ಇನ್ನೇನು ಹುಲಿ ಬಾಯಿಗೆ ಸಿಕ್ಕಿ ಜೀವ ಬಿಡುತ್ತಾನೆ ಅನ್ನುವಷ್ಟರಲ್ಲಿ ಹೇಗೋ ದಾಳಿಯಿಂದ ಬಾಲಕ ಪಾರಾಗಿದ್ದ. ಈ ಘಟನೆ ಉತ್ತರಾಖಂಡದಲ್ಲಿ ನಡೆದಿದೆ, 17 ವರ್ಷದ ಬಾಲಕ ಕಾಲೇಜಿನಿಂದ ಮನೆಗೆ ಹೋಗುತ್ತಿರುವಾಗ ಹುಲಿ ದಾಳಿ ನಡೆಸಿದೆ. ರಾಮನಗರ ಪಟ್ಟಣದ ನಿವಾಸಿ ಅಂಕಿತ್ ಅವರು ಮಾರಣಾಂತಿಕ ದಾಳಿಯ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಈಗ ಎಲ್ಲರಂತೆ ಜೀವನ ನಡೆಸುತ್ತಿದ್ದಾನೆ.
ನವೆಂಬರ್ 2023 ರಲ್ಲಿ ದೊಡ್ಡ ಬೆಕ್ಕು ಅವನ ಮೇಲೆ ದಾಳಿ ಮಾಡಿದ ನಂತರ ಬಾಲಕ ತೀವ್ರವಾಗಿ ಗಾಯಗೊಂಡಿದ್ದ.
ನ್ನ ಸ್ನೇಹಿತರೊಂದಿಗೆ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮರದ ಮೇಲೆ ಕುಳಿತಿದ್ದ ಹುಲಿ ಹಿಂದಿನಿಂದ ದಾಳಿ ಮಾಡಿ ಆತನ ಕತ್ತು ಹಿಡಿದು ತಲೆ ಕಚ್ಚಿತ್ತು.
ದಾಳಿಯ ಸಮಯದಲ್ಲಿ ಹುಲಿ ತನ್ನ ಹಿಡಿತವನ್ನು ಕಳೆದುಕೊಂಡಿದ್ದರಿಂದ, ಅಂಕಿತ್ ತಕ್ಷಣವೇ ತನ್ನ ಬಲಗೈಯನ್ನು ಮುಂದೆ ಒಡ್ಡಿ ಹುಲಿಯ ನಾಲಿಗೆಯನ್ನು ಹಿಡಿದೆಳೆದಿದ್ದಾನೆ. ಆಗ ಹುಲಿ ಆತನನ್ನು ಬಿಟ್ಟಿತ್ತು, ಆತ ಕೂಡಲೇ ಅಲ್ಲಿಂದ ಓಡಿ ಜೀವ ಉಳಿಸಿಕೊಂಡಿದ್ದ. ಆತನ ಜತೆಗಿದ್ದ ಸ್ನೇಹಿತರ ಪ್ರಾಣವೂ ಉಳಿದಿತ್ತು. ಆದರೆ ಆತನ ಕುತ್ತಿಗೆ, ನೆತ್ತಿ ಹಾಗೂ ಬಲಗೈಗೆ ತೀವ್ರ ಗಾಯಗಳಾಗಿತ್ತು.
ತಕ್ಷಣ ಸ್ನೇಹಿತರು ಆತನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆತನ ಸ್ಥಿತಿ ತುಂಬಾ ಗಂಭೀರವಾಗಿತ್ತು, ಹುಲಿಯ ಬಾಯಿಂದ ತಪ್ಪಿಸಿಕೊಂಡು ಬಂದ ಬಾಲಕನ ಬಗ್ಗೆ ವೈದ್ಯರು ಕೂಡ ಇದು ಹೇಗೆ ಸಾಧ್ಯವಾಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಮತ್ತಷ್ಟು ಓದಿ: ಚಾಮರಾಜನಗರ: ಕುರಿಗಾಹಿಗಳ ಮೇಲೆ ಹುಲಿ ದಾಳಿ: ಇಬ್ಬರಿಗೆ ಗಾಯ
ಆಸ್ಪತ್ರೆಗೆ ದಾಖಲಾಗುವ ವೇಳೆ ಸಾಕಷ್ಟು ರಕ್ತ ನಷ್ಟವಾಗಿತ್ತು. ಬಲ ಕಿವಿ ತೂಗಾಡುತ್ತಿತ್ತು, ತಲೆಗೂ ಗಂಭೀರ ಗಾಯವಾಗಿ ಮಾಂಸ ಹೊರಬಂದಿತ್ತು. ಮುಖವನ್ನು ಪರಚಿತ್ತು, ಬಲಗೈ ಹೆಬ್ಬೆರೆಳು ಭಾಗಶಃ ಕತ್ತರಿಸಿದಂತಾಗಿತ್ತು.
ಅವರ ಮುಖ ಹಾಗೂ ದೇಹವನ್ನು ಮೊದಲಿನಂತೆ ಮಾಡಲು ಇನ್ನೂ ಕೆಲವು ಶಸ್ತ್ರ ಚಿಕಿತ್ಸೆಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಅವರ ತಲೆ ಹಾಗೂ ಕೈಯನ್ನು ಸರಿಪಡಿಸಲು ತಿಂಗಳುಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ