ಮಕ್ಕಳು ಓದುವುದಿಲ್ಲ ಎನ್ನುವ ಕಾರಣಕ್ಕೆ ಪಾಲಕರು ಮಕ್ಕಳಿಗೆ ಬಯ್ಯೋದು ಸಾಮಾನ್ಯ. ಪಾಲಕರು ಬೈದಿದ್ದಕ್ಕೆ ಬಹುತೇಕ ಮಕ್ಕಳು ಅತ್ತು ಸುಮ್ಮನಾಗುತ್ತಾರೆ. ಆದರೆ, ಕೆಲವರು ಮನೆ ಬಿಟ್ಟು ಹೋದ ಉದಾಹರಣೆ ಕೂಡ ಇದೆ. ಗುಜರಾತ್ನ ಬಾಲಕ ಕೂಡ ಪಾಲಕರು ಬೈದಿದ್ದಕ್ಕೆ ಸಿಟ್ಟಾಗಿ ಮನೆ ಬಿಟ್ಟು ಹೋಗಿದ್ದಾನೆ! ಆದ್ರೆ ಜಾಣ ಬಾಲಕ ಮನೆ ಬಿಟ್ಟು ಹೋಗುವಾಗ ಮನೆಯಲ್ಲಿದ್ದ ಹಣವನ್ನು ದೋಚಿಕೊಂಡು ಗೋವಾಗೆ ಹೋಗಿದ್ದಾನೆ! ಅದೂ ಪಾರ್ಟಿ ಮಾಡಲು..
ಆ ಬಾಲಕನ ವಯಸ್ಸು ಕೇವಲ 14 ವರ್ಷ. ಆನ್ಲೈನ್ ಕ್ಲಾಸ್ಗಳು ನಡೆಯುತ್ತಿದ್ದರಿಂದ 24 ಗಂಟೆ ಮನೆಯಲ್ಲೇ ಇರುತ್ತಿದ್ದ. ಹೀಗಾಗಿ, ಬೇಸರ ಬಂದಾಗ ಆಗಾಗ ಗೇಮ್ ಆಡುತ್ತಿದ್ದ. ಇದರಿಂದ ಸಿಟ್ಟಾದ ಪಾಲಕರು ಸರಿಯಾಗಿ ಓದುವಂತೆ ಗದರಿಸುತ್ತಿದ್ದರು. ಈ ಪ್ರಕ್ರಿಯೆ ನಿತ್ಯವೂ ನಡೆದೇ ಇತ್ತು.
ಪಾಲಕರು ಪದೇಪದೇ ಬೈದಿದ್ದನ್ನು ಆತನಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟಾದ ಬಾಲಕ ಗೋವಾಗೆ ತೆರಳಲು ನಿರ್ಧರಿಸಿದ್ದ. ಇದಕ್ಕಾಗಿ ಮನೆಯ ಬೀರುವಿನಲ್ಲಿಟ್ಟಿದ್ದ ಒಂದೂವರೆ ಲಕ್ಷ ಹಣವನ್ನು ಕದ್ದಿದ್ದ. ಈತ ವಡೋದರಾದಿಂದ ರೈಲ್ವೆ ಮೂಲಕ ಗೋವಾಗೆ ತೆರಳಲು ಪ್ರಯತ್ನಿಸಿದ್ದ. ಆದರೆ, ಆಧಾರ್ ಕಾರ್ಡ್ ಇಲ್ಲದ ಕಾರಣ ಆತನಿಗೆ ರೈಲ್ವೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ, ಬಸ್ ಮೂಲಕ ಪುಣೆಗೆ ಹೋಗಿದ್ದ. ಅಲ್ಲಿಂದ ಗೋವಾಗೆ ಪ್ರಯಾಣಿಸಿದ್ದ.
ಗೋವಾದಲ್ಲಿ ನೈಟ್ ಕ್ಲಬ್ಗಳಿಗೆ ತೆರಳಿ ಹಣವನ್ನು ಉಡಾಯಿಸಿದ್ದ. ಐಷಾರಾಮಿ ಹೋಟೆಲ್ನಲ್ಲಿ ಬಾಲಕ ಉಳಿದುಕೊಂಡಿದ್ದ. ಇನ್ನೇನು ಹಣ ಖಾಲಿ ಆಗುತ್ತದೆ ಎನ್ನುವಾಗ ಬಾಲಕ ಮರಳಿ ಪುಣೆಗೆ ಬಂದಿದ್ದ. ಈತ ಒಬ್ಬಂಟಿಯಾಗಿ ತಿರುಗಾಡುವುದನ್ನು ಕಂಡ ಪೊಲೀಸರು ಅನುಮಾನಗೊಂಡು ಆತನನ್ನು ವಿಚಾರಿಸಿದ್ದರು. ಈ ವೇಳೆ ಬಾಲಕ ನಡೆದ ಘಟನೆ ವಿವರಿಸಿದ್ದಾನೆ. ನಂತರ ಪೊಲೀಸರು ಬಾಲಕನನ್ನು ಮರಳಿ ವಡೋದರಾಗೆ ಕಳುಹಿಸಿದ್ದಾರೆ.
ಎಟಿಎಂ ಸರ್ವಿಸ್ ನೆಪದಲ್ಲಿ ATMನಿಂದ ಹಣ ಎಗರಿಸುತ್ತಿದ್ದ ಖದೀಮ ಈಗ ಖಾಕಿ ಅತಿಥಿ