ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಉಚಿತವಾಗಿ ಲಸಿಕೆ: ಬಿಎಸ್ಪಿ ಅಧಿನಾಯಕಿ ಮಾಯಾವತಿ ಘೋಷಣೆ
ನಾನು ಅಧಿಕಾರಕ್ಕೋಸ್ಕರ ತತ್ವ ಸಿದ್ಧಾಂತಗಳೊಂದಿಗೆ ಎಂದೂ ರಾಜಿ ಮಾಡಿಕೊಂಡಿಲ್ಲ. ಇನ್ನುಮುಂದೆಯೂ ಬಿಎಸ್ಪಿ ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ನಾವು 2007ರಂತೆಯೇ ಉತ್ತರಪ್ರದೇಶದಲ್ಲಿ ಸ್ವಂತ ಬಲದಿಂದ ಗದ್ದುಗೆಗೆ ಏರರುವ ವಿಶ್ವಾಸವಿದೆ.
ಲಕ್ನೋ: ಬಹುಜನ ಸಮಾಜ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಎರಡೂ ರಾಜ್ಯಗಳಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು BSP ಮುಖ್ಯಸ್ಥೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಇಂದು ತಮ್ಮ 65ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಹೇಳಿದ್ದಾರೆ.
2022 Uttar Pradesh Legislative Assembly election ನಾನು ಅಧಿಕಾರಕ್ಕೋಸ್ಕರ ತತ್ವ ಸಿದ್ಧಾಂತಗಳೊಂದಿಗೆ ಎಂದೂ ರಾಜಿ ಮಾಡಿಕೊಂಡಿಲ್ಲ. ಇನ್ನು ಮುಂದೆಯೂ ಬಿಎಸ್ಪಿ ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ನಾವು 2007ರಂತೆಯೇ ಉತ್ತರಪ್ರದೇಶದಲ್ಲಿ ಸ್ವಂತ ಬಲದಿಂದ ಗದ್ದುಗೆಗೆ ಏರುವ ವಿಶ್ವಾಸವಿದೆ. ಇದಕ್ಕಾಗಿ ಈಗಿಂದಲೇ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಕರೆಕೊಟ್ಟಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಉಚಿತವಾಗಿ ಲಸಿಕೆ: ಕೊರೊನಾ ಲಸಿಕೆ ವಿತರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮಾಯಾವತಿ, ಕೇಂದ್ರ ಸರ್ಕಾರ ಉತ್ತಮ ನಿರ್ಧಾರವನ್ನೇ ಮಾಡಿದೆ. ಆದರೆ, ದೇಶದ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಭರವಸೆಯನ್ನೂ ನೀಡಿದ್ದಾರೆ.
ಇದೇವೇಳೆ, ತನ್ನ ಹುಟ್ಟುಹಬ್ಬವನ್ನು ಜನಕಲ್ಯಾಣ ದಿವಸವೆಂದು ಆಚರಿಸಲು ಕಾರ್ಯಕರ್ತರಿಗೆ ಕರೆ ನೀಡಿದ್ದು, ಬಡವರು, ಅಶಕ್ತರು ಮತ್ತು ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದ್ದಾರೆ.
ಸೋನಿಯಾ ಗಾಂಧಿ, ಮಾಯಾವತಿಗೆ ಭಾರತ ರತ್ನ ನೀಡಿ.. ಭಾರತ ಸರ್ಕಾರಕ್ಕೆ ಹರೀಶ್ ರಾವತ್ ಮನವಿ
Published On - 4:49 pm, Fri, 15 January 21