ಗ್ಯಾಂಗ್‌ಸ್ಟರ್ ದುಬೆಯಿಂದ ಹತ್ಯೆಗೀಡಾಗಿದ್ದ ಪೇದೆಯ ಸೋದರ ಬಯಸಿದ್ದೂ ಇದನ್ನೇ..

ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಛಾಪ್ಟರ್​ ಕ್ಲೋಸ್​ ಆಗಿದೆ. ತಮ್ಮ ಇಲಾಖೆಯ 8 ಮಂದಿ ಸಹೋದ್ಯೋಗಿಗಳನ್ನು ಕೃತ್ರಿಮದಿಂದ ಸಾಯಿಸಿ, ಅಟ್ಟಹಾಸ ಮೆರೆದಿದ್ದ ಪಾತಕಿಯನ್ನು ಎನ್ಕೌಂಟರ್ ಮಾಡುವ ಮೂಲಕ ಉತ್ತರ ಪ್ರದೇಶ ಪೊಲೀಸರು ಪಾತಕಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಇದನ್ನೂ ಓದಿ: Finish! ಪೊಲೀಸರ ಹತ್ಯೆ ಮಾಡಿದ್ದ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಎನ್​ಕೌಂಟರ್ ಜುಲೈ 3ರಂದು ಕಾನ್ಪುರ ಎನ್ಕೌಂಟರ್​ನಲ್ಲಿ ಡಿವೈಎಸ್​ಪಿ ಸೇರಿದಂತೆ 8 ಮಂದಿ ಹತ್ಯೆಗೀಡಾಗಿದ್ದರು. ಅವರ ಪೈಕಿ ಪೇದೆ ಜಿತೇಂದ್ರ ಕುಮಾರ್ ಸಹ ಒಬ್ಬರಾಗಿದ್ದರು. ಸೋದರನ ಸಾವಿಗೆ ಮಮ್ಮಲಮರುಗಿದ್ದ […]

ಗ್ಯಾಂಗ್‌ಸ್ಟರ್ ದುಬೆಯಿಂದ ಹತ್ಯೆಗೀಡಾಗಿದ್ದ ಪೇದೆಯ ಸೋದರ ಬಯಸಿದ್ದೂ ಇದನ್ನೇ..
ಸಾಧು ಶ್ರೀನಾಥ್​ Edited By:

Updated on: Jul 10, 2020 | 1:06 PM

ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಛಾಪ್ಟರ್​ ಕ್ಲೋಸ್​ ಆಗಿದೆ. ತಮ್ಮ ಇಲಾಖೆಯ 8 ಮಂದಿ ಸಹೋದ್ಯೋಗಿಗಳನ್ನು ಕೃತ್ರಿಮದಿಂದ ಸಾಯಿಸಿ, ಅಟ್ಟಹಾಸ ಮೆರೆದಿದ್ದ ಪಾತಕಿಯನ್ನು ಎನ್ಕೌಂಟರ್ ಮಾಡುವ ಮೂಲಕ ಉತ್ತರ ಪ್ರದೇಶ ಪೊಲೀಸರು ಪಾತಕಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.

ಇದನ್ನೂ ಓದಿ: Finish! ಪೊಲೀಸರ ಹತ್ಯೆ ಮಾಡಿದ್ದ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಎನ್​ಕೌಂಟರ್

ಜುಲೈ 3ರಂದು ಕಾನ್ಪುರ ಎನ್ಕೌಂಟರ್​ನಲ್ಲಿ ಡಿವೈಎಸ್​ಪಿ ಸೇರಿದಂತೆ 8 ಮಂದಿ ಹತ್ಯೆಗೀಡಾಗಿದ್ದರು. ಅವರ ಪೈಕಿ ಪೇದೆ ಜಿತೇಂದ್ರ ಕುಮಾರ್ ಸಹ ಒಬ್ಬರಾಗಿದ್ದರು. ಸೋದರನ ಸಾವಿಗೆ ಮಮ್ಮಲಮರುಗಿದ್ದ ಪೇದೆ ಜಿತೇಂದ್ರ ಕುಮಾರ್ ಸೋದರ ಉತ್ತರಪ್ರದೇಶ ಪೊಲೀಸರನ್ನು ಕೇಳಿದ್ದು ಒಂದೇ ಒಂದು. ಹೆಚ್ಚು ಸಮಯ ತೆಗೆದುಕೊಳ್ಳಬೇಡಿ, ತಕ್ಷಣ ಆ ಪಾತಕಿಯನ್ನು ಎನ್ಕೌಂಟರ್ ಮಾಡಿ ಸಾಯಿಸಿ, ಆಗಲೇ ನನ್ನ ಅಣ್ಣನ  ಆತ್ಮಕ್ಕೆ ಶಾಂತಿ ಸಿಗುವುದು ಎಂದು ಕೋರಿದ್ದರು. ಅಷ್ಟೇ.. ಸರಿಯಾಗಿ ಒಂದೇ ವಾರದಲ್ಲಿ ಉತ್ತರಪ್ರದೇಶ ಪೊಲೀಸರು ಪಾತಕಿಯನ್ನು ಪರಲೋಕಕ್ಕೆ ಕಳಿಸಿದ್ದಾರೆ.

Published On - 9:05 am, Fri, 10 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us