AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್‌ನ ಅಂತರಾಷ್ಟ್ರೀಯ ಗಡಿ ಬಳಿ ಮಾದಕ ವಸ್ತು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್‌ಎಫ್

ಪ್ರದೇಶದ ಆರಂಭಿಕ ಹುಡುಕಾಟದ ಸಮಯದಲ್ಲಿ, ಬಿಎಸ್‌ಎಫ್ ಪಡೆಗಳು ಡ್ರೋನ್ (ಕ್ವಾಡ್‌ಕಾಪ್ಟರ್, ಡಿಜೆಐ ಮ್ಯಾಟ್ರಿಸ್, 300 ಆರ್‌ಟಿಕೆ) ಜೊತೆಗೆ ಶಂಕಿತ ಮಾದಕವಸ್ತುಗಳನ್ನು ಒಳಗೊಂಡಿರುವ ಮೂರು ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆದುಕೊಂಡರು.

ಪಂಜಾಬ್‌ನ ಅಂತರಾಷ್ಟ್ರೀಯ ಗಡಿ ಬಳಿ ಮಾದಕ ವಸ್ತು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್‌ಎಫ್
ಪಾಕಿಸ್ತಾನದ ಡ್ರೋನ್ Image Credit source: BSF Punjab
ನಯನಾ ಎಸ್​ಪಿ
| Updated By: Rakesh Nayak Manchi|

Updated on:May 22, 2023 | 4:07 PM

Share

ಪಂಜಾಬ್‌ನ ಅಮೃತಸರ (Amritsar, Punjab) ಬಳಿಯ ಅಂತರರಾಷ್ಟ್ರೀಯ ಗಡಿಯ ಬಳಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು (Pakistan Drone) ಗಡಿ ಭದ್ರತಾ (BSF) ಹೊಡೆದುರುಳಿಸಿದೆ ಎಂದು ಪಡೆ ಭಾನುವಾರ (ಮೇ 21) ತಿಳಿಸಿದೆ. ಆಳ ಪ್ರದೇಶದಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಪಡೆಗಳಿಗೆ ಅಮೃತಸರದ ಧನೋ ಕಲಾನ್ ಗ್ರಾಮದಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್‌ನ ಝೇಂಕರಿಸುವ ಸದ್ದು ಕೇಳಿಸಿತು. ಶನಿವಾರ ರಾತ್ರಿ 8.48 ರ ಸುಮಾರಿಗೆ ಜಿಲ್ಲೆಯಲ್ಲಿ, ಬಿಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಬಿಎಸ್‌ಎಫ್ ಪಡೆಗಳು ತಕ್ಷಣವೇ ಡ್ರೋನ್ ಅನ್ನು ತಡೆಹಿಡಿಯಲು ಮುಂದಾದರು ಮತ್ತು ಪಾಕಿಸ್ತಾನಿ ಡ್ರೋನ್ ಅನ್ನು ಹೊಡೆದುರುಳಿಸಲಾಯಿತು ಎಂದು ಬಿಎಸ್‌ಎಫ್ ಹೇಳಿದೆ. ಪ್ರದೇಶದ ಆರಂಭಿಕ ಹುಡುಕಾಟದ ಸಮಯದಲ್ಲಿ, ಬಿಎಸ್‌ಎಫ್ ಪಡೆಗಳು ಡ್ರೋನ್ ಅನ್ನು ವಶಪಡಿಸಿಕೊಂಡವು (ಕ್ವಾಡ್‌ಕಾಪ್ಟರ್, ಡಿಜೆಐ ಮ್ಯಾಟ್ರಿಸ್, 300 ಆರ್‌ಟಿಕೆ) ಜೊತೆಗೆ ಮೂರು ಪ್ಯಾಕೆಟ್‌ಗಳ ಶಂಕಿತ ಮಾದಕವಸ್ತುಗಳನ್ನು ಈ ಡ್ರೋನ್ ಹೊಂದಿತ್ತು. ಧನೋ ಕಲನ್ ಗ್ರಾಮದ ಕೃಷಿ ಕ್ಷೇತ್ರದಿಂದ ಡ್ರೋನ್‌ನೊಂದಿಗೆ ಕಬ್ಬಿಣದ ಉಂಗುರದ ಮೂಲಕ ಪ್ಯಾಕೆಟ್ ಜೋಡಿಸಿ ರವಾನೆ ಮಾಡಲಾಗಿತ್ತು.

ಇದನ್ನೂ ಓದಿ: ಚೀನಾಗೆ ಪರೋಕ್ಷವಾಗಿ ಕುಟುಕಿದ ಕ್ವಾಡ್ ಗುಂಪು; ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಭೇಟಿ

“ಕಳ್ಳಸಾಗಾಣಿಕೆದಾರರನ್ನು ಸುಲಭವಾಗಿ ಪತ್ತೆ ಹಚ್ಚಲು ರವಾನೆಗೆ ನಾಲ್ಕು ಹೊಳೆಯುವ ಪಟ್ಟಿಗಳನ್ನು ಲಗತ್ತಿಸಲಾಗಿದೆ ಎಂದು ಬಿಎಸ್ಎಫ್ ತಿಳಿಸಿದೆ. ವಶಪಡಿಸಿಕೊಂಡ ಹೆರಾಯಿನ್‌ನ ಒಟ್ಟು ತೂಕವು ಸುಮಾರು 3.3 ಕೆ.ಜಿ. 3,323 ಕಿಮೀ ಭಾರತ-ಪಾಕಿಸ್ತಾನ ಗಡಿಯನ್ನು ಕಾಯುತ್ತಿರುವ ಭಾರತೀಯ BSF ತಂಡ ಮತ್ತೊಂದು ಪಾಕಿಸ್ತಾನದ ಮತ್ತೊಂದು ನೀಚ ಪ್ರಯತ್ನವನ್ನು ವಿಫಲಗೊಳಿಸಿದೆ”, ಎಂದು BSF ತಿಳಿಸಿದೆ.

Published On - 4:49 pm, Sun, 21 May 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!