ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್: ಇತ್ತೀಚೆಗೆ ಮದುವೆಯಾಗಿದ್ದ BSF ಯೋಧ ಸಾವು

ವಿಜಯಪುರ: ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿ ಕರ್ತವ್ಯ ನಿರತ ಬಿಎಸ್​ಎಫ್ ಯೋಧ ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಶಿವಾನಂದ ಬಡಿಗೇರ(31) ಮೃತರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಬಿಎಸ್‌ಎಫ್‌ ಯೋಧ ಶಿವಾನಂದ ಬಡಿಗೇರ ವಿದ್ಯುತ್‌ ಶಾರ್ಟ್ ‌ಸರ್ಕ್ಯೂಟ್‌ ವೇಳೆ ನಡೆದ ಅವಘಡದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಯೋಧ ಶಿವಾನಂದ ಕುಟುಂಬಸ್ಥರಿಗೆ ಸೇನೆಯಿಂದ ದೂರವಾಣಿ ಕರೆ ಮೂಲಕ ಮಾಹಿತಿ ನೀಡಲಾಗಿದೆ. ಮೃತ ಯೋಧ  14 ವರ್ಷಗಳ ಹಿಂದೆ ಸೇನೆ ಸೇರಿದ್ದರು. ಬಾಂಗ್ಲಾದೇಶದ ಗಡಿ, ಚೀನಾ ಗಡಿಯಲ್ಲಿ […]

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್: ಇತ್ತೀಚೆಗೆ ಮದುವೆಯಾಗಿದ್ದ BSF ಯೋಧ ಸಾವು
Edited By:

Updated on: Aug 31, 2020 | 8:56 AM

ವಿಜಯಪುರ: ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿ ಕರ್ತವ್ಯ ನಿರತ ಬಿಎಸ್​ಎಫ್ ಯೋಧ ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಶಿವಾನಂದ ಬಡಿಗೇರ(31) ಮೃತರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಬಿಎಸ್‌ಎಫ್‌ ಯೋಧ ಶಿವಾನಂದ ಬಡಿಗೇರ ವಿದ್ಯುತ್‌ ಶಾರ್ಟ್ ‌ಸರ್ಕ್ಯೂಟ್‌ ವೇಳೆ ನಡೆದ ಅವಘಡದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಯೋಧ ಶಿವಾನಂದ ಕುಟುಂಬಸ್ಥರಿಗೆ ಸೇನೆಯಿಂದ ದೂರವಾಣಿ ಕರೆ ಮೂಲಕ ಮಾಹಿತಿ ನೀಡಲಾಗಿದೆ.

ಮೃತ ಯೋಧ  14 ವರ್ಷಗಳ ಹಿಂದೆ ಸೇನೆ ಸೇರಿದ್ದರು. ಬಾಂಗ್ಲಾದೇಶದ ಗಡಿ, ಚೀನಾ ಗಡಿಯಲ್ಲಿ ಸೇವೆ ಸಲ್ಲಿಸಿ ಸದ್ಯ ಜಮ್ಮು ಕಾಶ್ಮೀರದ ಗಡಿಯಲ್ಲಿ ಕರ್ತವ್ಯ‌ ನಿರ್ವಹಿಸಿದ್ದಾರೆ. ಒಂದೂವರೆ ವರ್ಷದ ಹಿಂದಷ್ಟೇ ಶಿವಾನಂದರಿಗೆ ವಿವಾಹವಾಗಿತ್ತು. ಶಿವಾನಂದ ಪಾರ್ಥಿವ ಶರೀರ ಬೇಗನೇ ನೀಡಬೇಕೆಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Published On - 7:41 am, Mon, 31 August 20