ಸಚಿವ ಈಶ್ವರಪ್ಪ ಹರಕುಬಾಯಿ ದಾಸ, ನಾಗಪುರ ವಿವಿ ದ್ವೇಷ, ಅಸೂಯೆ ತುಂಬಿ ರಸ್ತೆಗೆ ಬಿಡುತ್ತಾರೆ: ಬಿ.ಕೆ.ಹರಿಪ್ರಸಾದ್

| Updated By: ಆಯೇಷಾ ಬಾನು

Updated on: Aug 11, 2021 | 12:38 PM

ಈಶ್ವರಪ್ಪ ಮೊನ್ನೆ ಹೇಳಿಕೆ ಕೊಟ್ಟಾಗ ಅಮಾವಾಸ್ಯೆ ಇರಬಹುದೆನಿಸಿತ್ತು. ಮತ್ತೆ ಹೇಳಿಕೆ ಕೊಟ್ಟಾಗ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಅನಿಸಿತು. ಈಶ್ವರಪ್ಪ ಅವರದ್ದು ಇದು ಹೊಸದಲ್ಲ. ಬಿ.ಎಸ್. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಬಗ್ಗೆ ಏನು ಮಾತಾಡಿದರು ಅನ್ನೋದು ಗೊತ್ತಿದೆ -

ಸಚಿವ ಈಶ್ವರಪ್ಪ ಹರಕುಬಾಯಿ ದಾಸ, ನಾಗಪುರ ವಿವಿ ದ್ವೇಷ, ಅಸೂಯೆ ತುಂಬಿ ರಸ್ತೆಗೆ ಬಿಡುತ್ತಾರೆ: ಬಿ.ಕೆ.ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್
Follow us on

ದೆಹಲಿ: ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಹರಕುಬಾಯಿ ದಾಸ ಎಂದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad) ವ್ಯಂಗ್ಯ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಹರಿಪ್ರಸಾದ್, ಈಶ್ವರಪ್ಪ ಮೊನ್ನೆ ಹೇಳಿಕೆ ಕೊಟ್ಟಾಗ ಅಮಾವಾಸ್ಯೆ ಇರಬಹುದೆನಿಸಿತ್ತು. ಮತ್ತೆ ಹೇಳಿಕೆ ಕೊಟ್ಟಾಗ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಅನಿಸಿತು. ಈಶ್ವರಪ್ಪ ಅವರದ್ದು ಇದು ಹೊಸದಲ್ಲ. ಬಿ.ಎಸ್. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಬಗ್ಗೆ ಏನು ಮಾತಾಡಿದರು ಅನ್ನೋದು ಗೊತ್ತಿದೆ. ಈಶ್ವರಪ್ಪ ನಾಗಪುರ ವಿವಿ ಸದಸ್ಯ ಅಂಥ ಒಪ್ಪಿಕೊಂಡಿದ್ದಾರೆ. ನಾಗಪುರ ವಿವಿ ದ್ವೇಷ, ಅಸೂಯೆ ತುಂಬಿ ರಸ್ತೆಗೆ ಬಿಡುತ್ತೆ. ನಾವು ಸಂವಿಧಾನಬದ್ಧ ವಿವಿಯ ಸದಸ್ಯರು. ಶೌಚಾಲಯ ನಿರ್ಮಿಸಿದ್ದು ತಮ್ಮ ಸಾಧನೆ ಎಂದು ಹೇಳ್ತಾರೆ. ಶೌಚಾಲಯದ ಸಾಧನೆಗೆ ಪ್ರಧಾನಿ ಮೋದಿ ಹೆಸರಿಡಿ ಅಂದೆ ಅದಕ್ಕೆ ಸಚಿವ ಈಶ್ವರಪ್ಪಗೆ ಅಷ್ಟೊಂದು ಕಸಿವಿಸಿ ಯಾಕೆ? ಎಂದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ.

ಸಿಟ್ಟಿನ ಭರದಲ್ಲಿ ಕಾಂಗ್ರೆಸ್ ವಿರುದ್ಧ ಅವಾಚ್ಯ ಬೈಗುಳ ಪದ ಬಳಸಿದ ಈಶ್ವರಪ್ಪ
ಇತ್ತೀಚೆಗಷ್ಟೇ ಬಿಜೆಪಿಯ ಒಬ್ಬನೇ ಒಬ್ಬ ಕಾರ್ಯಕರ್ತನ ಮೈಮುಟ್ಟಿ ನೋಡಲಿ, ಅದರ ಪರಿಣಾಮವೇ ಬೇರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಕೆ ಎಸ್ ಈಶ್ವರಪ್ಪ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿಧಾನಸೌಧದಲ್ಲಿ ಕಾಂಗ್ರೆಸ್‌ನವರ ಬಗ್ಗೆ ಅವಾಚ್ಯ ಶಬ್ದ ಬಳಸಿ ಮಾತನಾಡಿದ ಸಚಿವ ಈಶ್ವರಪ್ಪ ಕಟುವಾದ ಅವಾಚ್ಯ ಬೈಗುಳ ಪದ ಪ್ರಯೋಗ ಮಾಡಿದ್ದರು. ಈ ವೇಳೆ ಆದಷ್ಟು ಬೇಗ ಈಶ್ವರಪ್ಪರನ್ನು ನಿಮ್ಹಾನ್ಸ್‌ಗೆ ಸೇರಿಸಬೇಕು ಎಂದು ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದರು.

ಆದಷ್ಟು ಬೇಗ ಈಶ್ವರಪ್ಪರನ್ನು ನಿಮ್ಹಾನ್ಸ್‌ಗೆ ಸೇರಿಸಬೇಕು
ಸಚಿವ ಕೆ.ಎಸ್.ಈಶ್ವರಪ್ಪ ಸಿಎಂ ಆಗಲು ಪ್ರಯತ್ನಿಸಿದ್ದರು. ಕೊನೆಗೆ ಡಿಸಿಎಂ ಆಗುವುದಕ್ಕೂ ಆಗಿಲ್ಲ. ಹೀಗಾಗಿ ಸಚಿವ ಕೆ.ಎಸ್.ಈಶ್ವರಪ್ಪಗೆ ಹುಚ್ಚು ಹಿಡಿದಿದೆ. ಆದಷ್ಟು ಬೇಗ ಈಶ್ವರಪ್ಪರನ್ನು ನಿಮ್ಹಾನ್ಸ್‌ಗೆ ಸೇರಿಸಬೇಕು. ಕೆ.ಎಸ್.ಈಶ್ವರಪ್ಪಗೆ ಆರೋಗ್ಯ ಸಚಿವರು ಚಿಕಿತ್ಸೆ ಕೊಡಿಸಬೇಕು ಎಂದು ಬೆಂಗಳೂರಿನಲ್ಲಿ ಬಿ.ಕೆ.ಹರಿಪ್ರಸಾದ್ ಹೇಳಿದ್ದರು. ಈಶ್ವರಪ್ಪ ನೋಟ್ ಎಣಿಸುವ ಮಷೀನ್ ಇಟ್ಟುಕೊಂಡಿದ್ದಾರೆ. ಆದರೂ ಈಶ್ವರಪ್ಪ ಸಿಎಂ, ಡಿಸಿಎಂ ಆಗುವುದಕ್ಕೆ ಆಗಲಿಲ್ಲ. ಹೀಗಾಗಿ K.S.ಈಶ್ವರಪ್ಪ ಹತಾಶೆಯಿಂದ ಮಾತನಾಡುತ್ತಿದ್ದರು. ಈಶ್ವರಪ್ಪರನ್ನು ಸಚಿವ ಸಂಪುಟದಿಂದ ಉಚ್ಚಾಟನೆ ಮಾಡಬೇಕು ಎಂದು ಬೆಂಗಳೂರಿನಲ್ಲಿ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದರು. ಇಂದು ಮತ್ತೆ ದೆಹಲಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹರಕುಬಾಯಿ ದಾಸ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನವರ ಬಗ್ಗೆ ಬಳಸಿದ ಅವಾಚ್ಯ ಪದ ಹಿಂಪಡೆದ ಸಚಿವ ಕೆ ಎಸ್ ಈಶ್ವರಪ್ಪ

Published On - 12:28 pm, Wed, 11 August 21