Char Dham Yatra 2021: ಆಗಸ್ಟ್ 18ರವರೆಗೆ ಚಾರ್ ಧಾಮ್ ಯಾತ್ರೆಗೆ ನಿಷೇಧ; ಹೈಕೋರ್ಟ್ ಆದೇಶ

Char Dham Yatra: ಕೋವಿಡ್ ಸೋಂಕು ಹರಡುವಿಕೆ ಕಡಿಮೆಯಾಗದ ಕಾರಣದಿಂದ ಆಗಸ್ಟ್ 18ರವರಗೆ ಚಾರ್ ಧಾಮ್ ಯಾತ್ರೆಯನ್ನು ನಿರ್ಬಂಧಿಸುವುದಾಗಿ ನೈನಿತಾಲ್ ಹೈಕೋರ್ಟ್ ಆದೇಶಿಸಿದೆ.

Char Dham Yatra 2021: ಆಗಸ್ಟ್ 18ರವರೆಗೆ ಚಾರ್ ಧಾಮ್ ಯಾತ್ರೆಗೆ ನಿಷೇಧ; ಹೈಕೋರ್ಟ್ ಆದೇಶ
ಚಾರ್ ಧಾಮ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 28, 2021 | 9:23 PM

ನೈನಿತಾಲ್: ಕೊರೋನಾದಿಂದ ಭಾರತ ಸಂಪೂರ್ಣವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಸದ್ಯಕ್ಕೆ ಲಾಕ್​ಡೌನ್ ತೆರವುಗೊಳಿಸಲಾಗಿದ್ದರೂ ಕೆಲವು ಧಾರ್ಮಿಕ ಕೇಂದ್ರಗಳಿಗೆ, ಸಮಾರಂಭಗಳಿಗೆ, ಉತ್ಸವಗಳಿಗೆ ಇನ್ನೂ ನಿಷೇಧ ಮುಂದುವರೆದಿದೆ. ಭಾರತದ ಹಿಂದೂಗಳ ಪವಿತ್ರವಾದ ಚಾರ್ ಧಾಮ್ ಯಾತ್ರೆಗೆ ಆಗಸ್ಟ್​ 18ರವರೆಗೆ ನಿಷೇಧ ಹೇರಲಾಗಿದೆ. ಕೋವಿಡ್ ಸೋಂಕು ಹರಡುವಿಕೆ ಕಡಿಮೆಯಾಗದ ಕಾರಣದಿಂದ ಆಗಸ್ಟ್ 18ರವರಗೆ ಚಾರ್ ಧಾಮ್ ಯಾತ್ರೆಯನ್ನು (Char Dham Yatra) ನಿರ್ಬಂಧಿಸುವುದಾಗಿ ನೈನಿತಾಲ್ ಹೈಕೋರ್ಟ್ ಆದೇಶಿಸಿದೆ.

ದೇಶದಲ್ಲಿ ಇನ್ನೂ ಕೊರೋನಾ ಹಾವಳಿ ಕಡಿಮೆಯಾಗದ ಕಾರಣದಿಂದ ಚಾರ್ ಧಾಮ್ ಯಾತ್ರೆಯಿಂದ ಮತ್ತೆ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಆಗಸ್ಟ್ 18ವರೆಗೆ ಚಾರ್ ಧಾಮ್ ಯಾತ್ರೆಗೆ ನಿಷೇಧ ಹೇರಿರುವುದಾಗಿ ನೈನಿತಾಲ್ ಹೈಕೋರ್ಟ್ ತಿಳಿಸಿದೆ. ಹಾಗೇ, ಪ್ರವಾಸಿ ಸ್ಥಳಗಳಲ್ಲಿ ಕೋವಿಡ್ ಸಂಬಂಧಿತ ನಿಯಮಾವಳಿಗಳನ್ನು ಅನುಸರಿಸದಿರುವುದಕ್ಕೆ ಉತ್ತರಾಖಂಡ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಕಳೆದ ಮೇ 14ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಯಾತ್ರೆಯನ್ನು ಮುಂದೂಡಲಾಗಿತ್ತು. ಕೇದಾರನಾಥ ದೇವಾಲಯವನ್ನೂ ಒಳಗೊಂಡಿರುವ ಚಾರ್ ಧಾಮ್ ಯಾತ್ರೆಗೆ ಅವಕಾಶ ನೀಡಿದರೆ ಲಕ್ಷಾಂತರ ಪ್ರವಾಸಿಗರು ದಂಡಾಗಿ ಆಗಮಿಸುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕೇದಾರನಾಥ, ಬದರಿನಾಥ, ಯಮುನೋತ್ರಿ, ಗಂಗೋತ್ರಿ ಯಾತ್ರೆಗೆ ಪ್ರತಿವರ್ಷ ಲಕ್ಷಾಂತರ ಭಕ್ತರು, ಪ್ರವಾಸಿಗರು, ವಿದೇಶಿಗರು ಆಗಮಿಸುತ್ತಾರೆ.

ಕೊರೋನಾದಿಂದಾಗಿ ಉತ್ತರಾಖಂಡ ಸರ್ಕಾರ ಮೂರು ಜಿಲ್ಲೆಗಳಾದ ಚಮೋಲಿ, ರುದ್ರಪ್ರಯಾಗ, ಉತ್ತರಕಾಶಿಯ ಜನರಿಗೆ ಚಾರ್ ಧಾಮ ಯಾತ್ರೆಗೆ ಅವಕಾಶ ನೀಡುವುದಾಗಿ ಘೋಷಿಸಿತ್ತು.

ಇದನ್ನೂ ಓದಿ: Covid Vaccination: ಮುಂದಿನ ತಿಂಗಳು ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯ; ಕೇಂದ್ರ ಸರ್ಕಾರ ಮಾಹಿತಿ

(Char Dham Yatra: Nainital High Court bans Char Dham Yatra till August 18 amid of Covid Pandemic)

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ