ಬಿಹಾರದ ಪತ್ರಕರ್ತ, ಆರ್‌ಟಿಐ ಕಾರ್ಯಕರ್ತನ ಮೃತದೇಹ ಸುಟ್ಟು ರಸ್ತೆ ಬದಿ ಎಸೆದ ಸ್ಥಿತಿಯಲ್ಲಿ ಪತ್ತೆ

ಬುದ್ದಿನಾಥ್ ಝಾ ಅಲಿಯಾಸ್ ಅವಿನಾಶ್ ಝಾ, ಸ್ಥಳೀಯ ಸುದ್ದಿ ಪೋರ್ಟಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರಾಗಿದ್ದರು. ಅವರು "ನಕಲಿ" ಎಂದು ಆರೋಪಿಸಿರುವ ವೈದ್ಯಕೀಯ ಚಿಕಿತ್ಸಾಲಯಗಳನ್ನು ಹೆಸರಿಸುವ ಫೇಸ್‌ಬುಕ್ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ ಎರಡು ದಿನಗಳ ನಂತರ  ನಾಪತ್ತೆಯಾಗಿದ್ದರು.

ಬಿಹಾರದ ಪತ್ರಕರ್ತ, ಆರ್‌ಟಿಐ ಕಾರ್ಯಕರ್ತನ ಮೃತದೇಹ ಸುಟ್ಟು ರಸ್ತೆ ಬದಿ ಎಸೆದ ಸ್ಥಿತಿಯಲ್ಲಿ ಪತ್ತೆ
ಬುದ್ದಿನಾಥ್ ಝಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 14, 2021 | 11:56 AM

ಪಟನಾ: ನಾಲ್ಕು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 22 ವರ್ಷದ ಪತ್ರಕರ್ತ ಮತ್ತು ಆರ್‌ಟಿಐ ಕಾರ್ಯಕರ್ತನ (RTI activist) ಮೃತದೇಹ ಶುಕ್ರವಾರ ಸಂಜೆ ಬಿಹಾರದ ಮಧುಬನಿ ಜಿಲ್ಲೆಯ ಹಳ್ಳಿಯೊಂದರ ಬಳಿ ಸುಟ್ಟು ರಸ್ತೆ ಬದಿಯಲ್ಲಿ ಎಸೆಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬುದ್ದಿನಾಥ್ ಝಾ (Buddhinath Jha) ಅಲಿಯಾಸ್ ಅವಿನಾಶ್ ಝಾ (Avinash Jha) ಸ್ಥಳೀಯ ಸುದ್ದಿ ಪೋರ್ಟಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರಾಗಿದ್ದರು. ಅವರು “ನಕಲಿ” ಎಂದು ಆರೋಪಿಸಿರುವ ವೈದ್ಯಕೀಯ ಚಿಕಿತ್ಸಾಲಯಗಳನ್ನು ಹೆಸರಿಸುವ ಫೇಸ್‌ಬುಕ್ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ ಎರಡು ದಿನಗಳ ನಂತರ  ನಾಪತ್ತೆಯಾಗಿದ್ದರು. ಝಾ ಅವರ ಫೇಸ್​​ಬುಕ್ ಪೋಸ್ಟ್ ನಿಂದಾಗಿ ಕೆಲವು ನಕಲಿ ಕ್ಲಿನಿಕ್‌ಗಳನ್ನು ಮುಚ್ಚಲ್ಪಟ್ಟಿದ್ದು ಮತ್ತು ಇತರರಿಗೆ ಭಾರಿ ದಂಡವನ್ನು ವಿಧಿಸಲಾಗಿತ್ತು. ನಕಲಿ ಕ್ಲಿನಿಕ್ ಬಗ್ಗೆ ವರದಿ ಮಾಡಿದಾಗ ಬುದ್ಧಿನಾಥ್ ಅವರಿಗೆ ಹಲವಾರು ಬೆದರಿಕೆಗಳು ಮತ್ತು ಲಕ್ಷ ಹಣ ಲಂಚ ಕೊಡಲು ಜನ ಮುಂದೆ ಬಂದಿದ್ದರು. ಆದರೆ ಈ ಪತ್ರಕರ್ತ ಯಾವುದಕ್ಕೂ ಬಗ್ಗಲಿಲ್ಲ.  ಅವರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡರು. ಬೆನಿಪಟ್ಟಿಯ ಲೋಹಿಯಾ ಚೌಕ್ ಬಳಿಯ ಅವರ ಮನೆಯ ಬಳಿ ಅಳವಡಿಸಲಾದ ಸಿಸಿಟಿವಿ  ದೃಶ್ಯಗಳಲ್ಲಿ ಅವರು ಕಾಣಿಸಿದ್ದಾರೆ. ಇವರ ಮನೆ ಪಟ್ಟಣದ ಪೊಲೀಸ್ ಠಾಣೆಯಿಂದ 400 ಮೀಟರ್‌ಗಿಂತ ಕಡಿಮೆ ದೂರದಲ್ಲಿದೆ. ರಾತ್ರಿ 9 ರಿಂದ ಹಲವಾರು ಬಾರಿ ಕಿರಿದಾದ ಲೇನ್‌ನಲ್ಲಿರುವ ತನ್ನ ಮನೆಯಿಂದ ಹೊರಗೆ ಬರುವುದು ಮತ್ತು ಹತ್ತಿರದ ಮುಖ್ಯ ರಸ್ತೆಯಲ್ಲಿ ತನ್ನ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು ಸಿಸಿಟಿವಿಯಲ್ಲಿದೆ. ಫೋನ್‌ನಲ್ಲಿ ಮಾತನಾಡುವಾಗ ಅವನು ತನ್ನ ಕ್ಲಿನಿಕ್‌ಗೆ (ಅವನ ಮನೆಯ ಅದೇ ಲೇನ್‌ನಲ್ಲಿ) ಹಲವಾರು ಬಾರಿ ಹೋಗುವುದು ಸಿಸಿಟಿವಿಯಲ್ಲಿ ಕಾಣಿಸಿದೆ. ಕೊನೆಯ ಬಾರಿಗೆ ಅವರು ರಾತ್ರಿ 9.58 ಕ್ಕೆ ಕುತ್ತಿಗೆಗೆ ಹಳದಿ ಸ್ಕಾರ್ಫ್ ಧರಿಸಿ ಮನೆಯಿಂದ ಹೊರಟರು. ಝಾ ಲೋಹಿಯಾ ಚೌಕ್‌, ಇನ್ನೊಂದು ಮನೆ ಮತ್ತು ಬೆನಿಪಟ್ಟಿ ಪೋಲೀಸ್‌ ಸ್ಟೇಷನ್‌ ದಾಟಿ ನಡೆಯುತ್ತಿರುವುದು ಸಿಸಿಟಿವಿಯಲ್ಲಿದೆ. ಇದು ರಾತ್ರಿ 10.05 ರಿಂದ 101.10 ರ ನಡುವೆ ಅವರನ್ನು , ಸ್ಥಳೀಯ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ನೋಡಿದ್ದಾರೆ. ಅದರ ನಂತರ ಝಾ ಕಾಣಿಸಿಲ್ಲ. ಮರುದಿನ ಅವರ ಮನೆಯವರು ಎದ್ದಾಗ ಝಾ ಅಲ್ಲಿರಲಿಲ್ಲ.

ಅವರ ಮೋಟಾರ್ ಸೈಕಲ್ ಇನ್ನೂ ಮನೆಯಲ್ಲಿಯೇ ಇತ್ತು, ಆದರೆ ಅವರ ಕ್ಲಿನಿಕ್ ತೆರೆದಿತ್ತು ಮತ್ತು ಅವರ ಲ್ಯಾಪ್‌ಟಾಪ್ ಆನ್ ಆಗಿತ್ತು. ಬುದ್ದಿನಾಥ್ ಅವರು ಮಂಗಳವಾರ ತಡರಾತ್ರಿ ಅಥವಾ ಬುಧವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದು, ವಾಪಸ್ ಬರುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಅವನು ಹಿಂತಿರುಗಲಿಲ್ಲ.

ಆದಾಗ್ಯೂ, ದಿನ ಕಳೆದಂತೆ ಅವರ ಕುಟುಂಬವು ಹೆಚ್ಚು ಆತಂಕಕ್ಕೊಳಗಾಯಿತು ಮತ್ತು ಅವರ ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡಿದ ಪೊಲೀಸರಿಗೆ ಲಿಖಿತ ದೂರು ನೀಡಲಾಯಿತು.

ಬೆನಿಪಟ್ಟಿಯಿಂದ ಪಶ್ಚಿಮಕ್ಕೆ ಸುಮಾರು 5 ಕಿ.ಮೀ ದೂರದಲ್ಲಿರುವ ಬೇಟೌನ್ ಗ್ರಾಮದಲ್ಲಿ ಬುಧವಾರ ಬೆಳಗ್ಗೆ 9 ಗಂಟೆಗೆ ಸ್ವಿಚ್ ಆನ್ ಮಾಡಿರುವುದು ಪತ್ತೆಯಾಗಿದೆ. ಅಲ್ಲಿಗೆ ತಲುಪಿದ ಪೊಲೀಸರು ಹೆಚ್ಚಿನ ಸುಳಿವುಗಳನ್ನು ಹುಡುಕಲು ವಿಫಲರಾದರು. ಗುರುವಾರವೂ ಬುದ್ಧಿನಾಥನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ನವೆಂಬರ್ 12 ಶುಕ್ರವಾರ ಬುದ್ದಿನಾಥ್ ಅವರ ಸೋದರಸಂಬಂಧಿ ಬಿಜೆ ವಿಕಾಸ್ ಅವರಿಗೆ ಬೆಟೌನ್ ಗ್ರಾಮದ ಮೂಲಕ ಹಾದುಹೋಗುವಾಗ ಹೆದ್ದಾರಿಯಲ್ಲಿ ಶವ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿತ್ತು.

ಕೆಲ ಸಂಬಂಧಿಕರು ಮತ್ತು ಅಧಿಕಾರಿಗಳು ಅಲ್ಲಿಗೆ ಧಾವಿಸಿದ್ದು, ಬೆರಳಿನಲ್ಲಿದ್ದ ಉಂಗುರ, ಕಾಲಿನ ಗುರುತು ಹಾಗೂ ಕುತ್ತಿಗೆಯಲ್ಲಿದ್ದ ಚೈನ್ ನೋಡಿ ಬುದ್ಧಿನಾಥನದ್ದು ಎಂದು ಗುರುತಿಸಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮೃತದೇಹವನ್ನು ತಕ್ಷಣ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಇಂದು ಅಂತ್ಯಕ್ರಿಯೆ ನಡೆದಿದೆ.

ಈ ಆಘಾತಕಾರಿ ಘಟನೆಯು ಪ್ರದೇಶದಲ್ಲಿ ಭಾರೀ ಆಕ್ರೋಶವನ್ನು ಉಂಟುಮಾಡಿದೆ, ಅವರ ಮನೆಯು ಪೊಲೀಸ್ ಠಾಣೆಯಿಂದ ಕೆಲವೇ ನೂರು ಮೀಟರ್ ದೂರದಲ್ಲಿರುವಾಗ ಅವರನ್ನು ಹೇಗೆ ಅಪಹರಿಸಲಾಗಿದೆ ಎಂದು ಹಲವರು ಕೇಳುತ್ತಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: IRCTC ಶೀಘ್ರದಲ್ಲೇ ಕೆಲವು ರೈಲುಗಳಲ್ಲಿ ಸಸ್ಯಾಹಾರಿ ಆಹಾರ ಮಾತ್ರ ನೀಡಲಿದೆ ಭಾರತೀಯ ರೈಲ್ವೆ, ಏನಿದು ಸಾತ್ವಿಕ್ ಪ್ರಮಾಣಪತ್ರ?

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು