ದೆಹಲಿ ವಿಮಾನ ನಿಲ್ದಾಣದಲ್ಲಿ ದುಬೈ ಪ್ರಯಾಣಿಕನಿಂದ ₹ 27 ಕೋಟಿ ಮೌಲ್ಯದ ವಜ್ರಖಚಿತ ಚಿನ್ನದ ವಾಚ್ ವಶ

ದುಬೈನಿಂದ ಆಗಮಿಸಿದ ಪ್ರಯಾಣಿಕರೊಬ್ಬರಿಂದ ವಜ್ರಖಚಿತ ಬ್ರೇಸ್ಲೆಟ್ ಮತ್ತು ಐಫೋನ್ 14 ಪ್ರೊ ಕೂಡಾ ವಶಪಡಿಸಿಕೊಳ್ಳಲಾಗಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ದುಬೈ ಪ್ರಯಾಣಿಕನಿಂದ ₹ 27 ಕೋಟಿ ಮೌಲ್ಯದ ವಜ್ರಖಚಿತ ಚಿನ್ನದ ವಾಚ್ ವಶ
ವಜ್ರದ ವಾಚ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 07, 2022 | 8:17 AM

ದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ (Delhi airport) ಗುರುವಾರ ಕಸ್ಟಮ್ಸ್ ಅಧಿಕಾರಿಗಳು (customs officials) ವಶಪಡಿಸಿಕೊಂಡ ಏಳು ಅತ್ಯಾಧುನಿಕ ವಾಚ್​​ಗಳಲ್ಲಿ ₹ 27 ಕೋಟಿ ಮೌಲ್ಯದ ವಜ್ರಖಚಿತ ಬಿಳಿ ಚಿನ್ನದ ವಾಚ್ ಕೂಡಾ ಇದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈನಿಂದ ಆಗಮಿಸಿದ ಪ್ರಯಾಣಿಕರೊಬ್ಬರಿಂದ ವಜ್ರಖಚಿತ ಬ್ರೇಸ್ಲೆಟ್ ಮತ್ತು ಐಫೋನ್ 14 ಪ್ರೊ ಕೂಡಾ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಅಂತಹ ಉತ್ಪನ್ನಗಳ ಮೇಲಿನ ತೆರಿಗೆ ಮತ್ತು ಸುಂಕಗಳನ್ನು ತಪ್ಪಿಸಲು ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ, ಇದು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಅಥವಾ ಐಷಾರಾಮಿ ಸರಕುಗಳ ಅತಿದೊಡ್ಡ ವಶಪಡಿಸುವಿಕೆ ಎಂದು ಅವರು ಹೇಳಿದ್ದಾರೆ. ಈ ಪೈಕಿ ಅಮೆರಿಕದ ಆಭರಣ ವ್ಯಾಪಾರಿ ಮತ್ತು ವಾಚ್‌ಮೇಕರ್ ಜಾಕೋಬ್ ಆಂಡ್ ಕಂಪನಿ ತಯಾರಿಸಿದ ವಾಚ್ ಚಿನ್ನದಿಂದ ಮಾಡಲ್ಪಟ್ಟಿದ್ದು ವಜ್ರದ ಹರಳುಗನ್ನು ಹೊಂದಿಗೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಿಸ್ ನಿರ್ಮಿತ ‘ಬಿಲಿಯನೇರ್ III ಬ್ಯಾಗೆಟ್ ವೈಟ್ ಡೈಮಂಡ್ಸ್ 54 x 43 ಎಂಎಂ ವಾಚ್’ ಅನ್ನು 76 ಬಿಳಿ ವಜ್ರಗಳೊಂದಿಗೆ 18-ಕಾರಟ್ ಬಿಳಿ ಚಿನ್ನದ ಸೆಟ್‌ನಿಂದ ಮಾಡಲಾಗಿದೆ ಎಂದು ಇದರಲ್ಲಿದೆ. ಇದರ ಸ್ಕೆಲಿಟನ್ ಡಯಲ್ ಸಹ ವಜ್ರಗಳಿಂದ ಕೂಡಿದ್ದು ಮ್ಯಾನುವಲ್ ವಿಂಡಿಂಗ್ ಚಲನೆಯನ್ನು ಹೊಂದಿದೆ. ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಪ್ರಯಾಣಿಕರ ಲಗೇಜ್ ಹುಡುಕಾಟದ ವೇಳೆ ಪಿಯಾಗೆಟ್ ಲೈಮ್‌ಲೈಟ್ ಸ್ಟೆಲ್ಲಾ ಮತ್ತು ಐದು ರೋಲೆಕ್ಸ್‌ಗಳು ಸೇರಿದಂತೆ ಇತರ ಆರು ವಾಚ್ ಪತ್ತೆಯಾಗಿವೆ.

ಪಿಯಾಜೆಟ್ ಬೆಲೆ ಸುಮಾರು ₹ 31 ಲಕ್ಷವಾಗಿದ್ದರೆ, ರೋಲೆಕ್ಸ್‌ಗಳು ಪ್ರತಿಯೊಂದರ ಬೆಲೆ ಸುಮಾರು ₹ 15 ಲಕ್ಷ. ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇಂತಹ ಹೆಚ್ಚಿನ ಪ್ರಯಾಣಿಕರ ದಟ್ಟಣೆಯ ನಡುವೆಯೂ ಈ ಕಾರ್ಯ ನಡೆಸಿದ್ದಾರೆ. ಭಾರತೀಯ ಕಸ್ಟಮ್ಸ್ ಯಾವಾಗಲೂ ನಿಜವಾದ ಪ್ರಯಾಣಿಕರಿಗೆ ಕನಿಷ್ಠ ಅಡಚಣೆಯೊಂದಿಗೆ ಗರಿಷ್ಠ ಸೌಲಭ್ಯವನ್ನು ಖಾತ್ರಿಪಡಿಸುತ್ತದೆ, ಏಕಕಾಲದಲ್ಲಿ ಕಳ್ಳಸಾಗಣೆಯನ್ನು ತಡೆಯುವ ಮೂಲಕ ಆರ್ಥಿಕ ಗಡಿಗಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ ಎಂದು ದೆಹಲಿ ಕಸ್ಟಮ್ಸ್ ವಲಯದ ಮುಖ್ಯ ಆಯುಕ್ತ ಸುರ್ಜಿತ್ ಭುಜಬಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಣಿಜ್ಯ ಅಥವಾ ಐಷಾರಾಮಿ ಸರಕುಗಳಲ್ಲಿ, ಐಜಿಐ ವಿಮಾನ ನಿಲ್ದಾಣದಲ್ಲಿ ಒಂದೇ ಬಾರಿಗೆ ಅತೀ ಹೆಚ್ಚು ಮೌಲ್ಯದ ಸಾಮಾನುಗಳನ್ನು ವಶಪಡಿಸಿದ್ದು ಇದೇ ಮೊದಲು.ಇದು ಸುಮಾರು 60 ಕೆಜಿ ಚಿನ್ನಕ್ಕೆ ಸಮಾನವಾಗಿದೆ ಎಂದು ಕಮಿಷನರ್ ಏರ್‌ಪೋರ್ಟ್ ದೆಹಲಿ ಕಸ್ಟಮ್ಸ್ ಜುಬೈರ್ ರಿಯಾಜ್ ಕಮಿಲಿ ಹೇಳಿದ್ದಾರೆ.