Breaking News: ಗೋವಾ ಬಳಿ MiG-29K ಯುದ್ಧ ವಿಮಾನ ಪತನ; ಪೈಲಟ್‌ ಪ್ರಾಣಾಪಾಯದಿಂದ ಪಾರು

| Updated By: ಸುಷ್ಮಾ ಚಕ್ರೆ

Updated on: Oct 12, 2022 | 12:25 PM

MiG 29K ಯುದ್ಧ ವಿಮಾನವು ಬೇಸ್‌ಗೆ ಮರಳುತ್ತಿರುವಾಗ ತಾಂತ್ರಿಕ ದೋಷದಿಂದ ಗೋವಾದ ಸಮುದ್ರದ ಮೇಲೆ ಪತನಗೊಂಡಿತು.

Breaking News: ಗೋವಾ ಬಳಿ MiG-29K ಯುದ್ಧ ವಿಮಾನ ಪತನ; ಪೈಲಟ್‌ ಪ್ರಾಣಾಪಾಯದಿಂದ ಪಾರು
MiG-29K ಯುದ್ಧ ವಿಮಾನ
Follow us on

ಗೋವಾ: ನೌಕಾ ಪಡೆಯ MiG-29K ಯುದ್ಧ ವಿಮಾನ (Fighter Jet) ಗೋವಾದಿಂದ ಹೊರಡುವ ವೇಳೆ ಪತನವಾಗಿದ್ದು, ಪೈಲಟ್‌ ಸುರಕ್ಷಿತವಾಗಿ ಹೊರಕ್ಕೆ ಬಂದಿದ್ದಾರೆ. ನೌಕಾ ಪಡೆಯ MiG-29K ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ  ಇಂದು ಗೋವಾದ (Goa) ಬಳಿ MiG-29K ಯುದ್ಧ ವಿಮಾನ ಪತನಗೊಂಡಿದೆ.

MiG 29K ಯುದ್ಧ ವಿಮಾನವು ಬೇಸ್‌ಗೆ ಮರಳುತ್ತಿರುವಾಗ ತಾಂತ್ರಿಕ ದೋಷದಿಂದ ಗೋವಾದ ಸಮುದ್ರದ ಮೇಲೆ ಪತನಗೊಂಡಿತು. ಈ ವೇಳೆ ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿದ್ದು, ತ್ವರಿತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೈಲಟ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ದುಬೈ ಪ್ರಯಾಣಿಕನಿಂದ ₹ 27 ಕೋಟಿ ಮೌಲ್ಯದ ವಜ್ರಖಚಿತ ಚಿನ್ನದ ವಾಚ್ ವಶ

MiG 29K ವಿಮಾನವು ಅತ್ಯಾಧುನಿಕ, ವಾಯು ಪ್ರಾಬಲ್ಯದ ಫೈಟರ್ ಜೆಟ್ ಆಗಿದ್ದು, ಸುಮಾರು 2000 kmph ಗರಿಷ್ಠ ವೇಗವನ್ನು ಹೊಂದಿದೆ. ಇದು 65,000 ಅಡಿಗಿಂತಲೂ ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿದೆ. ಈ ಘಟನೆಯ ಹಿಂದಿನ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ.

2020ರಲ್ಲಿ, ಭಾರತೀಯ ನೌಕಾಪಡೆಯ ಪೈಲಟ್ ನಿಶಾಂತ್ ಸಿಂಗ್ ಅವರು ತಮ್ಮ MiG-29K ಯುದ್ಧ ವಿಮಾನ ಅರೇಬಿಯನ್ ಸಮುದ್ರದಲ್ಲಿ ಪತನಗೊಂಡು ಮೃತಪಟ್ಟಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:44 am, Wed, 12 October 22