AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆ: ಮಾಯಾವತಿ

ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಮುಂದಿನ ವರ್ಷ, ಬಿಎಸ್‌ಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಸ್ವಂತ ತಾಕತ್ತಿನ ಮೇಲೆ ಚುನಾವಣೆಯನ್ನು ಎದುರಿಸಲಿದೆ...

ಮುಂದಿನ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆ: ಮಾಯಾವತಿ
ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 15, 2023 | 6:33 PM

Share

ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭೆ ಚುನಾವಣೆಗೆ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ (Bahujan Samaj Party)ಮುಖ್ಯಸ್ಥೆ ಮಾಯಾವತಿ (Mayawati)ಭಾನುವಾರ ಹೇಳಿದ್ದಾರೆ. ಪ್ರಮುಖ ರಾಜ್ಯಗಳಾದ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ಈ ವರ್ಷ ಚುನಾವಣೆ ನಡೆಯಲಿದೆ. ತಮ್ಮ 67ನೇ ಜನ್ಮದಿನದಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, “ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಮುಂದಿನ ವರ್ಷ, ಬಿಎಸ್‌ಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಸ್ವಂತ ತಾಕತ್ತಿನ ಮೇಲೆ ಚುನಾವಣೆಯನ್ನು ಎದುರಿಸಲಿದೆ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ ಎಂದಿದ್ದಾರೆ.

“ಪಿತೂರಿ”ಯ ಭಾಗವಾಗಿ ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬ ಅನಿಸಿಕೆ ಮೂಡಿಸಲು ಪ್ರಯತ್ನಿಸುತ್ತಿರುವುದರಿಂದ ಈ ಘೋಷಣೆ ಮಾಡುವುದು ಅನಿವಾರ್ಯವಾಯಿತು ಎಂದು ಮಾಯಾವತಿ ಹೇಳಿದರು. ಪಂಜಾಬ್ ಹೊರತುಪಡಿಸಿ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ರಾಜ್ಯ ಮಟ್ಟದಲ್ಲಿ ಒಂದು ಅಥವಾ ಎರಡು ಬಾರಿ ಚುನಾವಣಾ ಮೈತ್ರಿ ಮಾಡಿಕೊಂಡರೂ ಅವರ ಮತಗಳು (ಮಿತ್ರಪಕ್ಷಗಳು) ನಮಗೆ ವರ್ಗಾವಣೆಯಾಗಿಲ್ಲ, ಇದರಿಂದಾಗಿ ಬಿಎಸ್‌ಪಿ ನಷ್ಟವನ್ನುಂಟುಮಾಡಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:SS Rajamouli: ‘RRR ಬಾಲಿವುಡ್​ ಚಿತ್ರವಲ್ಲ’: ರಾಜಮೌಳಿ ಹೇಳಿಕೆಗೆ ಹಿಂದಿ ಮಂದಿ ಅಸಮಾಧಾನ

ಹೀಗಾಗಿ ನಮ್ಮ ಪಕ್ಷ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.

ಬಿಎಸ್‌ಪಿಯ ಇಳಿಮುಖವಾಗಿರುವ ಮತಗಳಿಕೆ ಮತ್ತು ಸೀಟುಗಳ ಎಣಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಏರಿಳಿತಗಳು ರಾಜಕೀಯದ ಭಾಗವಾಗಿದೆ ಎಂದು ಮಾಯಾವತಿ ಹೇಳಿದರು. ಬಿಎಸ್‌ಪಿಯ ಮತದ ತಳಹಗಿ ಅಖಂಡವಾಗಿದೆ. ಆದರೆ ಚುನಾವಣೆಗಳಲ್ಲಿ, ಕೆಲವೊಮ್ಮೆ ಇತರ ಪಕ್ಷಗಳು ನೀಡಿದ ಭರವಸೆಗಳಿಂದ ಓಬಿಸಿಗಳು, ಅಲ್ಪಸಂಖ್ಯಾತರು ಮತ್ತು ಮೇಲ್ಜಾತಿಗಳಂತಹ ಇತರ ವಿಭಾಗಗಳು ದಾರಿ ತಪ್ಪುತ್ತವೆ. ಇದು ಹಿಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಹಾನಿಯನ್ನುಂಟುಮಾಡಿತು.

ನಿಸ್ಸಂಶಯವಾಗಿ ಇವಿಎಂಗಳಲ್ಲಿ ಕೆಲವು ಗೊಂದಲ ಇದೆ ಎಂದು ನಾನು ಭಾವಿಸುತ್ತೇನೆ. ಇವಿಎಂಗಳ ಬಗ್ಗೆ ಅನುಮಾನಗಳಿವೆ. ಚುನಾವಣಾ ಆಯೋಗ ಮತ್ತು ಕೇಂದ್ರವು ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸಬೇಕು. ಎಷ್ಟು ಮತದಾರರು ಅವರೊಂದಿಗೆ ಇದ್ದಾರೆ ಮತ್ತು ಎಷ್ಟು ಮಂದಿ ನಮ್ಮೊಂದಿಗೆ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಯುವವರೆಗೆ ಬಿಎಸ್‌ಪಿಯ ಮತ ಹಂಚಿಕೆ ಮತ್ತು ಸ್ಥಾನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಮಾಯಾವತಿ ಹೇಳಿದರು. “ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್‌ಗಳ ಬದಲಿಗೆ ಯಂತ್ರಗಳನ್ನು ಬಳಸಿದ ನಂತರ, ನಮ್ಮ ಮತ ಶೇಕಡಾವಾರು ಮತ್ತು (ಸ್ಥಾನಗಳ) ಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. ನಿಸ್ಸಂಶಯವಾಗಿ, ಕೆಲವು ವ್ಯತ್ಯಾಸಗಳಿವೆ. ಚುನಾವಣೆಗಳಲ್ಲಿ ಇವಿಎಂ ಬಳಕೆ ಆರಂಭವಾದಾಗಿನಿಂದ ಈ ವ್ಯತ್ಯಾಸ ಆರಂಭವಾಯಿತು. ಇದು ನಮ್ಮ ಜನಧರ್ (ಮತದ ಆಧಾರ) ಮೇಲೂ ಪರಿಣಾಮ ಬೀರುತ್ತಿದೆ. ಪ್ರತಿ ಮತ ಮತ್ತು ವಿವಿಪ್ಯಾಟ್ ಸ್ಲಿಪ್ ಅನ್ನು ತಾಳೆ ಮಾಡಬೇಕು ಎಂದಿದ್ದಾರೆ ಮಾಯಾವತಿ.

2024ರ ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಒಗ್ಗಟ್ಟಿನ ವಿಷಯದ ಕುರಿತು ಮಾತನಾಡಿದ ಮಾಯಾವತಿ, ಬಿಎಸ್‌ಪಿಯ ಸಿದ್ಧಾಂತವು ಇತರ ವಿರೋಧ ಪಕ್ಷಗಳಿಗಿಂತ ಭಿನ್ನವಾಗಿದೆ ಮತ್ತು ಅದು ಯಾವುದೇ ಮೈತ್ರಿ ಮಾಡಿಕೊಳ್ಳದೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು.

ಅದೇ ವೇಳೆ ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವುದರಿಂದ ತಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಮಾಯಾವತಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Sun, 15 January 23