Thalassery Bomb Blast: ಕೇರಳದ ಕಣ್ಣೂರಿನಲ್ಲಿ ಬಾಂಬ್ ಸ್ಫೋಟ, ಒಬ್ಬರಿಗೆ ಗಂಭೀರ ಗಾಯ

| Updated By: ರಶ್ಮಿ ಕಲ್ಲಕಟ್ಟ

Updated on: Jan 13, 2023 | 1:29 PM

ಕೇರಳದ ಕಣ್ಣೂರಿನ ತಲಶ್ಶೇರಿಯ ಮನೆಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಬಾಂಬ್ ಸ್ಫೋಟದಲ್ಲಿ ಒಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Thalassery Bomb Blast: ಕೇರಳದ ಕಣ್ಣೂರಿನಲ್ಲಿ ಬಾಂಬ್ ಸ್ಫೋಟ, ಒಬ್ಬರಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
Follow us on

ಕಣ್ಣೂರು:  ಕೇರಳದ ಕಣ್ಣೂರು ಜಿಲ್ಲೆಯ ತಲಶ್ಶೇರಿಯಲ್ಲಿ (Thalassery) ಯುವಕನೊಬ್ಬ ಒಂಟಿಯಾಗಿ ವಾಸಿಸುತ್ತಿದ್ದ ಮನೆಯೊಳಗೆ ಬಾಂಬ್ ಸ್ಫೋಟಗೊಂಡಿದೆ (Bomb Blast). ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ತಲಶ್ಶೇರಿ ರೈಲ್ವೆ ನಿಲ್ದಾಣದ ರಸ್ತೆಯ ಲೋಟಸ್ ಆಡಿಟೋರಿಯಂ ಬಳಿಯ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದೆ. ಭಾರೀ ಸ್ಫೋಟದ ರಭಸಕ್ಕೆ ಯುವಕನ ತಲೆಗೆ ಗಾಯಗಳಾಗಿವೆ. ನಡಮ್ಮಲ್ ಮನೆಯಲ್ಲಿ ನಡೆದ ಸ್ಫೋಟದಲ್ಲಿ ಜಿತಿನ್ (25) ಗಾಯಗೊಂಡಿದ್ದಾರೆ. ಪೊಲೀಸರು ಜಿತಿನ್​​​ನ್ನು  ತಲಶ್ಶೇರಿ ಜನರಲ್ ಆಸ್ಪತ್ರೆಗೆ ಕರೆತಂದಿದ್ದಾರೆ. ನಂತರ ತಜ್ಞರ ಚಿಕಿತ್ಸೆಗಾಗಿ ಪರಿಯಾರಂ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಜಿತಿನ್ ಅವರ ಕೈ, ಬೆನ್ನು ಮತ್ತು ಕಾಲಿಗೆ ಗಾಯವಾಗಿದೆ. ಸ್ಫೋಟದಲ್ಲಿ ಮನೆಯ ಕೋಣೆಗೆ ಹಾನಿಯಾಗಿದೆ. ಕಿಟಕಿ ಗಾಜುಗಳು ಮತ್ತು ಫ್ಯಾನ್ ಒಡೆದು ಹೋಗಿವೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅದೊಂದು ಸ್ಟೀಲ್ ಬಾಂಬ್ ಎಂದು ಪೊಲೀಸರು ತಿಳಿಸಿದ್ದಾರೆ ಎಂಧು ಮಾಧ್ಯಮಮ್ ಪತ್ರಿಕೆ ವರದಿ ಮಾಡಿದೆ.

ಹೆಚ್ಚಿನ ಬಾಂಬ್ ಗಳಿದ್ದರೆ ಪರಿಶೀಲಿಸುವುದಾಗಿ ಸ್ಥಳಕ್ಕೆ ಭೇಟಿ ನೀಡಿದ ಕಣ್ಣೂರು ನಗರ ಪೊಲೀಸ್ ಮುಖ್ಯಸ್ಥ ಕೆ. ಅಜಿತ್ ಕುಮಾರ್ ಹೇಳಿದರು. ಬಾಂಬ್-ಶ್ವಾನದಳವು ಸ್ಫೋಟ ಸಂಭವಿಸಿದ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿವರವಾದ ಶೋಧವನ್ನು ನಡೆಸಿತು. ಯುವಕನ ಗಾಯ ಗಂಭೀರವಾಗಿಲ್ಲ. ಮನೆಯಲ್ಲಿ ಬಾಂಬ್ ಇಟ್ಟುಕೊಂಡಿರುವ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Fri, 13 January 23