ಅಕ್ಕ-ತಂಗಿ ಇಬ್ಬರೂ ಟೆಕ್ಕಿಗಳು, WFH ಮಾಡ್ತಿದ್ದರು: ಆದರೆ ಅಕ್ಕ ಸಾವು, ತಂಗಿ ಪರಾರಿ! ಸಂಚಲನ ಮೂಡಿಸಿದೆ ಆ ನಿಗೂಢ ಸಾವು

|

Updated on: Aug 30, 2023 | 1:51 PM

Telangana: ಇಬ್ಬರು ಪುತ್ರಿಯರಾದ ದೀಪ್ತಿ ಮತ್ತು ಚಂದನಾ ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು, ಇಬ್ಬರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಮಂಗಳವಾರ ಬೆಳಗ್ಗೆ ಇಬ್ಬರು ಪುತ್ರಿಯರ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಶ್ರೀನಿವಾಸ್ ರೆಡ್ಡಿ ಅಕ್ಕಪಕ್ಕದವರಿಗೆ ಕರೆ ಮಾಡಿದಾಗ ಮನೆಯಲ್ಲಿ ತಮ್ಮ ಹೆಣ್ಣು ಮಕ್ಕಳಿದ್ದು, ಅವರ ಫೋನ್ ಕೆಲಸ ಮಾಡುತ್ತಿಲ್ಲ. ಹೋಗಿ ನೋಡಿಬನ್ನಿ ಎಂದು ತಿಳಿಸಿದ್ದಾರೆ. ಅದರಂತೆ...

ಅಕ್ಕ-ತಂಗಿ ಇಬ್ಬರೂ ಟೆಕ್ಕಿಗಳು, WFH ಮಾಡ್ತಿದ್ದರು: ಆದರೆ ಅಕ್ಕ ಸಾವು, ತಂಗಿ ಪರಾರಿ! ಸಂಚಲನ ಮೂಡಿಸಿದೆ ಆ ನಿಗೂಢ ಸಾವು
ಅಕ್ಕ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವು, ತಂಗಿ ಪರಾರಿ!
Follow us on

ಅಲ್ಲಿಯವರೆಗೂ ಆ ಅಕ್ಕ ತಂಗಿಯರಿಬ್ಬರೂ (sisters) ಖುಷ್ ಖುಷಿಯಾಗಿದ್ದರು… ಶುಭ ಕಾರ್ಯಕ್ರಮಕ್ಕೆಂದು ಪೋಷಕರು ಹೈದರಾಬಾದ್ ಗೆ ತೆರಳಿದ್ದರು. ಪಾಲಕರು ಹುಷಾರಾಗಿರಿ ಎಂದು ಸಹಜವಾಗಿಯೇ ಹೇಳಿ ಹೋಗಿದ್ದ ರು.. ಆದರೆ ಅವರು ಮರಳಿ ಮನೆಗೆ ಬಂದಾಗ. ಒಬ್ಬ ಮಗಳು ಪರಲೋಕವಾಸಿಯಾಗಿದ್ದಳು. ಇನ್ನು ಮತ್ತೊಬ್ಬಳು ಮನೆ ಬಿಟ್ಟು ಹೋಗಿದ್ದಳು (missing). ಹಾಗಾದರೆ ಅಲ್ಲಿ ಏನಾಯಿತು? ಪೊಲೀಸರು ಹಾಗೂ ಸ್ಥಳೀಯರು ನೀಡಿದ ವಿವರ ಇಂತಿದೆ. ಜಗಿತ್ಯಾಲ (jagityala) ಜಿಲ್ಲೆಯ ಕೋರುಟ್ಲಾ ಪಟ್ಟಣದ ಭೀಮುನಿ ದುಬ್ಬಾ ಪ್ರದೇಶದಲ್ಲಿ ಯುವತಿಯೊಬ್ಬಳ ಸಾವು ಸಂಚಲನ ಮೂಡಿಸಿದೆ. ಈ ವೇಳೆ ಮನೆಯ ಹಿರಿಯ ಮಗಳ ಸಾವಿನ ವೇಳೆಯೇ ತಂಗಿ ನಾಪತ್ತೆಯಾಗಿರುವುದು ಸಂಚಲನ ಮೂಡಿಸಿದೆ. ಪೊಲೀಸರು ಹಲವು ತಿರುವುಗಳನ್ನು ಕಂಡುಕೊಂಡಿದ್ದಾರೆ. ಚಿಕ್ಕವಳ ಬಗ್ಗೆಯೇ ಅನುಮಾನ (mysterious death) ಬಂದಿದೆ.

ಬಹುಮುಖ್ಯವಾದ ಸಂಗತಿ, ದೃಶ್ಯಾವಳಿಯೆಂದರೆ… ಬಸ್ ನಿಲ್ದಾಣದಲ್ಲಿ ಸಿಕ್ಕಿರುವ ಸಿಸಿ ದೃಶ್ಯಾವಳಿಗಳು ಇಲ್ಲಿ ನಿರ್ಣಾಯಕವೆನಿಸಿದೆ. ಜಗಿತ್ಯಾಲ ಜಿಲ್ಲೆಯ ಕೋರುಟ್ಲಾ ಪಟ್ಟಣದಲ್ಲಿ ವಾಸವಾಗಿರುವ ಶ್ರೀನಿವಾಸ್ ರೆಡ್ಡಿ ಮತ್ತು ಮಾಧವಿ ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಶ್ರೀನಿವಾಸ್ ರೆಡ್ಡಿ ದಂಪತಿ ಸೋಮವಾರ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಹೈದರಾಬಾದ್‌ಗೆ ತೆರಳಿದ್ದರು. ಮಗ ಹೈದರಾಬಾದ್‌ನಲ್ಲಿ ಓದುತ್ತಿದ್ದಾನೆ. ಇಬ್ಬರು ಪುತ್ರಿಯರಾದ ದೀಪ್ತಿ ಮತ್ತು ಚಂದನಾ ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು, ಇಬ್ಬರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

ಆದರೆ ಮಂಗಳವಾರ ಬೆಳಗ್ಗೆ ಇಬ್ಬರು ಪುತ್ರಿಯರ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಶ್ರೀನಿವಾಸ್ ರೆಡ್ಡಿ ಅಕ್ಕಪಕ್ಕದವರಿಗೆ ಕರೆ ಮಾಡಿದಾಗ ಮನೆಯಲ್ಲಿ ತಮ್ಮ ಹೆಣ್ಣು ಮಕ್ಕಳಿದ್ದು, ಅವರ ಫೋನ್ ಕೆಲಸ ಮಾಡುತ್ತಿಲ್ಲ. ಹೋಗಿ ನೋಡಿಬನ್ನಿ ಎಂದು ತಿಳಿಸಿದ್ದಾರೆ. ಅದರಂತೆ ಅಕ್ಕಪಕ್ಕದವರು ಹೋಗಿ ನೋಡಿದಾಗ ಹಿರಿಯ ಮಗಳು ದೀಪ್ತಿ ಸೋಫಾದಲ್ಲಿ ನಿಶ್ಚಲವಾಗಿ ಮಲಗಿದ್ದಳು. ನೆರೆಹೊರೆಯವರು ಅದನ್ನೇ ಪೊಲೀಸರಿಗೆ ಮತ್ತು ಪೋಷಕರಿಗೆ ತಿಳಿಸಿದ್ದಾರೆ.

ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವು ಸುಳಿವುಗಳನ್ನು ಸಂಗ್ರಹಿಸಿದ್ದಾರೆ. ಅದೇ ಮನೆಯಲ್ಲಿ ಇರಬೇಕಿದ್ದ ಮೃತಳ ಸಹೋದರಿ ಚಂದನಾ ನಾಪತ್ತೆಯಾಗಿದ್ದು, ಪೊಲೀಸರು ಆಕೆಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಬಸ್ ನಿಲ್ದಾಣದ ಸಿಸಿ ಪುಟೇಜ್​ನಲ್ಲಿ ಚಂದನಾ ಜೊತೆಗೆ ಮತ್ತೊಬ್ಬ ಯುವಕ ಬಸ್ ಹತ್ತಿದ ದೃಶ್ಯ ಕಂಡು ಬಂದಿದೆ. ದೀಪ್ತಿ ಸಾವಿಗೂ ಆಕೆಯ ಸಹೋದರಿ ಓಡಿಹೋಗಿರುವುದಕ್ಕೂ ಸಂಬಂಧವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತೀವ್ರ ತನಿಖೆ ನಡೆಸುತ್ತಿದ್ದಾರೆ.

Also Read: Gruha Lakshmi Launch Live: ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಸಂಬಂಧಿಕರನ್ನು ಭೇಟಿ ಮಾಡಲು ಹೈದರಾಬಾದ್‌ಗೆ ಹೋಗಿ ರಾತ್ರಿ ತಮ್ಮ ಹೆಣ್ಣುಮಕ್ಕಳೊಂದಿಗೆ ಮಾತನಾಡಿದ್ದೆವು ಎಂದು ಪೋಷಕರು ಹೇಳುತ್ತಾರೆ. ಮಾರನೆಯ ದಿನ ಬೆಳಗ್ಗೆ ಬರುತ್ತೇವೆ ಎಂದಿದ್ದೆವು. ಈ ಮಧ್ಯೆ ಮನೆಯಲ್ಲಿ ರಾತ್ರಿ ವೇಳೆ ಏನಾಯಿತೋ ಗೊತ್ತಿಲ್ಲ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಮೃತಳ ತಂಗಿ ಮತ್ತು ಆಕೆಯ ಜೊತೆ ಹೋಗಿರುವ ಯುವಕನ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ