AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನ ಟ್ರೆಂಡ್ ಆಯ್ತು #BoycottPatanjali ಮತ್ತು #IsupportPatanjali

ಭವಿಷ್ಯದಲ್ಲಿ ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಬಳಸುವುದಿಲ್ಲವೆಂದು ಟ್ವೀಟ್ ಮಾಡುವವರೊಡನೆ, ಪತಂಜಲಿಯನ್ನು ಬಳಸುತ್ತೇವೆ ಎನ್ನುವವರು ಸ್ಪರ್ಧೆಗೆ ಇಳಿದತೆ ಕಂಡುಬಂತು.

ಒಂದೇ ದಿನ ಟ್ರೆಂಡ್ ಆಯ್ತು #BoycottPatanjali ಮತ್ತು #IsupportPatanjali
ಬಾಬಾ ರಾಮ್​ದೇವ್
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 15, 2020 | 6:41 PM

ಇಂದು ಇಡೀ ದಿನ ಟ್ವಿಟರ್​ನಲ್ಲಿ #BoycottPatanjali ಮತ್ತು #IsupportPatanjali ಹ್ಯಾಶ್​ಟ್ಯಾಗ್​ಗಳು ಟ್ರೆಂಡ್ ಆಗಿವೆ. ಭವಿಷ್ಯದಲ್ಲಿ ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಬಳಸುವುದಿಲ್ಲವೆಂದು ಟ್ವೀಟ್ ಮಾಡುವವರೊಡನೆ, ಪತಂಜಲಿಯನ್ನು ಬಳಸುತ್ತೇವೆ ಎನ್ನುವವರು ಸ್ಪರ್ಧೆಗೆ ಇಳಿದತೆ ಕಂಡುಬಂತು.

ಪತಂಜಲಿ ಉತ್ಪನ್ನಗಳ ಪರ ಟ್ವೀಟ್ ಮಾಡಿದವರ ಸಂಖ್ಯೆಯೂ ಕಡಿಮೆಯಿಲ್ಲ. ಪತಂಜಲಿ ಜಗತ್ತಿನ ಅತ್ಯಂತ ದೊಡ್ಡ ಕಂಪನಿ ಅಲ್ಲದಿರಬಹುದು. ಆದರೆ, ದೇಶದ ಸಾವಿರಾರು ಯುವಕರಿಗೆ ಪತಂಜಲಿ ಉದ್ಯೋಗ ನೀಡಿದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

#IsupportPatanjali ಹ್ಯಾಶ್​ಟ್ಯಾಗ್​ನ್ನು ರೀಟ್ವೀಟ್ ಮಾಡಿ ಹಲವರು ವ್ಯಂಗ್ಯ ಮಾಡಿದ್ದಾರೆ. ಪಂಜಾಬ್ ರೈತರ ದೆಹಲಿ ಚಲೋ, ಕಾರ್ಪೊರೇಟ್ ಕಂಪನಿಗಳು, ಜಿಯೋ ಸಿಮ್ ಮುಂತಾದ ಪದಗಳೂ ಈ ಹ್ಯಾಶ್​ಟ್ಯಾಗ್​​ನಲ್ಲಿ ಉಲ್ಲೇಖಿಸಲ್ಪಟ್ಟಿವೆ. ಇತ್ತೀಚಿಗಷ್ಟೇ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್​ಮೆಂಟ್ ಸಂಸ್ಥೆಯು ನಡೆಸಿದ ಪರೀಕ್ಷೆಯಲ್ಲಿ ಪತಂಜಲಿ ಸಂಸ್ಥೆಯ ಜೇನುತುಪ್ಪ ವಿಫಲವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.