ಪುಣೆ: ಹಾರ್ಡ್​ವೇರ್ ಅಂಗಡಿಯಲ್ಲಿ ಅಗ್ನಿ ಅವಘಡ, ನಾಲ್ವರು ಸಾವು

ಎಲೆಕ್ಟ್ರಿಕ್ ಹಾರ್ಡ್​ವೇರ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್ ನಗರದ ಶಾಹುನಗರ ಪ್ರದೇಶದ ಎಲೆಕ್ಟ್ರಿಕ್ ಹಾರ್ಡ್‌ವೇರ್ ಅಂಗಡಿಯಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡು 10 ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಪುಣೆ: ಹಾರ್ಡ್​ವೇರ್ ಅಂಗಡಿಯಲ್ಲಿ ಅಗ್ನಿ ಅವಘಡ, ನಾಲ್ವರು ಸಾವು
ಬೆಂಕಿ
Follow us
|

Updated on: Aug 30, 2023 | 1:07 PM

ಎಲೆಕ್ಟ್ರಿಕ್ ಹಾರ್ಡ್​ವೇರ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್ ನಗರದ ಶಾಹುನಗರ ಪ್ರದೇಶದ ಎಲೆಕ್ಟ್ರಿಕ್ ಹಾರ್ಡ್‌ವೇರ್ ಅಂಗಡಿಯಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡು 10 ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಅಗ್ನಿಶಾಮಕ ಇಲಾಖೆಯ ಅಧಿಕಾರಿಯ ಪ್ರಕಾರ, ಈ ಘಟನೆಯು ಮುಂಜಾನೆ 5 ಗಂಟೆಯ ಸುಮಾರಿಗೆ ಅಂಗಡಿಯಲ್ಲಿ ನಡೆದಿದ್ದು, ನೆಲ ಮಹಡಿಯಲ್ಲಿದ್ದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿ ಮೇಲಿದ್ದ ಮನೆಯಲ್ಲಿ ನಾಲ್ವರು ಇದ್ದರು, ಹಾಗಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ನಂದಿಸಲಾಗಿದೆ.

ಮೃತರನ್ನು ಚಿಮ್ನಾರಾಮ್ ಚೌಧರಿ (45), ನಮ್ರತಾ ಚಿಮ್ನಾರಾಮ್ ಚೌಧರಿ (40), ಭವೇಶ್ ಚೌಧರಿ (15) ಮತ್ತು ಸಚಿನ್ ಚೌಧರಿ (10) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಹಾವೇರಿ: ಗಣಪತಿ ಹಬ್ಬಕ್ಕೆಂದು ಪಟಾಕಿ ತಂದು ದಾಸ್ತಾನು ಮಾಡಿದ್ದ ಗೋಡೌನ್​ಗೆ ಬೆಂಕಿ; 1 ಕೋಟಿ ರೂ. ಅಧಿಕ ಮೌಲ್ಯದ ಪಟಾಕಿ ಭಸ್ಮ

ವಸತಿ ಕಟ್ಟಡದ ನೆಲ ಮಹಡಿಯಲ್ಲಿರುವ ಎಲೆಕ್ಟ್ರಿಕ್ ಹಾರ್ಡ್‌ವೇರ್ ಅಂಗಡಿ ಸುಟ್ಟು ಕರಕಲಾಗಿದೆ. ಪಿಂಪ್ರಿ ಚಿಂಚ್‌ವಾಡ್‌ನ ಚಿಖ್ಲಿ ಪ್ರದೇಶದ ಪೂರ್ಣ ನಗರದಲ್ಲಿರುವ ಪೂಜಾ ಹೈಟ್ಸ್ ಕಟ್ಟಡದಲ್ಲಿರುವ ಅಂಗಡಿಯಲ್ಲಿ ಮುಂಜಾನೆ 5. 25 ಗಂಟೆಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ