ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊರೊನಾ ಸೆಸ್ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕೊರೊನಾ ಲಸಿಕೆ ನೀಡಲು ಅಂದಾಜು 60-65 ಸಾವಿರ ಕೋಟಿ ಅಗತ್ಯವಿದ್ದು, ಈ ಮೊತ್ತದ ಹಣ ಸಂಗ್ರಹಿಸಲು ಗರಿಷ್ಠ ಶೇ 2ರಷ್ಟು ಕೊರೊನಾ ಸೆಸ್ ವಿಧಿಸುವ ಕುರಿತು ಹಣಕಾಸು ಇಲಾಖೆ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿತ್ತು. ಆದರೆ, ಇಂತಹ ಯಾವುದೇ ಘೋಷನೆಯನ್ನೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿಲ್ಲ.
ಆರೋಗ್ಯ ಕ್ಷೇತ್ರ ಮೂಲಸೌಕರ್ಯಕ್ಕೆ 64,184 ಕೋಟಿ ರೂಪಾಯಿ ಅನುದಾನ ಘೋಷಣೆ
ಕೊರೊನಾ ಲಸಿಕೆಗಾಗಿ 35ಸಾವಿರ ಕೋಟಿಯನ್ನುಮೀಸಲಿಡುವುದಾಗಿ ಅವರು ಘೋಷಿಸಿದರು. ‘ಸ್ವಸ್ಥ ಭಾರತ’ ಮುಂದಿನ 6 ವರ್ಷಗಳ ಯೋಜನೆಯಾಗಿದ್ದು, ‘ಮಿಷನ್ ಪೋಷಣ್ 2.0’ ಘೋಷಣೆ ಮಾಡಿದರು. ಆರೋಗ್ಯ ಮೂಲಸೌಲಭ್ಯವನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಪ್ರಸ್ತಾಪಿಸಿದರು. ಪ್ರತಿ ಜಿಲ್ಲೆಯಲ್ಲೂ ಆರೋಗ್ಯಕ್ಕೆ ಸಂಬಂದಿಸಿ ಲ್ಯಾಬ್ ಗಳ ಸ್ಥಾಪಿಸಲಾಗುವುದು ಎಂದರು.
ಆತ್ಮನಿರ್ಭರ ಭಾರತ್ ಲಸಿಕೆಯ ಪುನರುಚ್ಛಾರ
ಭಾರತದಲ್ಲಿ ಈಗ ಕೊರೊನಾಗೆ ಎರಡು ಲಸಿಕೆಗಳನ್ನು ವಿತರಿಸಲಾಗುತ್ತಿದೆ. ಶೀಘ್ರದಲ್ಲಿಯೇ ಇನ್ನೆರೆಡು ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ತಿಳಿಸಿದರು. ಸಮಗ್ರ ಆರೋಗ್ಯ ದತ್ತಾಂಶ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದೇವೆ ಎಂದರು.
ಈಗಾಗಲೇ ಕೇಂದ್ರದ ವಿತ್ತೀಯ ಕೊರತೆ ಏರಿಕೆಯಾಗಿದೆ. ಏಪ್ರಿಲ್-ನವೆಂಬರ್‌ನಲ್ಲಿ $10.75 ಲಕ್ಷ ಕೋಟಿಗೆ ಏರಿಕೆಯಾಗುವ ಸೂಚನೆ ಇದೆ. ಅಲ್ಲದೆ, ಕೊರೊನಾದಿಂದ ಕೇಂದ್ರ-ರಾಜ್ಯಸರ್ಕಾರದ ಆದಾಯ ಕಡಿತವಾಗಿದೆ. ಹೀಗಾಗಿ, ಕೆಲ ರಾಜ್ಯಗಳು ಸೆಸ್, ಹೆಚ್ಚುವರಿ ತೆರಿಗೆಯನ್ನು ವಿಧಿಸಿವೆ. ಹೀಗಾಗಿ, ಬಜೆಟ್ನಲ್ಲಿ ಕರೊನಾ ಸೆಸ್ ವಿಧಿಸಲಾಗುತ್ತದೆ ಎಂದೇ ಹೇಳಲಾಗಿತ್ತು.
Budget 2021 | ಮತ್ತಷ್ಟು ದುಬಾರಿಯಾದ ಪೆಟ್ರೋಲ್, ಡೀಸೆಲ್ ಬೆಲೆ: ಕೃಷಿ ಮೂಲಸೌಕರ್ಯ ಸೆಸ್ ಮೂಲಕ ದರ ಏರಿಕೆ
Published On - 2:10 pm, Mon, 1 February 21