ಸಚಿವ ನಾರಾಯಣ್ ರಾಣೆ ಜವಾಬ್ದಾರಿಯುತವಾಗಿ ವರ್ತಿಸಬೇಕಿತ್ತು: ಅಜಿತ್ ಪವಾರ್

Narayan Rane ಪುಣೆಯ ಕೌನ್ಸಿಲ್ ಹಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ರಾಣೆ ಪ್ರಚೋದನಕಾರಿ ನಡವಳಿಕೆಯಲ್ಲಿ ಪಾಲ್ಗೊಳ್ಳುವ ಬದಲು ತನ್ನ "ಜನ್ ಆಶೀರ್ವಾದ ಯಾತ್ರೆ" ಯತ್ತ ಗಮನ ಹರಿಸಬೇಕಿತ್ತು ಎಂದು ಹೇಳಿದರು.

ಸಚಿವ ನಾರಾಯಣ್ ರಾಣೆ ಜವಾಬ್ದಾರಿಯುತವಾಗಿ ವರ್ತಿಸಬೇಕಿತ್ತು: ಅಜಿತ್ ಪವಾರ್
ಅಜಿತ್ ಪವಾರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 28, 2021 | 1:00 PM

ಮುಂಬೈ: ಪ್ರಮಾಣವಚನ ಸ್ವೀಕರಿಸಿದ ಸಚಿವರಾಗಿರುವ ನಾರಾಯಣ್ ರಾಣೆ (Narayan Rane) ಜವಾಬ್ದಾರಿಯುತವಾಗಿ ವರ್ತಿಸಿದ್ದರೆ, ಅವರ ಬಂಧನದ ಮತ್ತು ರಾಜ್ಯದಾದ್ಯಂತ ಬಿಜೆಪಿ ಮತ್ತು ಶಿವಸೇನಾ ಕಾರ್ಯಕರ್ತರ ನಡುವಿನ ಹಿಂಸಾತ್ಮಕ ಸಂಘರ್ಷ ತಪ್ಪಿಸಬಹುದಿತ್ತು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ  ಅಜಿತ್ ಪವಾರ್ (Ajit Pawar) ಶುಕ್ರವಾರ ಹೇಳಿದ್ದಾರೆ.

ಪುಣೆಯ ಕೌನ್ಸಿಲ್ ಹಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ರಾಣೆ ಪ್ರಚೋದನಕಾರಿ ನಡವಳಿಕೆಯಲ್ಲಿ ಪಾಲ್ಗೊಳ್ಳುವ ಬದಲು ತನ್ನ “ಜನ್ ಆಶೀರ್ವಾದ ಯಾತ್ರೆ” ಯತ್ತ ಗಮನ ಹರಿಸಬೇಕಿತ್ತು ಎಂದು ಹೇಳಿದರು. ಅವರನ್ನು ಮಂತ್ರಿಗಳನ್ನಾಗಿ ಮಾಡಿದವರು ರಾಜ್ಯಾದ್ಯಂತ ಸುತ್ತುವಂತೆ ಆದೇಶಿಸಿದ್ದಾರೆ. ಈಗ, ಅವರು ಅನಗತ್ಯ ಪ್ರಚೋದನೆಗಳಲ್ಲಿ ಪಾಲ್ಗೊಳ್ಳುವ ಬದಲು ಅದನ್ನು ಮಾಡುವತ್ತ ಗಮನ ಹರಿಸಬೇಕು. ಅವರು ಪ್ರಮಾಣವಚನ ಸ್ವೀಕರಿಸಿಸಚಿವರಾಗಿದ್ದಾರೆ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅವರು ಹಾಗೆ ಮಾಡಿದ್ದರೆ ಇಡೀ ಪ್ರಸಂಗವನ್ನು ತಪ್ಪಿಸಬಹುದಿತ್ತು, ”ಪವಾರ್ ಹೇಳಿದರು.

ರಾಣೆ ಅವರನ್ನು ತಕ್ಷಣವೇ ಬಂಧಿಸಿ ಅಗತ್ಯ ಬಂದರೆ ಬಲಪ್ರಯೋಗ ಮಾಡಿ ಎಂದು ಶಿವಸೇನಾ ನಾಯಕ ಅನಿಲ್ ಪರಬ್ ರಣಗಿರಿ ಪೊಲೀಸರಿಗೆ ಸೂಚಿಸುತ್ತಿರುವ ವಿಡಿಯೊ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಪವಾರ್ “ಎಲ್ಲಾ ಕಾನೂನು ಪ್ರಕ್ರಿಯೆಗಳು ನಡೆದ ನಂತರವೇ ಬಂಧನವಾಯಿತು. ಆತನ (ರಾಣೆ) ಬೆಂಬಲಿಗರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು ಅದನ್ನು ತಿರಸ್ಕರಿಸಲಾಯಿತು. ನಾನು ವಿಡಿಯೊಗಳಳನ್ನು ನೋಡಿಲ್ಲ, ಆದರೆ ರತ್ನಗಿರಿ ಜಿಲ್ಲೆಯ ಗಾರ್ಡಿಯನ್ ಮಂತ್ರಿಯಾಗಿ, ಅವರು (ಪರಬ್) ಮಾರ್ಗದರ್ಶನ ಪಡೆಯಲು ಪೋಲಿಸರನ್ನು ಸಂಪರ್ಕಿಸಿರಬೇಕು ಮತ್ತು ಅವರು ಕಾನೂನನ್ನು ಪಾಲಿಸುವಂತೆ ಹೇಳಿದ್ದಾರೆ ಎಂದಿದ್ದಾರೆ.

ನಾನು ಉದ್ಧವ್ ಠಾಕ್ರೆಯ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದಿದ್ದ ಸಚಿವ ನಾರಾಯಣ್ ರಾಣೆ

ಮಹಾರಾಷ್ಟ್ರದ  ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾರತದ ಸ್ವಾತಂತ್ರ್ಯದ ವರ್ಷವನ್ನು ತಪ್ಪಾಗಿ ಹೇಳಿದಾಗ ಅವರ ಕಪಾಳಕ್ಕೆ ಬಾರಿಸಬೇಕು ಎಂದು ಅನಿಸಿತ್ತು ಎಂದು ಕೇಂದ್ರ ಸಚಿವ ನಾರಾಯಣ್ ರಾಣೆ  (Narayan Rane) ಹೇಳಿದ್ದರು.

“ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡು. ಅವರು ಎಷ್ಟನೇ ವರ್ಷದ ಸ್ವಾತಂತ್ರ್ಯ ಎಂದು ಕೇಳಲು ಹಿಂದೆ ಬಾಗಿದರು. ನಾನು ಅಲ್ಲಿರುತ್ತಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ರಾಯಗಡದಲ್ಲಿ ಸೋಮವಾರ ಜನ್ ಆಶೀರ್ವಾದ್ ಯಾತ್ರೆಯಲ್ಲಿ ಮಾತನಾಡಿದ ರಾಣೆ ಹೇಳಿದ್ದಾರೆ.

ರಾಣೆ ಅವರ ಹೇಳಿಕೆಗೆ ಶಿವಸೇನಾ ತೀವ್ರವಾಗಿ ಪ್ರತಿಕ್ರಿಯಿಸಿದೆ. ಶಿವಸೇನಾ ಕಾರ್ಯಕರ್ತರು ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಹಲವಾರು ಪೋಸ್ಟರ್‌ಗಳನ್ನು ಹಾಕಿದ್ದು ರಾಣೆಯನ್ನು ‘ಕೊಂಬಿಡಿ ಚೋರ್’ (ಕೋಳಿ ಕಳ್ಳ) ಎಂದು ಕರೆದಿದ್ದಾರೆ. ಐದು ದಶಕಗಳ ಹಿಂದೆ ಚೆಂಬೂರಿನಲ್ಲಿ ಅವರು ನಡೆಸುತ್ತಿದ್ದ ಕೋಳಿ ಅಂಗಡಿಯ ಉಲ್ಲೇಖಿಸಿ ಶಿವಸೇನಾ ಈ ರೀತಿ ಹೇಳಿದೆ.

ಶಿವಸೇನಾದ ರತ್ನಗಿರಿ-ಸಿಂಧುದುರ್ಗದ ಸಂಸದ ವಿನಾಯಕ್ ರಾವುತ್ ಅವರು ರಾಣೆ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು. “ಬಿಜೆಪಿ ನಾಯಕತ್ವವನ್ನು ಮೆಚ್ಚಿಸಲು ರಾಣೆ ಶಿವಸೇನಾ ಮತ್ತು ಅದರ ನಾಯಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಮೋದಿ ನೇತೃತ್ವದ ಸಚಿವಾಲಯಕ್ಕೆ ಸೇರ್ಪಡೆಗೊಂಡ ನಂತರ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡರು. ಮೋದಿ ಅವರಿಗೆ ಬಾಗಿಲು ತೋರಿಸಬೇಕು” ಎಂದು ರಾವುತ್ ಹೇಳಿದ್ದಾರೆ.

ಇದನ್ನೂ ಓದಿ: ‘ನಾನು ಉದ್ಧವ್​ ಠಾಕ್ರೆ ಬಗ್ಗೆ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ’-ತಮ್ಮ ಮಾತಿಗೆ ಬದ್ಧವಾಗಿ ನಿಂತ ನಾರಾಯಣ್ ರಾಣೆ​

ಇದನ್ನೂ ಓದಿ: ಕೇಂದ್ರ ಸಚಿವ ನಾರಾಯಣ ರಾಣೆಗೆ ರಾತ್ರಿ ಜಾಮೀನು ನೀಡಿದ ಕೋರ್ಟ್​; ಷರತ್ತು ಅನ್ವಯ

(Narayan Rane would have behaved responsibly like a minister says Maharashtra Deputy Chief Ajit Pawar)

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್