ಮುಜಾಫರ್‌ನಗರ: ಉತ್ತರ ಪ್ರದೇಶದ ಗಂಗಾ ಕಾಲುವೆಯ ಮೇಲಿನ ಸೇತುವೆ ಕೆಡವುತ್ತಿರುವಾಗ ಬುಲ್ಡೋಜರ್ ಕೂಡ ಸೇತುವೆ ಜೊತೆಗೆ ಕುಸಿದು ಬಿದ್ದಿದೆ. ಬುಲ್ಡೋಜರ್‌ನ ಚಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾನೆ.
ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಮುಜಾಫರ್‌ನಗರ ಜಿಲ್ಲೆಯ ಕಿರಿದಾದ ಸೇತುವೆಯಲ್ಲಿ ಬುಲ್ಡೋಜರ್ ನಿಂತು ಇನ್ನೊಂದು ಭಾಗವನ್ನು ಕೆಡವುತ್ತಿರುವಾಗ ಇಡೀ ಸೇತುವೆಯು ಕುಸಿದು ಬೀಳುತ್ತದೆ. ಸೇತುವೆ ಬಿದ್ದ ರಭಸಕ್ಕೆ ಬುಲ್ಡೋಜರ್ ಮತ್ತು ಅದರ ಚಾಲಕ ಸೇತುವೆಯಿಂದ ಕೆಳಗೆ ಬೀಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ತಲೆಕೆಳಗಾಗಿರುವ ಬುಲ್ಡೋಜರ್ನ್ನು ಕಾಲುವೆಯಲ್ಲಿ ಬಿಟ್ಟು ಚಾಲಕ ಅಲ್ಲಿಂದ ನೀರಿನಲ್ಲಿ ಈಜಿಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸ್ಥಳೀಯರ ನೆರವಿನಿಂದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಈ ಸೇತುವೆ 100 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಕಾಲುವೆಯ ಉದ್ದಕ್ಕೂ ಪಾಣಿಪತ್-ಖತಿಮಾ ಹೆದ್ದಾರಿಯನ್ನು ಮಾಡುವ ಕಾರಣ ಕೆಡವುವ ಕೆಲಸವನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
In UP's #Muzaffarnagar, a #Bulldozer was demolishing an old/dilapidated bridge and then it went down with it .. Hey Ram?@myogiadityanath Aren't there any SOPs for bulldozers in such situations? pic.twitter.com/vtr08Oy3Lx
— India Crooks (@IndiaCrooks) September 26, 2022
Published On - 9:56 am, Mon, 26 September 22