BrahMos Air Launched Missile: ಭಾರತೀಯ ವಾಯುಪಡೆಯಿಂದ ಬ್ರಹ್ಮೋಸ್ ಏರ್ ಲಾಂಚ್ ಕ್ಷಿಪಣಿ ಪ್ರಯೋಗ ಯಶಸ್ವಿ

ಭಾರತೀಯ ವಾಯುಪಡೆ ಗುರುವಾರ ಬ್ರಹ್ಮೋಸ್ ಏರ್ ಲಾಂಚ್ ಕ್ಷಿಪಣಿಯ ವಿಸ್ತೃತ ಶ್ರೇಣಿಯ ಆವೃತ್ತಿಯನ್ನು ಯಶಸ್ವಿಯಾಗಿ ಉಡಾಯಿಸಿತು. ಬಂಗಾಳ ಕೊಲ್ಲಿ ಪ್ರದೇಶದಲ್ಲಿ Su-30 MKI ವಿಮಾನದಿಂದ ಶಿಪ್ ಗುರಿಯ ವಿರುದ್ಧ ನಿಖರವಾದ ಹಾರಾಟವನ್ನು ನಡೆಸಿದ್ದು, ಇದೀಗ ಕ್ಷಿಪಣಿಯು ಉದ್ದೇಶಿತ ಗುರಿಯನ್ನು ತಲುಪಿದೆ ಎಂದು ಐಎಎಫ್ ಟ್ವೀಟ್ ಮಾಡಿದೆ.

BrahMos Air Launched Missile: ಭಾರತೀಯ ವಾಯುಪಡೆಯಿಂದ ಬ್ರಹ್ಮೋಸ್ ಏರ್ ಲಾಂಚ್ ಕ್ಷಿಪಣಿ ಪ್ರಯೋಗ ಯಶಸ್ವಿ
BrahMos Air Launched MissileImage Credit source: HT
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 29, 2022 | 6:38 PM

ದೆಹಲಿ: ಭಾರತೀಯ ವಾಯುಪಡೆ (Indian Air Force) ಗುರುವಾರ ಬ್ರಹ್ಮೋಸ್ ಏರ್ ಲಾಂಚ್ ಕ್ಷಿಪಣಿಯ (BrahMos Air Launched Missile) ವಿಸ್ತೃತ ಶ್ರೇಣಿಯ ಆವೃತ್ತಿಯನ್ನು ಯಶಸ್ವಿಯಾಗಿ ಉಡಾಯಿಸಿತು. ಬಂಗಾಳ ಕೊಲ್ಲಿ ಪ್ರದೇಶದಲ್ಲಿ Su-30 MKI ವಿಮಾನದಿಂದ ಶಿಪ್ ಗುರಿಯ ವಿರುದ್ಧ ನಿಖರವಾದ ಹಾರಾಟವನ್ನು ನಡೆಸಿದ್ದು, ಇದೀಗ ಕ್ಷಿಪಣಿಯು ಉದ್ದೇಶಿತ ಗುರಿಯನ್ನು ತಲುಪಿದೆ ಎಂದು ಐಎಎಫ್ ಟ್ವೀಟ್ ಮಾಡಿದೆ. ಬ್ರಹ್ಮೋಸ್ ಏರೋಸ್ಪೇಸ್ ಇಂಡೋ-ರಷ್ಯನ್ ಜಂಟಿ ಉದ್ಯಮವಾಗಿದ್ದು, ಇದು ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಉತ್ಪಾದಿಸುತ್ತದೆ. ಕ್ಷಿಪಣಿಗಳನ್ನು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂ ಸೇನೆಗಳಲ್ಲೂ ಉಡಾವಣೆ ಮಾಡಬಹುದು. ಬ್ರಹ್ಮೋಸ್ ಕ್ಷಿಪಣಿಯು 2.8 ಮ್ಯಾಕ್ ವೇಗಕ್ಕಿಂತ ಮೂರು ಪಟ್ಟು ವೇಗದಲ್ಲಿ ಚಲಿಸುತ್ತದೆ.

ಇದರೊಂದಿಗೆ, IAF SU-30MKI ವಿಮಾನದಿಂದ ಭೂಮಿ ಅಥವಾ ಸಮುದ್ರದ ಗುರಿಗಳ ವಿರುದ್ಧ ಬಹಳ ದೂರದ ವ್ಯಾಪ್ತಿಯಲ್ಲಿ ನಿಖರವಾದ ಸ್ಟ್ರೈಕ್‌ಗಳನ್ನು ನಡೆಸಲು ಮಹತ್ವದ ಸಾಮರ್ಥ್ಯದ ವರ್ಧಕವನ್ನು ಸಾಧಿಸಿದೆ ಎಂದು ಸರ್ಕಾರ ಹೇಳಿದೆ. SU-30MKI ವಿಮಾನದ ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ ಕ್ಷಿಪಣಿಯ ವಿಸ್ತೃತ ವ್ಯಾಪ್ತಿಯ ಸಾಮರ್ಥ್ಯವು IAF ಗೆ ಕಾರ್ಯತಂತ್ರದ ವ್ಯಾಪ್ತಿಯನ್ನು ನೀಡುತ್ತದೆ ಮತ್ತು ಭವಿಷ್ಯದ ಯುದ್ಧದ ಸಂದರ್ಭದಲ್ಲಿ ಪ್ರಾಬಲ್ಯ ಸಾಧಿಸಲು ಅನುವು ಮಾಡಿಕೊಡುತ್ತದೆ ಎಂದು PTI ಪತ್ರಿಕಾ ಮಾಹಿತಿ ಬ್ಯೂರೋವನ್ನು ಉಲ್ಲೇಖಿಸಿದೆ.

ಇದನ್ನು ಓದಿ: BrahMos Missile: ಐಎನ್​ಎಸ್ ವಿಶಾಖಪಟ್ಟಣಂ ಯುದ್ಧನೌಕೆಯಿಂದ ಬ್ರಹ್ಮೋಸ್ ಸೂಪರ್​ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ನವೆಂಬರ್ 30 ರಂದು ಭಾರತೀಯ ಸೇನೆಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಪರೀಕ್ಷಿಸಿತ್ತು. ಸೇನೆಯ ಇಂದು ವೆಸ್ಟರ್ನ್ ಕಮಾಂಡ್ ಕ್ಷಿಪಣಿಯ ವಿಸ್ತೃತ ಶ್ರೇಣಿಯ ಆವೃತ್ತಿಯನ್ನು ಪರೀಕ್ಷಿಸಿತ್ತು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ