GST Number Unblock: ಬ್ಲಾಕ್ ಮಾಡಿದ ಜಿಎಸ್‌ಟಿ ಸಂಖ್ಯೆ ಮರುಚಾಲನೆ ಹೇಗೆಂದು ತಿಳಿಯದ ಕರ್ನಾಟಕ ಜಿಎಸ್​ಟಿ ಇಲಾಖೆ; ಉದ್ಯಮಿ ವ್ಯವಹಾರಕ್ಕೆ ಧಕ್ಕೆ

ಬೆಂಗಳೂರು ಉದ್ಯಮಿಯೊಬ್ಬರ ಬ್ಲಾಕ್ ಆದ ಜಿಎಸ್​ಟಿಐಎನ್ ಸಂಖ್ಯೆ ಅನ್​ಬ್ಲಾಕ್ ಮಾಡುವುದಕ್ಕೆ ಕರ್ನಾಟಕ ಜಿಎಸ್​ಟಿ ಇಲಾಖೆ ವಿಫಲ ಆಗಿದೆ.

GST Number Unblock: ಬ್ಲಾಕ್ ಮಾಡಿದ ಜಿಎಸ್‌ಟಿ ಸಂಖ್ಯೆ ಮರುಚಾಲನೆ ಹೇಗೆಂದು ತಿಳಿಯದ ಕರ್ನಾಟಕ ಜಿಎಸ್​ಟಿ ಇಲಾಖೆ; ಉದ್ಯಮಿ ವ್ಯವಹಾರಕ್ಕೆ ಧಕ್ಕೆ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: May 10, 2022 | 9:56 AM

ಜಿಎಸ್‌ಟಿ ಪಾವತಿ ವಿಳಂಬ ಮಾಡಿದ ಕಾರಣಕ್ಕೆ ಉದ್ಯಮಿಯೊಬ್ಬರ ಜಿಎಸ್‌ಟಿಐಎನ್‌ ಸಂಖ್ಯೆಯನ್ನು ಬ್ಲಾಕ್ ಮಾಡಿದ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ (GST) ಇಲಾಖೆಗೆ ಇದೀಗ ಅದನ್ನು ಅನ್‌ಬ್ಲಾಕ್ ಮಾಡಲು ತಿಳಿಯುತ್ತಿಲ್ಲ. ಹೌದು, ನೀವು ಇದನ್ನು ನಂಬಲೇಬೇಕು. ಇಂತಹ ಸನ್ನಿವೇಶವನ್ನು ಯಾವ ರೀತಿ ಸ್ವೀಕರಿಸಬೇಕು ಎಂಬ ಗೊಂದಲ ರಾಜ್ಯದ ಉದ್ಯಮಿಗಳಿಗೆ ಸೃಷ್ಟಿಯಾಗಿದೆ. ಆ ರೀತಿ ಸಮಸ್ಯೆ ಎದುರಿಸುತ್ತಿರುವ ಉದ್ಯಮಿಯೊಬ್ಬರು ಸ್ವತಃ ತಮಗಾದ ತೊಂದರೆ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆ ನೀಡಿ, ಅಳಲು ತೋಡಿಕೊಂಡಿದ್ದಾರೆ. ಪಾವತಿ ವಿಳಂಬದಿಂದ ರದ್ದಾದ ಜಿಎಸ್‌ಟಿಐಎನ್‌ ಅನ್ನು ಅನ್‌ಬ್ಲಾಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಜಿಎಸ್‌ಟಿ ಇಲಾಖೆ ಅಧಿಕಾರಿಗಳು ಹೇಳಿದ ನಂತರ ಬೆಂಗಳೂರು ಮೂಲದ ಉದ್ಯಮಿ, ಆಡ್ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈ.ಲಿ. ನಿರ್ದೇಶಕ ಗಿರೀಶ್ ತೀವ್ರ ಸಮಸ್ಯೆ ಎದುರಿಸುತ್ತಿರುವುದಾಗಿ ದೂರಿದ್ದಾರೆ.

ಏನಿದು ಪ್ರಕರಣ?: ಈ ಸಂಬಂಧ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು, ರಾಜ್ಯದ ಜಿಎಸ್‌ಟಿ ಅಧಿಕಾರಿಗಳೇ ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿರುವುದನ್ನು ಬಹಿರಂಗಪಡಿಸಿದ್ದಾರೆ. ಇ-ಆಡಳಿತದಲ್ಲಿ ಇತರ ರಾಜ್ಯಗಳಿಗಿಂತ ಮುಂದಿರುವುದಾಗಿ ಕರ್ನಾಟಕ ಹೇಳಿಕೊಂಡಿದೆ. ಆದರೆ, ವಾಸ್ತವ ಏನೆಂದರೆ ಬ್ಲಾಕ್ ಮಾಡಿದ ಡಿಜಿಟಲ್ ತೆರಿಗೆ ಖಾತೆಯನ್ನು ಅನ್‌ಬ್ಲಾಕ್ ಮಾಡುವುದು ಸ್ವತಃ ಇಲಾಖೆಗೇ ಕಷ್ಟವಾಗಿದೆ. ಮೇಲ್ಮನವಿ ಆದೇಶದ ಹೊರತಾಗಿಯೂ ಎರಡು ತಿಂಗಳಿನಿಂದ ವ್ಯಾಪಾರ ಸಂಸ್ಥೆಯೊಂದರ ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆ (GSTIN) ಅನ್ನು ಮರುಸ್ಥಾಪಿಸಲು ವಾಣಿಜ್ಯ ತೆರಿಗೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಕಂಪೆನಿಯ ಮಾಲೀಕರಿಗೆ ಇ-ವೇ ಬಿಲ್ ಸಂಖ್ಯೆಯನ್ನು ಉತ್ಪಾದಿಸಲು ಸಾಧ್ಯವಾಗದೆ, ಗ್ರಾಹಕರು ಈಗಾಗಲೇ ಇರಿಸಿದ ಆರ್ಡರ್‌ಗಳಿಗೆ ತಮ್ಮ ಸರಬರಾಜುಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ.

ಆಡ್ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ (ಪಿ) ಲಿಮಿಟೆಡ್‌ನ ನಿರ್ದೇಶಕ ಗಿರೀಶ್ ಅವರಿಗೆ ಜಿಎಸ್‌ಟಿ ಸಂಬಂಧಿತ ಸಮಸ್ಯೆಗಳು 2021ರಲ್ಲಿ ಪ್ರಾರಂಭವಾದವು. ಕೊವಿಡ್- 19 ಸಾಂಕ್ರಾಮಿಕದ ಕಾರಣದಿಂದಾಗಿ ಅವರ ಕಂಪೆನಿಗೆ ಜಿಎಸ್‌ಟಿ ಪಾವತಿಸುವುದು ಸವಾಲಾಗಿ ಪರಿಣಮಿಸಿತು. ಅನಂತರ ಅವರ ಕಂಪೆನಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಹಾಗಿದ್ದರೂ ಅವರು ತಮ್ಮ ಉದ್ಯೋಗಿಗಳನ್ನು ಉಳಿಸಿಕೊಂಡು ವೇತನ ಪಾವತಿಸುವುದನ್ನು ಮುಂದುವರಿಸಿದರು. ಇಲಾಖೆಯು ಜಿಎಸ್‌ಟಿಯ ವಿಳಂಬ ಪಾವತಿಯನ್ನು ಉಲ್ಲೇಖಿಸಿ, ಅವರ 15-ಅಂಕಿಯ ಜಿಎಸ್‌ಟಿಐಎನ್ ಅನ್ನು ಅಮಾನತುಗೊಳಿಸಿದೆ. ಜಿಎಸ್‌ಟಿಐಎನ್ ಇಲ್ಲದೆ ಅವರು ಯಾವುದೇ ವ್ಯಾಪಾರ- ವಹಿವಾಟು ನಡೆಸಲು ಸಾಧ್ಯವಿಲ್ಲ. ಈ ಕಂಪೆನಿಯು ಕತ್ತರಿಸುವ ಸಲಕರಣೆಗಳು ಮತ್ತು ರಕ್ಷಣಾ ಉಪಕರಣಗಳ ಘಟಕಗಳನ್ನು ತಯಾರಿಸುತ್ತದೆ ಮತ್ತು ಪೂರೈಸುತ್ತದೆ.

ಜಿಎಸ್‌ಟಿ ಪಾವತಿ ಆಗದ ಕಾರಣವನ್ನು ತೋರಿಸಲು ಸಂಸ್ಥೆಯ ನಿರ್ದೇಶಕರಿಗೆ ಇಲಾಖೆ ಎರಡು ನೋಟಿಸ್‌ ಜಾರಿಗೊಳಿಸಿತ್ತು. ಪರಿಸ್ಥಿತಿ ಸುಧಾರಿಸಿದ ನಂತರ, ಅವರು 2 ಲಕ್ಷಕ್ಕೂ ಹೆಚ್ಚು ವಿಳಂಬ ಪಾವತಿ ಶುಲ್ಕವನ್ನು ಪಾವತಿಸಿದ್ದಾರೆ ಮತ್ತು ಜಿಎಸ್‌ಟಿ ಮೊತ್ತವಾಗಿ 17.5 ಲಕ್ಷ ರೂಪಾಯಿಯನ್ನು 2021ರ ಮಾರ್ಚ್‌ಗೆ ಬದಲಾಗಿ 2021ರ ಡಿಸೆಂಬರ್‌ನಲ್ಲಿ ಪಾವತಿಸಿದ್ದಾರೆ. ಅವರು ತಡವಾಗಿ ಪಾವತಿ ಶುಲ್ಕವನ್ನೂ ನೀಡಿದ್ದಾರೆ. ಹೀಗಾಗಿ ನಿಯಮಗಳ ಪ್ರಕಾರ, ಜಿಎಸ್‌ಟಿಐಎನ್‌ ಅನ್ನು ಮರು ಚಾಲನೆಗೊಳಿಸಬೇಕಿತ್ತು. ಹಲವಾರು ಮನವಿಗಳ ಹೊರತಾಗಿಯೂ ಅದು ಸಾಧ್ಯವಾಗದಿದ್ದಾಗ ಅವರು ಸರಕು ಮತ್ತು ಸೇವಾ ತೆರಿಗೆ (ಅಪೀಲುಗಳು)-2 ಬೆಂಗಳೂರು ಜಂಟಿ ಆಯುಕ್ತರ ಮುಂದೆ ಮನವಿಯನ್ನು ಸಲ್ಲಿಸಿದರು, ತಮ್ಮ ರದ್ದುಗೊಂಡ ಜಿಎಸ್‌ಟಿಐಎನ್‌ ಅನ್ನು ಮರುಸ್ಥಾಪಿಸುವಂತೆ ಮನವಿ ಮಾಡಿದರು.

ಗಿರೀಶ್‌ ವಾದವನ್ನು ಎತ್ತಿಹಿಡಿದ ಟ್ರಿಬ್ಯುನಲ್ ಬಡ್ಡಿ ಮತ್ತು ವಿಳಂಬ ಶುಲ್ಕದೊಂದಿಗೆ ತೆರಿಗೆಗಳನ್ನು ಪಾವತಿಸಿದ್ದರೂ ಜಿಎಸ್‌ಟಿಐಎನ್‌ ಅನ್ನು ಮರುಸ್ಥಾಪಿಸಲಾಗಿಲ್ಲ. ಸಂಸ್ಥೆಯ ನಿರ್ದೇಶಕರು ಡಿಸೆಂಬರ್ 21ರಿಂದ ಫೆಬ್ರವರಿ 2022ರ ವರೆಗಿನ ಜಿಎಸ್‌ಟಿ ರಿಟರ್ನ್ಸ್ ಅನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ. ನೋಂದಣಿ ರದ್ದತಿಯನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಹೋಗುವುದು ಅವರಿಗೆ ಅನಿವಾರ್ಯವಾಯಿತು. ಮಾರ್ಚ್ 31, 2022ರಂದು, ಟ್ರಿಬ್ಯುನಲ್ ಗಿರೀಶ್‌ ಅವರ ವಾದವನ್ನು ಎತ್ತಿಹಿಡಿದಿದೆ ಮತ್ತು ಜಿಎಸ್‌ಟಿಐಎನ್‌ ಅನ್ನು ಮರುಸ್ಥಾಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿತು.

ಆದರೆ, ಇಂದಿನವರೆಗೂ ವಾಣಿಜ್ಯ ತೆರಿಗೆ ಇಲಾಖೆಯು ನೋಂದಣಿ ರದ್ದು ಪ್ರಕ್ರಿಯೆ ಸ್ಥಗಿತಗೊಳಿಸಿಲ್ಲ. “ನಾನು ಹಲವಾರು ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಸಬೇಕಾಗಿದೆ. ಜಿಎಸ್‌ಟಿ ಸಂಖ್ಯೆ ಇಲ್ಲದೆ ನಾನು ಇ-ವೇ-ಬಿಲ್ ಅನ್ನು ಹೇಗೆ ತಯಾರಿಸಲು ಸಾಧ್ಯ? ನಾನು ಈ ಅತಿಯಾದ ವಿಳಂಬಕ್ಕೆ ಕಾರಣವನ್ನು ಕೋರಿ ಇಲಾಖೆಯ ಅನೇಕ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಅವರು ನೋಂದಣಿಯನ್ನು ಮರುಸ್ಥಾಪಿಸುವ ವಿಧಾನ ತಿಳಿದಿಲ್ಲ ಎಂದು ಹೇಳುತ್ತಾರೆ. ಅಂತಹ ಹಾರಿಕೆಯ ಉತ್ತರವನ್ನು ಒಪ್ಪಿಕೊಳ್ಳುವುದಾದರೂ ಹೇಗೆ? ಇದು ಇ-ಆಡಳಿತದ ಯುಗ. ಸರ್ಕಾರಿ ಇಲಾಖೆಯು ಕಂಪೆನಿಯ ನೋಂದಣಿಯನ್ನು ರದ್ದುಗೊಳಿಸುವ ಸಾಮರ್ಥ್ಯವನ್ನು ಹೊಂದಿರುವುದೇನೋ ಸರಿ. ಆದರೆ ನ್ಯಾಯಾಲಯದ ಆದೇಶದ ಹೊರತಾಗಿಯೂ ಅದನ್ನು ಮರುಸ್ಥಾಪಿಸಲು ಸಾಧ್ಯವಾಗುವುದಿಲ್ಲ ಏಕೆ?” ಎಂಬುದು ಗಿರೀಶ್ ಅವರ ಪ್ರಶ್ನೆ. ಇಲಾಖೆಯ ಕಚೇರಿಗೆ ಹಲವಾರು ಬಾರಿ ಮಾಡಿದ ಅಲೆದಾಟ, ದೂರವಾಣಿ ಕರೆಗಳು ವ್ಯರ್ಥವಾಗಿವೆ ಎಂದು ಗಿರೀಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: GST Compensation: ಕೇಂದ್ರದಿಂದ ರಾಜ್ಯಗಳಿಗೆ ಜಿಎಸ್​ಟಿ ಪರಿಹಾರ 53,489 ಕೋಟಿ ರೂಪಾಯಿ ಬಾಕಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ