ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ್ದವ ಅರೆಸ್ಟ್​; ಏಪ್ರಿಲ್​ 16ರಂದು ಭಾರತಕ್ಕೆ ತಲುಪಲಿದೆ ಕಾರ್ತೀಕ್​ ಮೃತದೇಹ

ಕಾರ್ತೀಕ್​ ವಾಸುದೇವ್​ ಜನವರಿಯಲ್ಲಿ ಕೆನಡಾಕ್ಕೆ ಹೋಗಿದ್ದರು. ಸೆನೆಕಾ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಉದ್ಯಮ ವಿಷಯದಲ್ಲಿ ಎಂಬಿಎ ಓದುತ್ತಿದ್ದರು.  ಹಾಗೇ, ಮೆಕ್ಸಿಕನ್​ ರೆಸ್ಟೋರೆಂಟ್​ನಲ್ಲಿ ಪಾರ್ಟ್​ಟೈಂ ಕೆಲಸವನ್ನೂ ಮಾಡುತ್ತಿದ್ದರು.

ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ್ದವ ಅರೆಸ್ಟ್​; ಏಪ್ರಿಲ್​ 16ರಂದು ಭಾರತಕ್ಕೆ ತಲುಪಲಿದೆ ಕಾರ್ತೀಕ್​ ಮೃತದೇಹ
ಕಾರ್ತೀಕ್ ವಾಸುದೇವ್​
Follow us
TV9 Web
| Updated By: Lakshmi Hegde

Updated on: Apr 15, 2022 | 7:07 PM

ಕೆನಡಾದಲ್ಲಿ ಹತ್ಯೆಯಾಗಿರುವ ಭಾರತ ಮೂಲದ ವಿದ್ಯಾರ್ಥಿಯ ಮೃತದೇಹ ನಾಳೆ ಸ್ವದೇಶಕ್ಕೆ ತಲುಪಲಿದೆ. ಕಾರ್ತೀಕ್ ವಾಸುದೇವ್ ಉತ್ತರ ಪ್ರದೇಶದ ಘಾಜಿಯಾಬಾದ್​ನವನಾಗಿದ್ದು, ಏಪ್ರಿಲ್ 9ರಂದು ಟೊರಂಟೋದ ಗ್ಲೆನ್​ ರಸ್ತೆಯಲ್ಲಿರುವ ಶೆಬೋರ್ನ್​ ಸಬ್​ವೇ (ಸುರಂಗಮಾರ್ಗ) ಸ್ಟೇಶನ್​​ನ ಪ್ರವೇಶದ್ವಾರದಲ್ಲಿ ಹತ್ಯೆಗೀಡಾಗಿದ್ದಾರೆ. ಕಾರ್ತೀಕ್ ಮೃತದೇಹ ಏಪ್ರಿಲ್​ 16ರಂದು ದೆಹಲಿಗೆ ತಲುಪಲಿದೆ ಎಂದು ತಿಳಿಸಿದ್ದಾಗಿ ಕುಟುಂಬದವರು ಹೇಳಿದ್ದಾರೆ. ಅಂದಹಾಗೇ, ವಿದ್ಯಾರ್ಥಿಗೆ ಗುಂಡು ಹೊಡೆದ ಆರೋಪಿಯನ್ನು ಟೊರಂಟೊ ಪೊಲೀಸರು ಬಂಧಿಸಿದ್ದು, ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. ಒಂದು ಸಲ ವಿಚಾರಣೆಯೂ ನಡೆದಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್​ 20ಕ್ಕೆ ಮುಂದೂಡಲಾಗಿದೆ ಎಂದು ಕಾರ್ತಿಕ್​ ವಾಸುದೇವ್​ ತಂದೆ ಹಿತೇಶ್ ವಾಸುದೇವ್ ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ. 

ಕಾರ್ತೀಕ್​ ವಾಸುದೇವ್​ ಜನವರಿಯಲ್ಲಿ ಕೆನಡಾಕ್ಕೆ ಹೋಗಿದ್ದರು. ಸೆನೆಕಾ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಉದ್ಯಮ ವಿಷಯದಲ್ಲಿ ಎಂಬಿಎ ಓದುತ್ತಿದ್ದರು.  ಹಾಗೇ, ಮೆಕ್ಸಿಕನ್​ ರೆಸ್ಟೋರೆಂಟ್​ನಲ್ಲಿ ಪಾರ್ಟ್​ಟೈಂ ಕೆಲಸವನ್ನೂ ಮಾಡುತ್ತಿದ್ದರು. ಏಪ್ರಿಲ್​ 9ರಂದು ಕೆಲಸಕ್ಕೆ ತೆರಳುತ್ತಿದ್ದಾಗ ಹತ್ಯೆಗೀಡಾಗಿದ್ದಾರೆ. ಇವರನ್ನು ಕೊಂದ ಆರೋಪಿಯನ್ನು 39ವರ್ಷದ ರಿಚರ್ಡ್​ ಜೊನಾಥನ್​ ಎಡ್ವಿನ್​ ಎಂದು ಗುರುತಿಸಲಾಗಿದೆ. ಈತ ಏಪ್ರಿಲ್​ 5ಂದು ಇನ್ನೊಬ್ಬ ವ್ಯಕ್ತಿಯನ್ನು ಕೊಂದಿರುವ ಶಂಕೆಯೂ ವ್ಯಕ್ತವಾಗಿದೆ ಎಂದು ಟೊರಂಟೊ ಪೊಲೀಸರು ತಿಳಿಸಿದ್ದಾರೆ.

ಕಾರ್ತೀಕ್​ ವಾಸುದೇವ್ ಸಾವಿಗೆ ಟೊರಂಟೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿ, ಸಂತಾಪ ಸೂಚಿಸಿತ್ತು. ನಾವು ಕಾರ್ತೀಕ್ ವಾಸುದೇವ್​ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಕಾರ್ತೀಕ್​ ಶವವನ್ನು ಭಾರತಕ್ಕೆ ಕಳಿಸುವ ಪ್ರಯತ್ನಗಳನ್ನು ಈಗಾಗಲೇ ಪ್ರಾರಂಭಿಸಿದ್ದೇವೆ. ಕುಟುಂಬಕ್ಕೆ ಸಮಾಧಾನ ಹೇಳಿದ್ದೇವೆ ಎಂದು ತಿಳಿಸಿತ್ತು. ರಾಯಭಾರಿ ಕಚೇರಿ ಮಾಡಿರುವ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡಿದ್ದ ಎಸ್​.ಜೈಶಂಕರ್​, ಕಾರ್ತೀಕ್​ ಸಾವಿನ ದುರಂತದಿಂದ ನಿಜಕ್ಕೂ ನೋವಾಗಿದೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದಿದ್ದರು.

ಇದನ್ನೂ ಓದಿ: Rain Updates: ದಕ್ಷಿಣ ಭಾರತ ಸೇರಿ ಈ ರಾಜ್ಯಗಳಲ್ಲಿ 5 ದಿನ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ