AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆ ಗೂಗಲ್ ಕಚೇರಿಗೆ ಬಾಂಬ್ ಬೆದರಿಕೆ, ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸಿದ ಮುಂಬೈ ಪೊಲೀಸ್

ಕರೆ ಮಾಡಿದ ವ್ಯಕ್ತಿ ಹೈದರಾಬಾದ್ ಮೂಲದ ಪನಯಂ ಶಿವಾನಂದ್ ಎಂದು ಗುರುತಿಸಲಾಗಿದ್ದು, ಮುಂಬೈ ಬಿಕೆಸಿ ಕಚೇರಿಗೆ ಈ ಕರೆ ಬಂದಿತ್ತು. ಮುಂಬೈ ಪೊಲೀಸರ ಪ್ರಕಾರ, ಕರೆ ಮಾಡಿದ ವ್ಯಕ್ತಿ ಪುಣೆಯ ಗೂಗಲ್ ಕಚೇರಿಯಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದಾನೆ.

ಪುಣೆ ಗೂಗಲ್ ಕಚೇರಿಗೆ ಬಾಂಬ್ ಬೆದರಿಕೆ, ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸಿದ ಮುಂಬೈ ಪೊಲೀಸ್
ಗೂಗಲ್ ಕಚೇರಿ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Feb 13, 2023 | 12:37 PM

Share

ಪುಣೆ: ಪುಣೆಯ ಗೂಗಲ್(Google) ಕಚೇರಿಯಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಕರೆ (Bomb threat) ಮಾಡಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು(Mumbai Police) ಬಂಧಿಸಿದ್ದಾರೆ. ಕರೆ ಮಾಡಿದ ವ್ಯಕ್ತಿ ಹೈದರಾಬಾದ್ ಮೂಲದ ಪನಯಂ ಶಿವಾನಂದ್ ಎಂದು ಗುರುತಿಸಲಾಗಿದ್ದು, ಮುಂಬೈ ಬಿಕೆಸಿ ಕಚೇರಿಗೆ ಈ ಕರೆ ಬಂದಿತ್ತು. ಮುಂಬೈ ಪೊಲೀಸರ ಪ್ರಕಾರ, ಕರೆ ಮಾಡಿದ ವ್ಯಕ್ತಿ ಪುಣೆಯ ಗೂಗಲ್ ಕಚೇರಿಯಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಕರೆ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ಪನಯಂ ಶಿವಾನಂದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಪುಣೆಯ ಮುಂಡ್ವಾ ಪ್ರದೇಶದ ಬಹುಮಹಡಿ ವಾಣಿಜ್ಯ ಕಟ್ಟಡದ 11 ನೇ ಮಹಡಿಯಲ್ಲಿರುವ ಕಚೇರಿಗೆ ಭಾನುವಾರ ತಡರಾತ್ರಿ ಕಚೇರಿ ಆವರಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಕರೆ ಬಂದಿದೆ ಎಂದು ಉಪ ಪೊಲೀಸ್ ಆಯುಕ್ತ (Zone V) ವಿಕ್ರಾಂತ್ ದೇಶಮುಖ್ ಹೇಳಿದ್ದಾರೆ.

ಬೆದರಿಕೆ ಕರೆ ಬಗ್ಗೆ ಮಾಹಿತಿ ಪಡೆದ ಕೂಡಲೇ ಪೊಲೀಸರು ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್‌ನೊಂದಿಗೆ ಗೂಗಲ್‌ನ ಪುಣೆ ಕಚೇರಿಯನ್ನು ತಲುಪಿ ವ್ಯಾಪಕ ಶೋಧ ನಡೆಸಿದೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: Oommen Chandy: ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಅನಾರೋಗ್ಯ; ಬೆಂಗಳೂರಿನ ಆಸ್ಪತ್ರೆಗೆ ರವಾನೆ

“ಕರೆ ನಂತರ ಸುಳ್ಳು ಎಂದು ತಿಳಿದುಬಂದಿದೆ. ಕರೆ ಮಾಡಿದವರನ್ನು ಹೈದರಾಬಾದ್‌ನಿಂದ ಪತ್ತೆಹಚ್ಚಲಾಗಿದೆ ಮತ್ತು ಬಂಧಿಸಲಾಗಿದೆ. ಅವರು ಮದ್ಯದ ಅಮಲಿನಲ್ಲಿ ಈ ಕರೆ ಮಾಡಿದ್ದಾರೆ” ಎಂದು ಅಧಿಕಾರಿ ಹೇಳಿದ್ದಾರೆ.

ಪನಯಂ ಶಿವಾನಂದ್  ಬೆದರಿಕೆ ಕರೆ ಮಾಡಲು ಪ್ರೇರೇಪಣೆ ಏನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ