Budget 2021 | ಸರ್ಕಾರ ರೈತಪರವಾಗಿದೆ ಎಂದು ಅಂಕಿಅಂಶ ಮುಂದಿಟ್ಟ ನಿರ್ಮಲಾ ಸೀತಾರಾಮನ್
ಪಶುಸಂಗೋಪನೆ, ಡೇರಿ, ಮೀನುಗಾರಿಕೆಗೆ ₹40 ಸಾವಿರ ಕೋಟಿ ಒದಗಿಸಲಾಗುವುದು. ಹಾಳಾಗುವ ಉತ್ಪನ್ನಗಳ ಪಟ್ಟಿಗೆ 22 ಕೃಷಿ ಉತ್ಪನ್ನ ಸೇರ್ಪಡೆಗೊಳಿಸಿಲಾಗಿದ್ದು, ಕಳೆದ ಬಾರಿ ಹೊಂದಿದ್ದ 15 ಲಕ್ಷ ಕೋಟಿ ಕೃಷಿ ಸಾಲವನ್ನು, 16.5 ಲಕ್ಷ ಕೋಟಿ ಏರಿಸಲಾಗಿದೆ ಎಂದರು.
ಕೃಷಿ ಸಮುದಾಯ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡುತ್ತಿದ್ದಂತೆ ಸದನದಲ್ಲಿ ಸ್ವಲ್ಪ ಪ್ರಮಾಣದ ಗದ್ದಲ ಏರ್ಪಟ್ಟಿತು. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನೀಡಿಕೆ ಭರವಸೆ ನೀಡಿದ ಅವರು, ಗೋಧಿ, ಭತ್ತಗಳಿಗೆ ನೀಡಿದ ಬೆಂಬಲ ಬೆಲೆಯ ಮೊತ್ತದ ಅಂಕಿಅಂಶಗಳನ್ನು ಘೋಷಿಸಿ, ಕೃಷಿ ಉತ್ಪನ್ನಗಳ ಖರೀದಿ ಮುಂದುವರಿಯುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಗೋಧಿ ಬೆಳೆಯುವವರು 43 ಲಕ್ಷ ರೈತರು. ಗೋಧಿಗೆ 2013-14ರಲ್ಲಿ 33 ಸಾವಿರ ಕೋಟಿ ಬೆಂಬಲ ಬೆಲೆ ಒದಗಿಸಲಾಗಿತ್ತು. 2019-20ರಲ್ಲಿ 62 ಸಾವಿರ ಕೋಟಿ ನೀಡಿ ಖರೀದಿಸಲಾಗಿದೆ. 2020-21ರಲ್ಲಿ 75 ಸಾವಿರ ಕೋಟಿ ನೀಡಿ ಖರೀದಿಸಲಾಗಿದೆ. ಕೇಂದ್ರ ಸರ್ಕಾರ ಭವಿಷ್ಯದಲ್ಲೂ ಗೋಧಿಯನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಲಿದೆ ಎಂದು ತಿಳಿಸಿದರು.
ಭತ್ತಕ್ಕೆ 2013-14ರಲ್ಲಿ -3995 ಕೋಟಿ ಬೆಂಬಲ ನೆಲೆ ನೀಡಿ ಖರೀದಿಸಲಾಗಿತ್ತು. 2019-20ರಲ್ಲಿ-1.31 ಲಕ್ಷ ಕೋಟಿ ರೂ ನೀಡಿ ಖರೀದಿಸಲಾಗಿದೆ. ಆದರೆ, 2020-21ರಲ್ಲಿ-1 ಲಕ್ಷ 72 ಸಾವಿರ ಕೋಟಿ ನೀಡಿ ಖರೀದಿಸಲಾಗಿದೆ ಎಂದು ಬೆಂಬಲ ಬೆಲೆಯನ್ನು ಸರ್ಕಾರ ಮುಂದುವರೆಸಲಿದೆ, ಸರ್ಕಾರ ರೈತಪರವಾಗಿದೆ ಎಂದು ಘೋಷಿಸಿದರು.
ಧಾನ್ಯಗಳ ಖರೀದಿಯ ಅಂಕಿಅಂಶಗಳನ್ನು ಒದಗಿಸಿದ ಅವರು, 2019-20-8 ಸಾವಿರ ಕೋಟಿಯ ಬೆಂಬಲ ಬೆಲೆ ಒದಗಿಸಲಾಗಿತ್ತು. 2020-21ರಲ್ಲಿ 10,500 ಕೋಟಿ ರೂ. ನೀಡಿ ವಿವಿಧ ಧಾನ್ಯಗಳನ್ನು ಖರೀದಿಸಲಾಗಿದೆ. ಖರೀದಿಸಿದ ಬೆಲೆಯಲ್ಲಿ ಶೇ 40ರಷ್ಟು ಏರಿಕೆ ಆಗಿದೆ ಎಂದು ತಿಳಿಸಿದರು.
ಪಶುಸಂಗೋಪನೆ, ಡೇರಿ, ಮೀನುಗಾರಿಕೆಗೆ ₹40 ಸಾವಿರ ಕೋಟಿ ಒದಗಿಸಲಾಗುವುದು. ಹಾಳಾಗುವ ಉತ್ಪನ್ನಗಳ ಪಟ್ಟಿಗೆ 22 ಕೃಷಿ ಉತ್ಪನ್ನ ಸೇರ್ಪಡೆಗೊಳಿಸಿಲಾಗಿದ್ದು, ಕಳೆದ ಬಾರಿ ಕೃಷಿ ಸಾಲ ಕಳೆದ ಬಾರಿ ಹೊಂದಿದ್ದ 15 ಲಕ್ಷ ಕೋಟಿ ಕೃಷಿ ಸಾಲವನ್ನು, 16.5 ಲಕ್ಷ ಕೋಟಿ ಏರಿಸಲಾಗಿದೆ ಎಂದರು.
Budget 2021 LIVE: ಬೆಂಗಳೂರು ಮೆಟ್ರೊ 2ಎ, 2ಬಿ ಯೋಜನೆಯಡಿ 58.19 ಕಿಮೀ ವಿಸ್ತರಣೆಗೆ ಅನುದಾನ ಘೋಷಣೆ
Published On - 12:17 pm, Mon, 1 February 21