ದೆಹಲಿ ಡಿಸೆಂಬರ್ 26: ಇಸ್ರೇಲ್ ರಾಯಭಾರ ಕಚೇರಿ (Israeli Embassy) ಬಳಿ ಬಾಂಬ್ ಸ್ಫೋಟ (Bomb Blast) ಸಂಭವಿಸಿದೆ ಎಂಬ ಕರೆ ಬಂದ ಹಿನ್ನಲೆಯಲ್ಲಿ ದೆಹಲಿ ಪೊಲೀಸರು (Delhi Police) ಮತ್ತು ಅಗ್ನಿಶಾಮಕ ಸೇವೆಗಳು ತಕ್ಷಣವೇ ದೌಡಾಯಿಸಿವೆ. ಆದರೆ ಅಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ದೆಹಲಿ ಅಗ್ನಿಶಾಮಕ ಸೇವೆಗೆ ಇಂದು ಸಂಜೆ ಚಾಣಕ್ಯಪುರಿ ಪ್ರದೇಶದಲ್ಲಿ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ನಡೆದಿರುವುದಾಗಿ ಕರೆ ಬಂದಿದೆ. “ಇಲ್ಲಿಯವರೆಗೆ ಸ್ಥಳದಲ್ಲಿ ಏನೂ ಪತ್ತೆಯಾಗಿಲ್ಲ” ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗಾರ್ಗ್ ಹೇಳಿದ್ದಾರೆ.
ರಾಯಭಾರ ಕಚೇರಿಯ ಸಿಬ್ಬಂದಿಗಳಿಗೆ ಏನೂ ಆಗಿಲ್ಲ. ಅವರು ಪ್ರಕರಣದ ತನಿಖೆಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
VIDEO | Delhi Police teams arrive at the spot after receiving information of an explosion near the Israel Embassy. More details are awaited. pic.twitter.com/FqSjRSW7uB
— Press Trust of India (@PTI_News) December 26, 2023
ಪ್ರಾಥಮಿಕ ವರದಿಗಳ ಪ್ರಕಾರ, ಸುತ್ತಮುತ್ತಲಿನ ಜನರು ದೊಡ್ಡ ಶಬ್ದವನ್ನು ಕೇಳಿದರು. ಅಗ್ನಿಶಾಮಕ ದಳದ ಮಾಹಿತಿಯಂತೆ ಅವರ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಅಧಿಕಾರಿಗಳು ಇನ್ನೂ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾರೆ.
ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಮಧ್ಯೆ ಇದು ಸಂಭವಿಸುತ್ತದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಶುರುವಾದ ಯುದ್ಧದಲ್ಲಿ, 1200 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್ಗೆ 2 ಕೋಟಿ ಚಂದಾದಾರರು
2021 ರಲ್ಲಿ, ದೆಹಲಿಯ ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ಕಡಿಮೆ ತೀವ್ರತೆಯ ಸ್ಫೋಟವು ಪ್ರಪಂಚದಾದ್ಯಂತ ಆಘಾತವನ್ನು ಉಂಟುಮಾಡಿತು. ರಾಷ್ಟ್ರೀಯ ತನಿಖಾ ಸಂಸ್ಥೆ ಇನ್ನೂ ಪ್ರಕರಣದ ತನಿಖೆ ನಡೆಸುತ್ತಿದೆ.
ಕಡಿಮೆ-ತೀವ್ರತೆಯ ಸುಧಾರಿತ ಸಾಧನವು ಜನವರಿ 29, 2021 ರಂದು ಜಿಂದಾಲ್ ಹೌಸ್ ಬಳಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಬಂಗಲೆ ಸಂಖ್ಯೆ 5 ರ ಸಮೀಪ ಸಂಜೆ 5 ಗಂಟೆಯ ಸುಮಾರಿಗೆ ಸ್ಫೋಟವಾಗಿತ್ತು. ಈ ಸ್ಫೋಟದಲ್ಲಿ ಯಾವುದೇ ಸಾವು ನೋವು ಸಂಭವಿಸದೇ ಇದ್ದರೂ , ಹತ್ತಿರದಲ್ಲಿ ನಿಲ್ಲಿಸಿದ್ದ ಮೂರು ಕಾರುಗಳಿಗೆ ಹಾನಿಯಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:41 pm, Tue, 26 December 23