Kerala CM: ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ಬೇಡ, ಪ್ರಧಾನಿ ಮೋದಿಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್

ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಸಂಸದೀಯ ಸಮಿತಿಯ ಶಿಫಾರಸಿಗೆ ವಿನಾಯಿತಿ ನೀಡಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಸಿಎಂ ವಿಜಯನ್ ಮೋದಿಗೆ ಪತ್ರ ಬರೆದಿದ್ದಾರೆ.

Kerala CM: ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ಬೇಡ, ಪ್ರಧಾನಿ ಮೋದಿಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್
Kerala CM Pinarayi Vijayan
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 12, 2022 | 1:09 PM

ಕೇರಳ: ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಸಂಸದೀಯ ಸಮಿತಿಯ ಶಿಫಾರಸಿಗೆ ವಿನಾಯಿತಿ ನೀಡಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಸಿಎಂ ವಿಜಯನ್ ಕೋರಿದ್ದಾರೆ. ಪ್ರಧಾನಿಗೆ ಬರೆದ ಪತ್ರದಲ್ಲಿ ಪಿಣರಾಯಿ ವಿಜಯನ್, ನಮ್ಮ ಸಂವಿಧಾನದಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ರಾಷ್ಟ್ರೀಯ ಭಾಷೆಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು. ನಮ್ಮ ಉನ್ನತ ಕಲಿಕಾ ಕೇಂದ್ರಗಳಲ್ಲಿ ಹಿಂದಿಯನ್ನು ಮುಖ್ಯ ಬೋಧನಾ ಭಾಷೆಯಾಗಿ ಹೇರಲು ಸಾಧ್ಯವಿಲ್ಲ.

ಈ ವಿಚಾರದ ವಿರುದ್ಧ ಕೇರಳ ಸಿಎಂ ಟ್ವಿಟ್ಟರ್​ನಲ್ಲಿ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಕ್ರಮವು ಭಾರತದ ಪಾಲಿಸಬೇಕಾದ ಆದರ್ಶ, ವೈವಿಧ್ಯತೆಯಲ್ಲಿ ಏಕತೆಯ ಮೇಲಿನ ಆಕ್ರಮಣವಾಗಿದೆ. ಇದು ಶಿಕ್ಷಣ ಮತ್ತು ಉದ್ಯೋಗದ ವಿಷಯಗಳಲ್ಲಿ ಬಹುಪಾಲು ಭಾರತೀಯರಿಗೆ ಅನನುಕೂಲತೆಯನ್ನುಂಟು ಮಾಡುತ್ತದೆ. ಸಹಕಾರಿ ಫೆಡರಲಿಸಂಗೆ ಧಕ್ಕೆ ತರುವ ಈ ನಿರ್ದಯ ಕ್ರಮವನ್ನು ಒಗ್ಗಟ್ಟಿನಿಂದ ವಿರೋಧಿಸಬೇಕಾಗಿದೆ ಎಂದು ಬರದುಕೊಂಡಿದ್ದಾರೆ.

ಇದನ್ನು ಓದಿ : ಗೋವಾ ಬಳಿ MiG-29K ಯುದ್ಧ ವಿಮಾನ ಪತನ; ಪೈಲಟ್‌ ಪ್ರಾಣಾಪಾಯದಿಂದ ಪಾರು

ಸಿಎಂ ವಿಜಯನ್ ಅವರು, ಭಾರತ ಸರ್ಕಾರದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಭಾಷೆಗಳಲ್ಲಿ ನೀಡಬಹುದು ಎಂದು ಸೂಚಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ.ಯಾವುದೇ ಭಾಷೆಯನ್ನು ಇತರ ಭಾಷೆಗಳಿಗಿಂತ ಬೋಧನಾ ಮಾಧ್ಯಮವಾಗಿ ಆದ್ಯತೆ ನೀಡಬಾರದು ಎಂದು ನಾನು ವಿನಂತಿಸುತ್ತೇನೆ, ಅದು ಹೇರಿಕೆಯಾಗಿ ನೋಡಬಾರದು. ಇದು ನಮ್ಮ ಸಹಕಾರಿ ಫೆಡರಲ್ ಸೆಟಪ್‌ಗೆ ಒಳ್ಳೆಯದಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪ್ರಧಾನಿ ಮೋದಿಗೆ ಬರೆದ ಪತ್ರವನ್ನು ಬರೆದಿದ್ದಾರೆ.

Published On - 1:09 pm, Wed, 12 October 22