂಶಿ ಹೇಳಿದ್ದಾರೆ. ಶುದ್ಧೀಕರಣ ಸಮಾರಂಭವು ಯಜ್ಞವನ್ನೊಳಗೊಂಡಿದೆ.
ಎಂಎಸ್‌ಎಂಇಗಳ ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಬುಧವಾರ ಬಂಧಿಸಿದ ನಂತರ ಶಿವಸೇನಾ ಮತ್ತು ಬಿಜೆಪಿ ಕಾರ್ಯಕರ್ತರು ರಾಜ್ಯದಾದ್ಯಂತ ಹಲವು ಕಡೆ ಸಂಘರ್ಷವುಂಟಾಗಿದೆ. ಪ್ರತಿಭಟನೆಗಳನ್ನು ನಡೆದಿದ್ದು ಉಭಯಪಕ್ಷಗಳು ಪರಸ್ಪರ ಲೇವಡಿಯ ಪೋಸ್ಟರ್ ಹಾಕಿದ್ದರು. ಸೇನೆಯ ಕಾರ್ಯಕರ್ತರು ರಾಣೆಯನ್ನು “ಕೊಂಬ್ಡಿ ಚೋರ್” ಅಥವಾ ಕೋಳಿ ಕಳ್ಳ ಎಂದು ಕರೆಯುವ ಬ್ಯಾನರ್‌ಗಳನ್ನು ಹಾಕಿದ್ದು ಪುಣೆ ಮತ್ತು ಜಲಗಾಂವ್‌ನ ಬಿಜೆಪಿ ಕಚೇರಿಗಳಲ್ಲಿ ಕೋಳಿಗಳನ್ನು ಬಿಟ್ಟಿದ್ದರು.
ಈ ವಾರದ ಆರಂಭದಲ್ಲಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿರುವ ಬಾಲ್ ಠಾಕ್ರೆ ರಾಷ್ಟ್ರೀಯ ಸ್ಮಾರಕಕ್ಕೆ ಜನ್ ಆಶೀರ್ವಾದ ಯಾತ್ರೆಯಲ್ಲಿ ಗೌರವ ಸಲ್ಲಿಸಲು ರಾಣೆ ಭೇಟಿ ನೀಡಿದ ನಂತರ ಶಿವ ಸೈನಿಕರು ಅತೃಪ್ತರಾಗಿದ್ದರು. ಭೇಟಿಯ ಸ್ವಲ್ಪ ಸಮಯದ ನಂತರ, ಸೇನಾ ಸದಸ್ಯರು ಗೋಮೂತ್ರ ಬಳಸಿ ಆವರಣವನ್ನು ‘ಶುದ್ಧೀಕರಿಸಿದರು’.
ಶಿವಸೇನೆಯಿಂದ ಹೊರಹಾಕಲ್ಪಟ್ಟ ರಾಣೆ ಪಕ್ಷಕ್ಕೆ ಮತ್ತು ಅದರ ಉಸ್ತುವಾರಿ ಬಾಲ್ ಠಾಕ್ರೆಗೆ ನೋವುಂಟು ಮಾಡಿದ್ದರಿಂದ ಸ್ಮಾರಕಕ್ಕೆ ಭೇಟಿ ನೀಡಲು ನೈತಿಕ ಹಕ್ಕಿಲ್ಲ ಎಂದು ಶಿವಸೇನಾ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಚಿವ ನಾರಾಯಣ್ ರಾಣೆ ಜವಾಬ್ದಾರಿಯುತವಾಗಿ ವರ್ತಿಸಬೇಕಿತ್ತು: ಅಜಿತ್ ಪವಾರ್
ಇದನ್ನೂ ಓದಿ: ‘ನಾನು ಉದ್ಧವ್ ಠಾಕ್ರೆ ಬಗ್ಗೆ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ’-ತಮ್ಮ ಮಾತಿಗೆ ಬದ್ಧವಾಗಿ ನಿಂತ ನಾರಾಯಣ್ ರಾಣೆ
(BJP workers performed a shuddikaran ceremony at the party office in Jalgaon after Shiv Sena activists released chickens there)