ಬಾಯ್ಸ್ ಲಾಕರ್ ರೂಂ‌ ಚಾಟ್​ನಲ್ಲಿ ಪಾಲ್ಗೊಂಡಿದ್ದ ಬಾಲಕ ಆತ್ಮಹತ್ಯೆ ಮಾಡಿಕೊಂಡ!

|

Updated on: May 06, 2020 | 6:21 PM

ದೆಹಲಿ: ಬಾಯ್ಸ್ ಲಾಕರ್ ರೂಮ್‌ ಚಾಟ್‌ನಲ್ಲಿ ಭಾಗಿ ಆಗಿದ್ದ ಪ್ರಕರಣದಲ್ಲಿ ‌14 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಾಲಕ ಚಾಟ್‌ನಲ್ಲಿ ಭಾಗಿ ಆಗಿದ್ದ. ಹರಿಯಾಣದ ಗುರುಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಹಾರಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಯ್ಸ್ ಲಾಕರ್ ರೂಮ್‌ ಚಾಟ್‌ ಪ್ರಕರಣ ದೇಶಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಹದಿಹರೆಯದ ಬಾಲಕರು ಇಂಥಾ ಕುಕೃತ್ಯಗಳಲ್ಲಿ ಭಾಗಿಯಾಗುತ್ತರುವ ಬಗ್ಗೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿತ್ತು. ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕನ ಹೆಸರನ್ನು ಓರ್ವ […]

ಬಾಯ್ಸ್ ಲಾಕರ್ ರೂಂ‌ ಚಾಟ್​ನಲ್ಲಿ ಪಾಲ್ಗೊಂಡಿದ್ದ ಬಾಲಕ ಆತ್ಮಹತ್ಯೆ ಮಾಡಿಕೊಂಡ!
Follow us on

ದೆಹಲಿ: ಬಾಯ್ಸ್ ಲಾಕರ್ ರೂಮ್‌ ಚಾಟ್‌ನಲ್ಲಿ ಭಾಗಿ ಆಗಿದ್ದ ಪ್ರಕರಣದಲ್ಲಿ ‌14 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಾಲಕ ಚಾಟ್‌ನಲ್ಲಿ ಭಾಗಿ ಆಗಿದ್ದ. ಹರಿಯಾಣದ ಗುರುಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಹಾರಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಾಯ್ಸ್ ಲಾಕರ್ ರೂಮ್‌ ಚಾಟ್‌ ಪ್ರಕರಣ ದೇಶಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಹದಿಹರೆಯದ ಬಾಲಕರು ಇಂಥಾ ಕುಕೃತ್ಯಗಳಲ್ಲಿ ಭಾಗಿಯಾಗುತ್ತರುವ ಬಗ್ಗೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿತ್ತು. ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕನ ಹೆಸರನ್ನು ಓರ್ವ ವಿದ್ಯಾರ್ಥಿನಿ‌ ಬಹಿರಂಗವಾಗಿ ಹೇಳಿದ್ದಳು. ಎರಡು ವರ್ಷದ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದ ಎಂದೂ ವಿದ್ಯಾರ್ಥಿನಿ ಆರೋಪಿಸಿದ್ದಳು. ಆತ್ಮಹತ್ಯೆ ಮಾಡಿಕೊಂಡವನು ಡೆತ್ ನೋಟ್ ಬರೆದಿಟ್ಟಿಲ್ಲ‌. ಆತನ ಪೋನ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಾಟಿಂಗ್ ಅಂಶಗಳ ಬಗ್ಗೆ ಪೊಲೀಸ್ ತನಿಖೆ ಮುಂದುವರಿದಿದೆ.

Published On - 6:19 pm, Wed, 6 May 20