ಮಗ ಬೇಕಂದ್ರೆ 10 ಲಕ್ಷ ಕೊಡಿ ಅಂದಿತ್ತು ಆ ಒಂದು ಧ್ವನಿ! ಹಾಗೆ ಭಯ ಹುಟ್ಸಿದ್ದು ಯಾರು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Oct 09, 2020 | 2:28 PM

ಚೆನ್ನೈ: ನಿಮ್ಮ ಮಗನನ್ನು ನಾವು ಕಿಡ್ನಾಪ್​ ಮಾಡಿದ್ದೀವಿ. ಅವನನ್ನು ಜೀವಂತವಾಗಿ ನೋಡಬೇಕಂದ್ರೆ 10 ಲಕ್ಷ ರೂಪಾಯಿ ಮೊತ್ತವನ್ನು ಕೊಡಬೇಕು ಅಂತಾ ಚೆನ್ನೈನ ಟ್ರಿಪ್ಲಿಕೇನ್​ ಬಡಾವಣೆಯ ಕುಟುಂಬ ಒಂದಕ್ಕೆ ಕಳೆದ ಬುಧವಾರ ರಾತ್ರಿ ದೂರವಾಣಿ ಕರೆ ಬಂದಿತ್ತು. ಮಗನ ಅಪಹರಣದ ಸುದ್ದಿ ಕೇಳಿ ಕೊಂಚ ಶಾಕ್​ ಆದ ತಂದೆ ಕೂಡಲೇ ಪೊಲೀಸರ ಮೊರೆ ಹೋಗುತ್ತಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಖಾಕಿ ಪಡೆ ಕರೆ ಬಂದ ಮೊಬೈಲ್​ ನಂಬರ್​ನ ಪತ್ತೆ ಹಚ್ಚೋಕೆ ಮುಂದಾದರು. ಮೊಬೈಲ್​ ಟವರ್​ ಲೊಕೇಷನ್​ ಮುಖಾಂತರ ಅಪಹರಣದ ಕರೆ […]

ಮಗ ಬೇಕಂದ್ರೆ 10 ಲಕ್ಷ ಕೊಡಿ ಅಂದಿತ್ತು ಆ ಒಂದು ಧ್ವನಿ! ಹಾಗೆ ಭಯ ಹುಟ್ಸಿದ್ದು ಯಾರು ಗೊತ್ತಾ?
Follow us on

ಚೆನ್ನೈ: ನಿಮ್ಮ ಮಗನನ್ನು ನಾವು ಕಿಡ್ನಾಪ್​ ಮಾಡಿದ್ದೀವಿ. ಅವನನ್ನು ಜೀವಂತವಾಗಿ ನೋಡಬೇಕಂದ್ರೆ 10 ಲಕ್ಷ ರೂಪಾಯಿ ಮೊತ್ತವನ್ನು ಕೊಡಬೇಕು ಅಂತಾ ಚೆನ್ನೈನ ಟ್ರಿಪ್ಲಿಕೇನ್​ ಬಡಾವಣೆಯ ಕುಟುಂಬ ಒಂದಕ್ಕೆ ಕಳೆದ ಬುಧವಾರ ರಾತ್ರಿ ದೂರವಾಣಿ ಕರೆ ಬಂದಿತ್ತು. ಮಗನ ಅಪಹರಣದ ಸುದ್ದಿ ಕೇಳಿ ಕೊಂಚ ಶಾಕ್​ ಆದ ತಂದೆ ಕೂಡಲೇ ಪೊಲೀಸರ ಮೊರೆ ಹೋಗುತ್ತಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಖಾಕಿ ಪಡೆ ಕರೆ ಬಂದ ಮೊಬೈಲ್​ ನಂಬರ್​ನ ಪತ್ತೆ ಹಚ್ಚೋಕೆ ಮುಂದಾದರು. ಮೊಬೈಲ್​ ಟವರ್​ ಲೊಕೇಷನ್​ ಮುಖಾಂತರ ಅಪಹರಣದ ಕರೆ ಚೆಪಾಕ್​ ಏರಿಯಾದಿಂದ ಬಂದಿತ್ತು ಎಂದು ಪೊಲೀಸರು ಪತ್ತೆ ಹಚ್ಚುತ್ತಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲ್ಲಿ 14 ವರ್ಷದ ಹುಡುಗನೊಬ್ಬ ಸಿಕ್ಕ. ಆತ ಮತ್ತು ಏರಿಯಾದ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ತಂದು ಪರಿಶೀಲಿಸಲು ಮುಂದಾದರು.

ಹುಡುಗನನ್ನು ವಿಚಾರಿಸಿದಾಗ ಪೊಲೀಸರಿಗೆ ಗೊತ್ತಾಯ್ತು ಕಿಡ್ನಾಪ್​ ಆದ ಹುಡುಗ ಈತನೇ ಎಂದು. ಏನಪ್ಪಾ ನಿನ್ನ ಲೀಲೆ ಎಂದು ವಿಚಾರಿಸಿದಾಗ ಸಾರ್​ ನಮ್ಮ ತಂದೆ ನನ್ನನ್ನು ಸದಾ ತೆಗಳುತ್ತಿದ್ದರು. ಹಾಗಾಗಿ, ಅವರ ಸಹಾನುಭೂತಿ ಗಿಟ್ಟಿಸಲು ನಾನು ಹೀಗೆ ಮಾಡಿದೆ ಎಂದು ಬಾಯಿಬಿಟ್ಟಿದ್ದಾನೆ. ಅಂದ ಹಾಗೆ, ಫೋನ್​ನಲ್ಲಿ ನಿನ್ನ ವಾಯ್ಸ್​ ಬೇರೆ ಥರನೇ ಇತ್ತಲ್ಲ ಅಂದಿದ್ದಕ್ಕೆ ನನ್ನ ಮೊಬೈಲ್​ನಲ್ಲಿದ್ದ ಌಪ್​ನಿಂದ ದನಿ ಬದಲಾಯಿಸಿಕೊಂಡು ಕಾಲ್​ ಮಾಡ್ದೇ ಸಾರ್​ ಅಂತಾ ಹುಡುಗ ತುಂಟ ನಗೆ ಬೀರಿದ್ದಾನೆ.

ಜೊತೆಗೆ, ಇದು ನಿಜವಾದ ಅಪಹರಣ ಎಂದು ನಮ್ಮ ತಂದೆಯನ್ನ ನಂಬಿಸಲು ಹಣಕ್ಕಾಗಿ ಬೇಡಿಕೆಯಿಟ್ಟೆ ಎಂದು ಹೇಳಿದ್ದಾನೆ. ಮರುಗಿದ ಪೊಲೀಸರು ಮತ್ತೆ ಹೀಗೆ ಮಾಡದಂತೆ ಹುಡುಗನಿಗೆ ವಾರ್ನಿಂಗ್​ ಕೊಟ್ಟು, ಅವನ ಪೋಷಕರಿಂದ ಮುಚ್ಚಳಿಕೆ ಬರೆಸಿ ಕಳುಹಿಸಿಕೊಟ್ಟಿದ್ದಾರೆ.