ಜಿಎಸ್‌ಟಿ ಕುರಿತು ಕಾನೂನು ರೂಪಿಸಲು ಕೇಂದ್ರ ಮತ್ತು ರಾಜ್ಯಕ್ಕೆ ಅಧಿಕಾರವಿದೆ:ಸುಪ್ರೀಂಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: May 19, 2022 | 5:54 PM

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಜಿಎಸ್‌ಟಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅದರ ಮೇಲೆ ಕಾನೂನು ಮಾಡುವ ಅಧಿಕಾರವಿದೆ ಎಂದು ಹೇಳಿದೆ.

ಜಿಎಸ್‌ಟಿ ಕುರಿತು ಕಾನೂನು ರೂಪಿಸಲು ಕೇಂದ್ರ ಮತ್ತು ರಾಜ್ಯಕ್ಕೆ ಅಧಿಕಾರವಿದೆ:ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us on

ಸರಕು ಮತ್ತು ಸೇವಾ ತೆರಿಗೆ (GST) ವಿಷಯಗಳ ಕುರಿತು ಕಾನೂನು ರೂಪಿಸಲು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅಧಿಕಾರವಿದೆ. ಜಿಎಸ್‌ಟಿ ಕೌನ್ಸಿಲ್‌ನ (GST Council)ಎಲ್ಲಾ ಶಿಫಾರಸುಗಳನ್ನು ಒಪ್ಪಬೇಕೆಂದಿಲ್ಲ. ಕೌನ್ಸಿಲ್‌ ಶಿಫಾರಸುಗಳಿಗೆ ಮನವೊಲಿಸುವ ಮೌಲ್ಯ ಮಾತ್ರ ಇದೆ ಎಂದು ಸುಪ್ರೀಂಕೋರ್ಟ್(Supreme Court) ಹೇಳಿದೆ. ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಜಿಎಸ್‌ಟಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅದರ ಮೇಲೆ ಕಾನೂನು ಮಾಡುವ ಅಧಿಕಾರವಿದೆ ಎಂದು ಹೇಳಿದೆ. ಕಾರ್ಯಸಾಧ್ಯವಾದ ಪರಿಹಾರವನ್ನು ಸಾಧಿಸಲು ಜಿಎಸ್‌ಟಿ ಕೌನ್ಸಿಲ್ ಸಾಮರಸ್ಯದಿಂದ ಕೆಲಸ ಮಾಡುವ ಅಗತ್ಯವನ್ನು ನ್ಯಾಯಾಲಯ ಒತ್ತಿಹೇಳಿದೆ. ಸರಕು ಮತ್ತು ಸೇವಾ ತೆರಿಗೆ ಕಾಯಿದೆ, 2017 (ಜಿಎಸ್‌ಟಿ ಕಾಯಿದೆ) ಯಲ್ಲಿ ಕೇಂದ್ರ ಮತ್ತು ರಾಜ್ಯಗಳು ರಚಿಸಿರುವ ಕಾನೂನುಗಳ ನಡುವೆ ವ್ಯವಹರಿಸುವ ಯಾವುದೇ ನಿಬಂಧನೆಗಳಿಲ್ಲ.  ಜಿಎಸ್‌ಟಿ ಕೌನ್ಸಿಲ್ ಸಲಹೆ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ. ಅಂತಹ ಸಂದರ್ಭಗಳು ಬಂದಾಗಲೆಲ್ಲಾ ಅವು ಸೂಕ್ತವಾಗಿರುತ್ತವೆ  ಎಂದು ನ್ಯಾಯಪೀಠ  ಹೇಳಿದೆ.

ಗುಜರಾತ್ ಹೈಕೋರ್ಟಿನ ಆದೇಶದ ವಿರುದ್ಧದ ಮೇಲ್ಮನವಿಯ ಮೇಲೆ ಬಂದ ತೀರ್ಪು ಕೂಡ ಒಕ್ಕೂಟ ವ್ಯವಸ್ಥೆಯ ಅಂಶಗಳ ಮೇಲೆ ನಿಂತಿದೆ. “ಭಾರತೀಯ ಒಕ್ಕೂಟ ವ್ಯವಸ್ಥೆ”, ಇದು “ಸಹಕಾರಿ ಮತ್ತು ಸಹಕಾರೇತರ ಒಕ್ಕೂಟ ವ್ಯವಸ್ಥೆ ನಡುವಿನ ಸಂವಾದವಾಗಿದೆ”, ಇದರಲ್ಲಿ “ರಾಜ್ಯಗಳು ಮತ್ತು ಕೇಂದ್ರಗಳು ಯಾವಾಗಲೂ ಸಂವಾದದಲ್ಲಿ ತೊಡಗುತ್ತವೆ” ಎಂದು ಆದೇಶದಲ್ಲಿ ಹೇಳಿದೆ.

ಸಾಗರದ ಸರಕು ಆಮದುದಾರರ ಮೇಲೆ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ವಿಧಿಸುವ ಕೇಂದ್ರ ಅಧಿಸೂಚನೆಯನ್ನು ರದ್ದುಗೊಳಿಸಿದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಇದನ್ನೂ ಓದಿ
Cryptocurrencies: ಬಿಟ್​ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳ ಮೇಲೆ ಶೇ 28ರಷ್ಟು ಜಿಎಸ್​ಟಿ ವಿಧಿಸುವ ಪ್ರಸ್ತಾವ
GST Number Unblock: ಬ್ಲಾಕ್ ಮಾಡಿದ ಜಿಎಸ್‌ಟಿ ಸಂಖ್ಯೆ ಮರುಚಾಲನೆ ಹೇಗೆಂದು ತಿಳಿಯದ ಕರ್ನಾಟಕ ಜಿಎಸ್​ಟಿ ಇಲಾಖೆ; ಉದ್ಯಮಿ ವ್ಯವಹಾರಕ್ಕೆ ಧಕ್ಕೆ
Online Gaming: ಆನ್​ಲೈನ್ ಗೇಮಿಂಗ್, ಕ್ಯಾಸಿನೋ​ ಮೇಲಿನ ಜಿಎಸ್​ಟಿ ಶೇ. 28ಕ್ಕೆ ಹೆಚ್ಚಳ ಸಾಧ್ಯತೆ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ