ಈ ದೇವಸ್ಥಾನದ ಅಡಿಗಲ್ಲು ಕಾರ್ಯಕ್ರಮಕ್ಕೆ ಬಳಕೆಯಾಗಿದ್ದು 11 ಸಾವಿರ ಲೀಟರ್​ ಹಾಲು-ತುಪ್ಪ!

ಇತ್ತೀಚೆಗೆ ಈ ದೇವಸ್ಥಾನದ ಅಡಿಗಲ್ಲು ಸಮಾರಂಭ ನಡೆದಿತ್ತು. ಮೊದಲ ಬಾರಿಗೆ ಭೂಮಿ ಪೊಜೆ ಮಾಡುವಾಗ ನೈವೇದ್ಯಕ್ಕಾಗಿ ಹಾಲು, ತುಪ್ಪ ಮೊಸರು ಇತ್ಯಾದಿ ಬಳಕೆ ಮಾಡುತ್ತಾರೆ. ಆದರೆ, ಇಲ್ಲಿ, ಒಂದಲ್ಲ ಎರಡಲ್ಲ ಬರೋಬ್ಬರಿ 11 ಸಾವಿರ ಲೀಟರ್​ ಹಾಲು, ತುಪ್ಪ, ಮೊಸರು ಬಳಕೆ ಆಗಿತ್ತು.

ಈ ದೇವಸ್ಥಾನದ ಅಡಿಗಲ್ಲು ಕಾರ್ಯಕ್ರಮಕ್ಕೆ ಬಳಕೆಯಾಗಿದ್ದು 11 ಸಾವಿರ ಲೀಟರ್​ ಹಾಲು-ತುಪ್ಪ!
ಈ ದೇವಸ್ಥಾನದ ಅಡಿಗಲ್ಲು ಕಾರ್ಯಕ್ರಮಕ್ಕೆ ಬಳಕೆ ಆಯ್ತು 11 ಸಾವಿರ ಲೀಟರ್​ ಹಾಲು-ತುಪ್ಪ!
Rajesh Duggumane

| Edited By: sadhu srinath

Dec 29, 2020 | 6:19 PM

ಕೋಟಾ: ಅಲ್ಲಿ ದೇವಸ್ಥಾನದ ಅಡಿಗಲ್ಲು ಸಮಾರಂಭ ನೆರವೇರುತ್ತಿತ್ತು. ಸಮಾರಂಭದಲ್ಲಿ ನೆರೆದಿದ್ದ ಬಹುತೇಕರ ಕೈಯಲ್ಲಿ ದೊಡ್ಡ ದೊಡ್ಡ ಬಿಂದಿಗೆ ಹಾಗೂ ಬಾಟಲಿಗಳಿದ್ದವು. ಅದರ ತುಂಬ ಹಾಲು, ಮೊಸರು, ತುಪ್ಪ ಇತ್ತು. ಇದನ್ನು ಎಲ್ಲರೂ ತಂದು ತಂದು ಅಡಿಗಲ್ಲು ಸಮಾರಂಭಕ್ಕೆ ತೋಡಿದ್ದ ಗುಂಡಿಗೆ ಸುರಿಯುತ್ತಿದ್ದರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಈ ದೃಶ್ಯ ಕಂಡು ಬಂದಿದ್ದು ರಾಜಸ್ಥಾನದ ಜಲಾವರ್​ ಜಿಲ್ಲೆಯಲ್ಲಿ. ಇಲ್ಲಿ ದೇವನಾರಾಯಣ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ಇತ್ತೀಚೆಗೆ ಈ ದೇವಸ್ಥಾನದ ಅಡಿಗಲ್ಲು ಸಮಾರಂಭ ನಡೆದಿತ್ತು. ಮೊದಲ ಬಾರಿಗೆ ಭೂಮಿ ಪೊಜೆ ಮಾಡುವಾಗ ನೈವೇದ್ಯಕ್ಕಾಗಿ ಹಾಲು, ತುಪ್ಪ ಮೊಸರು ಇತ್ಯಾದಿ ಬಳಕೆ ಮಾಡುತ್ತಾರೆ. ಆದರೆ, ಇಲ್ಲಿ, ಒಂದಲ್ಲ ಎರಡಲ್ಲ ಬರೋಬ್ಬರಿ 11 ಸಾವಿರ ಲೀಟರ್​ ಹಾಲು, ತುಪ್ಪ, ಮೊಸರು ಬಳಕೆ ಆಗಿತ್ತು.

11 ಸಾವಿರ ಲೀಟರ್​ನಲ್ಲಿ 1,500 ಲೀಟರ್​ ಮೊಸರು, 1 ಕ್ಷಿಂಟಾಲ್​ ದೇಸಿ ತುಪ್ಪ ಹಾಗೂ ಉಳಿದವು ಹಾಲು. ಇದಕ್ಕೆ ತಗುಲಿದ ವೆಚ್ಛ ಬರೋಬ್ಬರಿ 1.50 ಲಕ್ಷ ರೂಪಾಯಿ.

ನಾವು ದೇವರಿಗೆ ನೀಡಿದ್ದು ಎಂದಿಗೂ ವ್ಯರ್ಥವಾಗುವುದಿಲ್ಲ.. ಈ ಬಗ್ಗೆ ಗುಜ್ಜರ್​ ಸಮುದಾಯದವರು ಪ್ರತಿಕ್ರಿಯೆ ನೀಡಿದ್ದಾರೆ. ನಾವು ಈ ಮೊದಲು ಕೂಡ ಈ ರೀತಿ ಸಾಕಷ್ಟು ಬಾರಿ ಮಾಡಿದ್ದೇವೆ. ದೇವರು ನಮಗೆ ನೀಡಿದ್ದಕ್ಕೆ ಹೋಲಿಕೆ ಮಾಡಿದರೆ ನಾವು ದೇವರಿಗೆ ನೀಡುತ್ತಿರುವುದು ಏನು ಅಲ್ಲ. ನಾವು ದೇವರಿಗೆ ನೀಡಿದ್ದು ಎಂದಿಗೂ ವ್ಯರ್ಥವಾಗುವುದಿಲ್ಲ. ದೇವರು ನಮಗೆ ಅದನ್ನು ಹಿಂದಿರುಗಿಸುತ್ತಾರೆ ಎನ್ನುವ ಅಭಿಪ್ರಾಯ ಗುಜ್ಜರ್​ ಸಮುದಾಯದವರದ್ದು.

ದೇವನಾರಾಯಣ ದೇವಸ್ಥಾನಕ್ಕೆ ಒಂದು ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಎರಡು ವರ್ಷಗಳಲ್ಲಿ ಈ ದೇವಸ್ಥಾನ ತಲೆ ಎತ್ತಲಿದೆ.

ಶ್ರೀರಾಮ ಮಂದಿರ ಪಕ್ಕದಲ್ಲಿಯೇ ಕರ್ನಾಟಕ ಯಾತ್ರಿ ನಿವಾಸ ಕಟ್ಟುತ್ತಾ ರಾಜ್ಯ ಸರ್ಕಾರ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada