Char Dham Yatra: ಯಮುನೋತ್ರಿಯಲ್ಲಿ ಹೆದ್ದಾರಿ ಕುಸಿತ; ಮಾರ್ಗಮಧ್ಯೆ ಸಿಲುಕಿದ 3,000ಕ್ಕೂ ಅಧಿಕ ಯಾತ್ರಿಕರು

Char Dham Yatra: ಯಮುನೋತ್ರಿಯಲ್ಲಿ ಹೆದ್ದಾರಿ ಕುಸಿತ; ಮಾರ್ಗಮಧ್ಯೆ ಸಿಲುಕಿದ 3,000ಕ್ಕೂ ಅಧಿಕ ಯಾತ್ರಿಕರು
ಯಮುನೋತ್ರಿಯಲ್ಲಿ ಸಿಕ್ಕಿಬಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವುದು
Image Credit source: Hindustan Times

Yamunotri: ಹೃದಯಾಘಾತ ಮತ್ತು ಇತರ ವೈದ್ಯಕೀಯ ಕಾರಣಗಳಿಂದಾಗಿ ಚಾರ್ ಧಾಮ್ ಯಾತ್ರೆಯಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಇದುವರೆಗೆ 48ಕ್ಕೆ ತಲುಪಿದೆ.

TV9kannada Web Team

| Edited By: Sushma Chakre

May 19, 2022 | 7:18 PM

ಮುಸೋರಿ: ಈಗಾಗಲೇ ಚಾರ್​ಧಾಮ್ ಯಾತ್ರೆ (Char Dham Yatra) ಶುರುವಾಗಿದ್ದು, ಇದುವರೆಗೂ ಈ ಯಾತ್ರೆಗೆ ಹೊರಟಿದ್ದ 48 ಪ್ರಯಾಣಿಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ. ಇದರ ನಡುವೆ ರಾಣಾ ಚಟ್ಟಿ ಮತ್ತು ಸಯನಾ ಚಟ್ಟಿ ನಡುವಿನ ಯಮುನೋತ್ರಿ ಹೆದ್ದಾರಿ ಕುಸಿದ ಪರಿಣಾಮ ಬುಧವಾರ ರಾತ್ರಿ ಯಮುನೋತ್ರಿ (Yamunotri) ಧಾಮದ ಕಡೆಗೆ ತೆರಳುತ್ತಿದ್ದ ಪ್ರಯಾಣಿಕರ ಯಾತ್ರೆಗೆ ಅಡ್ಡಿಯುಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿ ಕುಸಿತವಾದ್ದರಿಂದ 3,000ಕ್ಕೂ ಹೆಚ್ಚು ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ.

ಸಣ್ಣ ವಾಹನಗಳು ಮಾತ್ರ ಬಾರ್ಕೋಟ್‌ನಿಂದ ಜಾನ್ ಕಿ ಚಟ್ಟಿಗೆ ಹಾದುಹೋಗಲು ಸಾಧ್ಯವಾಯಿತು. ಆದರೆ ಬಸ್‌ಗಳು ಮತ್ತು ಇತರ ಭಾರೀ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾವಿರಾರು ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಉತ್ತರಕಾಶಿಯಲ್ಲಿ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. (Source)

ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಣಾ ಚಟ್ಟಿ ಮತ್ತು ಸಯನಾ ಚಟ್ಟಿ ನಡುವಿನ 15 ಮೀಟರ್ ರಸ್ತೆ ಕುಸಿದಿದೆ. ಇದರಿಂದ ಯಾತ್ರಿಕರನ್ನು ಹೊತ್ತೊಯ್ಯುವ ಬಸ್‌ಗಳು ಮತ್ತು ಇತರ ಭಾರೀ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಸಣ್ಣ ವಾಹನಗಳು ಮಾತ್ರ ಈ ರಸ್ತೆಯಲ್ಲಿ ಹಾದುಹೋಗಲು ಸಾಧ್ಯವಾಯಿತು. ರಸ್ತೆ ಕುಸಿತವನ್ನು ಸರಿಮಾಡಲು ಒಂದು ಟ್ರ್ಯಾಕ್ಟರ್ ಟ್ರಾಲಿ, ಎರಡು ಜೆಸಿಬಿ ಯಂತ್ರಗಳು, ಒಂದು ಟಿಪ್ಪರ್, ಒಂದು ಪೋಕ್ಲ್ಯಾಂಡ್ ಮತ್ತು 15 ಕಾರ್ಮಿಕರು ಸ್ಥಳಕ್ಕೆ ಧಾವಿಸಿದ್ದು, ಇಂದು ರಾತ್ರಿ ವೇಳೆಗೆ ರಸ್ತೆ ಎಲ್ಲಾ ರೀತಿಯ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Char Dham Yatra 2021: ಆಗಸ್ಟ್ 18ರವರೆಗೆ ಚಾರ್ ಧಾಮ್ ಯಾತ್ರೆಗೆ ನಿಷೇಧ; ಹೈಕೋರ್ಟ್ ಆದೇಶ

ಸುಮಾರು 24 ಬಸ್‌ಗಳು ಮತ್ತು 15ಕ್ಕೂ ಹೆಚ್ಚು ಯಾತ್ರಾರ್ಥಿಗಳ ಮಿನಿ ಬಸ್‌ಗಳನ್ನು ನಿಲ್ಲಿಸಲಾಯಿತು. ಸಿಕ್ಕಿಬಿದ್ದ ಯಾತ್ರಾರ್ಥಿಗಳನ್ನು ಸಯನಾ ಚಟ್ಟಿಯ ಸುತ್ತಮುತ್ತಲಿನ ಆಶ್ರಮಗಳು ಮತ್ತು ಹತ್ತಿರದ ಅತಿಥಿ ಗೃಹಗಳಲ್ಲಿ ಸುರಕ್ಷಿತ ಆಶ್ರಯಕ್ಕೆ ಕರೆದೊಯ್ಯಲಾಯಿತು ಎಂದು ಡಿಡಿಎಂಎ ಅಧಿಕಾರಿಗಳು ತಿಳಿಸಿದ್ದಾರೆ.

ರಿಷಿಕೇಶ-ಗಂಗೋತ್ರಿ ಹೆದ್ದಾರಿ ಸಂಖ್ಯೆ 108, ವಿಕಾಸ್ ನಗರ- ಬಾರ್ಕೋಟ್ ರಾಷ್ಟ್ರೀಯ ಹೆದ್ದಾರಿ 123, ಚಿನೈಲೈ ಸೌದ್-ಸುವಾಖೋಲಿ, ಉತ್ತರಕಾಶಿ-ಲಂಗಾಂವ್-ಶ್ರೀನಗರ ಮತ್ತು ಮಸ್ಸೂರಿ-ಡೆಹ್ರಾಡೂನ್ ರಸ್ತೆಗಳು ವಾಹನ ಸಂಚಾರಕ್ಕೆ ಮುಕ್ತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Char Dham Yatra 2022: ಚಾರ್ ಧಾಮ್ ಯಾತ್ರೆ ಶುರುವಾದ 6 ದಿನದಲ್ಲಿ 16 ಯಾತ್ರಾರ್ಥಿಗಳ ಸಾವು

ಹೃದಯ ಸ್ತಂಭನ ಮತ್ತು ಇತರ ವೈದ್ಯಕೀಯ ಕಾರಣಗಳಿಂದಾಗಿ ಚಾರ್ ಧಾಮ್ ಯಾತ್ರೆಯಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಇದುವರೆಗೆ 48ಕ್ಕೆ ತಲುಪಿದೆ. ಈ 48ರಲ್ಲಿ ಯಮುನೋತ್ರಿಯಲ್ಲಿ 15 ಮತ್ತು ಗಂಗೋತ್ರಿಯಲ್ಲಿ 4 ಸಾವುಗಳು ಸೇರಿದಂತೆ 19 ಸಾವುಗಳು ವರದಿಯಾಗಿವೆ. ಬದರಿನಾಥದಲ್ಲಿ ಇದುವರೆಗೆ 8 ಸಾವುಗಳು ವರದಿಯಾಗಿದ್ದು, ಕೇದಾರನಾಥದಲ್ಲಿ ಇಂದು ಬೆಳಿಗ್ಗೆ ಒಂದು ಸಾವು ವರದಿಯಾಗುವುದರೊಂದಿಗೆ ಕೇದಾರನಾಥದಲ್ಲಿ ಸಾವಿನ ಸಂಖ್ಯೆ 21ಕ್ಕೆ ತಲುಪಿದೆ.

ಇದುವರೆಗೆ 6.5 ಲಕ್ಷ ಯಾತ್ರಿಕರು ನಾಲ್ಕು ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಬುಧವಾರ ಕೇದಾರನಾಥ ತಲುಪಿದ ಯಾತ್ರಾರ್ಥಿಗಳ ಸಂಖ್ಯೆ 16,788 ಆಗಿದ್ದು, ಒಟ್ಟು 233,711ಕ್ಕೆ ತಲುಪಿದೆ. ಬುಧವಾರ ಬಿಡುಗಡೆಯಾದ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 188,346 ಯಾತ್ರಿಕರು ಬದರಿನಾಥಕ್ಕೆ, 106,352 ಯಾತ್ರಿಕರು ಯಮುನೋತ್ರಿಗೆ ಮತ್ತು 130,855 ಗಂಗೋತ್ರಿಗೆ ಭೇಟಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada