Cryptocurrencies: ಬಿಟ್​ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳ ಮೇಲೆ ಶೇ 28ರಷ್ಟು ಜಿಎಸ್​ಟಿ ವಿಧಿಸುವ ಪ್ರಸ್ತಾವ

ಬಿಟ್​ಕಾಯಿನ್ ಸೇರಿದಂತೆ ಇತರ ಕ್ರಿಪ್ಟೋಕರೆನ್ಸಿಗಳ ಮೇಲೆ ಶೇ 28ರಷ್ಟು ಜಿಎಸ್​ಟಿ ವಿಧಿಸಲು ಜಿಎಸ್​ಟಿ ಸಮಿತಿ ಸಭೆಯಲ್ಲಿ ಪ್ರಸ್ತಾವ ಮಾಡುವ ಸಾಧ್ಯತೆ ಇದೆ.

Cryptocurrencies: ಬಿಟ್​ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳ ಮೇಲೆ ಶೇ 28ರಷ್ಟು ಜಿಎಸ್​ಟಿ ವಿಧಿಸುವ ಪ್ರಸ್ತಾವ
Follow us
| Updated By: Srinivas Mata

Updated on:May 10, 2022 | 1:16 PM

ಈಗ ಕ್ಯಾಸಿನೋಗಳು, ಬೆಟ್ಟಿಂಗ್, ಲಾಟರಿಗಳ ಮೇಲೆ ಹಾಕುತ್ತಿರುವ ಶೇ 28ರ ಜಿಎಸ್​ಟಿಯಂತೆಯೇ ಬಿಟ್​ಕಾಯಿನ್ ಸೇರಿದಂತೆ ಇತರ ಕ್ರಿಪ್ಟೋಕರೆನ್ಸಿಗಳ (Cryptocurrency) ಮೇಲೂ ಶೇ 28ರಷ್ಟು ತೆರಿಗೆ ವಿಧಿಸುವುದಕ್ಕೆ ಜಿಎಸ್​ಟಿ ಸಮಿತಿಯು ಮುಂದಾಗಿದೆ ಎಂದು ಸೋಮವಾರದಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ. ಒಂದು ವೇಳೆ ಈ ಪ್ರಸ್ತಾವವು ಮುಂದಿನ ಜಿಎಸ್​ಟಿ ಸಭೆಯಲ್ಲಿ ಅಂಗೀಕೃತವಾದಲ್ಲಿ ಕ್ರಿಪ್ಟೋ ಮೈನಿಂಗ್, ಮಾರಾಟ ಹಾಗೂ ಖರೀದಿಯಂಥ ಸೇವೆಗಳಿಗೆ ಶೇ 28ರಷ್ಟು ಜಿಎಸ್​ಟಿ ಹಾಕುವ ಸಾಧ್ಯತೆಗಳಿವೆ. ಆದರೆ ಮುಂದಿನ ಸಭೆಯ ದಿನಾಂಕ ಇನ್ನೂ ಅಂತಿಮಗೊಳ್ಳಬೇಕಿದೆ. ಹಣಕಾಸು ಸಚಿವಾಲಯವು ಈಗಾಗಲೇ ಕ್ರಿಪ್ಟೋ ಆಸ್ತಿಗಳ ವರ್ಗಾವಣೆ ಮತ್ತು ನಾನ್-ಫಂಗಿಬಲ್ ಟೋಕನ್​ಗಳ (NFTs) ಮೇಲೆ ಮಾಡುವ ಲಾಭಕ್ಕೆ ಶೇ 30ರ ತೆರಿಗೆ ಹಾಕಿದೆ.

ಕ್ರಿಪ್ಟೋಕರೆನ್ಸಿಗಳು ಮತ್ತು ಕ್ರಿಪ್ಟೋ ಆಸ್ತಿಗಳ ಮಧ್ಯೆ ಸ್ಪಷ್ಟ ವ್ಯತ್ಯಾಸವನ್ನು ಭಾರತ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2022-23 ಅನ್ನು ಫೆಬ್ರವರಿಯಲ್ಲಿ ಮಂಡಿಸುವ ವೇಳೆ, ಈ ವ್ಯವಹಾರಗಳಿಂದ ಬರುವ ಆದಾಯಕ್ಕೆ ಶೇ 30ರಷ್ಟು ತೆರಿಗೆ ಘೋಷಣೆ ಮಾಡಿದ್ದರು. ಅದರಲ್ಲಿ ಶೇ 1ರಷ್ಟು ಡಿಡಕ್ಷನ್ ಅಟ್ ಸೋರ್ಸ್ ಇದೆ. ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾವ ಮಾಡಿದ ಶೇ 30ರ ಕ್ರಿಪ್ಟೋ ಗಳಿಕೆ ಮೇಲೆ ತೆರಿಗೆಯು ಏಪ್ರಿಲ್ 1ನೇ ತಾರೀಕಿನಿಂದ ಜಾರಿಗೆ ಬಂದಿದೆ.

ಈಗಿನ ಶೇ 28ರ ಜಿಎಸ್​ಟಿಯು ಕ್ರಿಪ್ಟೋ ಆಸ್ತಿ ವಹಿವಾಟಿನ ಗಳಿಕೆ ಮೇಲಿನ ಶೇ 30ರ ತೆರಿಗೆ ಜತೆಗೆ ಬೀಳುತ್ತದೆ. ಇದರ ಜತೆಗೆ ಶೇ 1ರ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಅನ್ನು ಒಂದು ಮಿತಿಯನ್ನು ದಾಟಿದ ಆಸ್ತಿ ವರ್ಗಕ್ಕೆ ಹಾಕಲಾಗುತ್ತದೆ. ಇನ್ನು ಕ್ರಿಪ್ಟೋ ಹಾಗೂ ಡಿಜಿಟಲ್​ ಆಸ್ತಿಗಳ ಉಡುಗೊರೆ ಮೇಲೂ ತೆರಿಗೆ ಹಾಕಲಾಗುತ್ತದೆ. ಡಿಜಿಟಲ್ ಆಸ್ತಿಗಳ ಮೇಲಿನ ತೆರಿಗೆ ಹಾಕುವುದಕ್ಕೆ ಆದಾಯ ತೆರಿಗೆ ಕಾಯ್ದೆ, 1961ಕ್ಕೆ ಹೊಸ ಸೆಕ್ಷನ್ 115BBH ಸೇರ್ಪಡೆ ಮಾಡಲಾಗಿದೆ.

ಕಳೆದ ತಿಂಗಳು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕ ಪ್ರವಾಸ ತೆರಳಿದ್ದ ವೇಳೆ ವಿಶ್ವದಾದ್ಯಂತದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಗಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಭಾರತಕ್ಕೆ ಅತಿ ದೊಡ್ಡ ಆತಂಕ ಆಗಿರುವ ಭಯೋತ್ಪಾದನೆಯಂಥ ಕೃತ್ಯಕ್ಕೆ ಹಣಕಾಸಿನ ನೆರವು, ಅಕ್ರಮ ಹಣ ವರ್ಗಾವಣೆಯಂಥ ಕೃತ್ಯಗಳಿಗೆ ಕ್ರಿಪ್ಟೋಕರೆನ್ಸಿ ಬಳಕೆ ಆಗದಿರುವಂತೆ ಮಾಡುವುದಕ್ಕೆ ಎಲ್ಲ ದೇಶಗಳು ಸಮ್ಮತಿಸುವಂಥ ನಿಯಂತ್ರಕ ವ್ಯವಸ್ಥೆ ರೂಪಿಸಬೇಕು ಎಂದು ಅವರು ಹೇಳಿದ್ದರು.

ಈ ಮಧ್ಯೆ ಸೋಮವಾರದಂದು (ಮೇ 9, 2022) ಕ್ರಿಪ್ಟೋಕರೆನ್ಸಿಯಾದ ಬಿಟ್​ಕಾಯಿನ್ ಶೇ 2.7ರಷ್ಟು ಕುಸಿದು 33,531 ಯುಎಸ್​ಡಿ ಮುಟ್ಟಿತ್ತು. ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾದ ಬಿಟ್​ಕಾಯಿನ್ ಕಳೆದ ವರ್ಷದ ನವೆಂಬರ್​ನಲ್ಲಿ ತಲುಪಿದ್ದ ಗರಿಷ್ಠ ಮಟ್ಟದ ಮಾರುಕಟ್ಟೆ ಮೌಲ್ಯದಿಂದ ಶೇ 50ರಷ್ಟು ಇಳಿಕೆ ಆಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Tue, 10 May 22

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ