Play Store ​ನಲ್ಲಿದೆ ಸಾಲ ನೀಡುವ 426 ಕಿರಿಕಿರಿ ಕಿರಿಕ್ ಆ್ಯಪ್​ಗಳು! ಇವುಗಳಿಗಿದೆ ಚೀನಾ ನಂಟು

ಪ್ಲೇ ಸ್ಟೋರ್​ನಲ್ಲಿ ತಕ್ಷಣಕ್ಕೆ ಸಾಲ ನೀಡುವ ಸುಮಾರು 426 ಆ್ಯಪ್​ಗಳಿವೆ. ಇವುಗಳಲ್ಲಿ ಬಹುತೇಕ ಆ್ಯಪ್​ಗಳು ಸಾಲ ನೀಡಿ ನಂತರ ಕಿರಿಕಿರಿ ಉಂಟು ಮಾಡುವ ಸಾಲಿನಲ್ಲಿವೆ ಎನ್ನಲಾಗಿದೆ.

Play Store ​ನಲ್ಲಿದೆ ಸಾಲ ನೀಡುವ 426 ಕಿರಿಕಿರಿ ಕಿರಿಕ್ ಆ್ಯಪ್​ಗಳು! ಇವುಗಳಿಗಿದೆ ಚೀನಾ ನಂಟು
ಪ್ರಾತಿನಿಧಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on:Dec 29, 2020 | 4:16 PM

ಬೆಂಗಳೂರು: ಆ್ಯಪ್​ ಮುಖಾಂತರ ಸಾಲ ನೀಡಿ, ನಂತರ ಅದನ್ನು ಹಿಂದಿರುಗಿಸದೆ ಇದ್ದರೆ ಭಾರೀ ಕಿರಿಕಿರಿ ಉಂಟು ಮಾಡುವ ಸುಮಾರು 426 ಆ್ಯಪ್​ಗಳು ಪ್ಲೇ ಸ್ಟೋರ್​ನಲ್ಲಿವೆ ಎನ್ನುವ ಮಾಹಿತಿ ಹೊರ ಬಿದ್ದಿದೆ.

ಆ್ಯಪ್​ ಮೂಲಕ ತಕ್ಷಣಕ್ಕೆ ಸಾಲ ನೀಡಿ, ನಂತರ ದುಬಾರಿ ಬಡ್ಡಿ ವಿಧಿಸುತ್ತಿದ್ದ ವಿಚಾರ ತೆಲಂಗಾಣದಲ್ಲಿ ಬೆಳಕಿಗೆ ಬಂದಿತ್ತು. ಅಲ್ಲದೆ, ಈ ಪ್ರಕರಣದಲ್ಲಿ ಕೆಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದರು. ಈ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವಾಗಲೇ ಮತ್ತಷ್ಟು ಲೋನ್ ಆ್ಯಪ್​​ಗಳ ಮುಖವಾಡ ಬಯಲಾಗಿದೆ.

ಗೂಗಲ್​ ಪ್ಲೇಸ್ಟೋರ್​ನಲ್ಲಿ ತಕ್ಷಣಕ್ಕೆ ಸಾಲ ನೀಡುವ ಸುಮಾರು 426 ಆ್ಯಪ್​ಗಳಿವೆ. ಇವುಗಳಲ್ಲಿ ಬಹುತೇಕ ಆ್ಯಪ್​ಗಳು ಸಾಲ ನೀಡಿ ನಂತರ ಕಿರಿಕಿರಿ ಉಂಟು ಮಾಡುವ ಸಾಲಿನಲ್ಲಿವೆ ಎನ್ನಲಾಗಿದೆ.

ಈ ಬಗ್ಗೆ ಶ್ರೀಕಾಂತ್​ ಎಲ್​ ಎಂಬುವವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಗೂಗಲ್​ ಪ್ಲೇ ಸ್ಟೋರ್​ನಲ್ಲಿ ತಕ್ಷಣಕ್ಕೆ ಸಾಲ ನೀಡುವ 426 ಆ್ಯಪ್​ಗಳಿವೆ. ಇವಗಳಲ್ಲಿ ಹೆಚ್ಚಿನವು ಚೀನಾ ಹಿನ್ನೆಲೆ ಹೊಂದಿರುವ  ಅಪ್ಲಿಕೇಶನ್‌ಗಳಾಗಿವೆ. ಇವುಗಳಲ್ಲಿ ಕೆಲವೊಂದು ಆ್ಯಪ್​ಗಳು ದಕ್ಷಿಣ ಹಾಗೂ ಪೂರ್ವ ಏಷ್ಯಾ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಗತವಾಗಿವೆ. ಇದರ ಜೊತೆಗೆ ಪ್ಲೇ ಸ್ಟೋರ್​ನಲ್ಲಿ ಇಲ್ಲದೆ ಇರುವ 260 ಆ್ಯಪ್​ಗಳ ಬಗ್ಗೆಯೂ ನಮ್ಮಲ್ಲಿ ಮಾಹಿತಿ ಇದೆ ಎಂದಿದ್ದಾರೆ ಅವರು.

ಈ ಆ್ಯಪ್​ಗಳು ಯಾವುದೇ ಬ್ಯಾಂಕ್​ಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಇವು ನೇರವಾಗಿ ಗ್ರಾಹಕರನ್ನು ಭೇಟಿ ಮಾಡಿ ಅವರಿಗೆ ಸಾಲ ನೀಡುವ ಕೆಲಸ ಮಾಡುತ್ತಿವೆ. ಹೆಚ್ಚಿನ ಬಡ್ಡಿಗೆ ಸಾಲ ನೀಡಿದ ನಂತರ ಅದನ್ನು ಹಿಂದಿರುಗಿಸದಿದ್ದರೆ ಕಿರುಕುಳ ನೀಡುತ್ತಾರೆ.

ಏನಿದು ಈ ಹಿಂದಿನ ಪ್ರಕರಣ? ತೆಲಂಗಾಣ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಖಾಸಗಿ ಕಂಪೆನಿಯ ಟೆಕ್ಕಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರಿಗೆ ಆ ಬಗ್ಗೆ ಅನುಮಾನ ಇತ್ತು. ಅನುಮಾನದ ಬೆನ್ನು ಹತ್ತಿ ಹೋದಾಗ ಆತ್ಮಹತ್ಯೆಯ ನಿಜವಾದ ಕಾರಣ ಬಯಲಾಗಿತ್ತು. ಅವರಿಬ್ಬರೂ ಇನ್​​ಸ್ಟಂಟ್​ ಆ್ಯಪ್​ ಮೂಲಕ ಸಾಲ ಪಡೆದಿದ್ದರು.

ಆದರೆ, ಸಾಲ ಪಡೆದ ನಂತರ ಅದನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಟಿಲಿ ಕಾಲರ್​ಗಳು ಹಾಗೂ ರಿಕವರಿ ಏಜೆಂಟ್​ಗಳು ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದರು. ಅಷ್ಟೇ ಅಲ್ಲ ಅವರ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಸಾಲಗಾರರು ಎನ್ನುವ ಹಣೆಪಟ್ಟಿ ಹಚ್ಚಿದ್ದರು. ಇಷ್ಟಕ್ಕೇ ಟಾರ್ಚರ್ ನಿಲ್ಲಿಸದೇ, ಸಾಲಗಾರರು ಹಾಗೂ ಅವರ ಕುಟುಂಬದವರಿಗೆ ಅಶ್ಲೀಲ ಶಬ್ದಗಳಲ್ಲಿ ಬೈದಿದ್ದರು. ಇದರಿಂದಾಗಿ ಸಾಲ ಪಡೆದವರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದರು.

Explainer | ಇನ್​ಸ್ಟಂಟ್​ ಲೋನ್​ ಕರ್ಮಕಾಂಡ: ಸ್ವಲ್ಪ ಯಾಮಾರಿದ್ರೂ ಕಿರುಕುಳ ಗ್ಯಾರಂಟಿ!

Published On - 3:36 pm, Tue, 29 December 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್