Budget 2021| ’ನಮ್ಮಲ್ಲಿನ ಹೆದ್ದಾರಿ ನಿರ್ಮಾಣಕ್ಕೆ ನೀವು ಹಣ ಕೊಡೋದೇನೂ ಬೇಡ..ಹೋಗಿ ರೈತರಿಗೇನು ಬೇಕೋ ಅದನ್ನು ಕೊಡಿ‘

|

Updated on: Feb 01, 2021 | 6:55 PM

ಕೇಂದ್ರ ಸರ್ಕಾರ ಪ್ರತಿಯೊಂದನ್ನೂ ಮಾರಾಟಕ್ಕೆ ಇಡುತ್ತಿದೆ. ಈಗಂತೂ ಬ್ಯಾಂಕ್​ನಲ್ಲಿಡುವ ಠೇವಣಿಯೂ ಸುರಕ್ಷಿತವೆನಿಸುತ್ತಿಲ್ಲ. ರೈಲು, ಬಿಎಸ್​ಎನ್​ಎಲ್​, ಏರ್​ ಇಂಡಿಯಾ ಸೇರಿ ಎಲ್ಲ ಸಾರ್ವಜನಿಕ ವಲಯಗಳೂ ಖಾಸಗೀಕರಣಗೊಳ್ಳುತ್ತಿವೆ ಎಂದು ದೀದೀ ವ್ಯಂಗ್ಯವಾಡಿದರು.

Budget 2021| ’ನಮ್ಮಲ್ಲಿನ ಹೆದ್ದಾರಿ ನಿರ್ಮಾಣಕ್ಕೆ ನೀವು ಹಣ ಕೊಡೋದೇನೂ ಬೇಡ..ಹೋಗಿ ರೈತರಿಗೇನು ಬೇಕೋ ಅದನ್ನು ಕೊಡಿ‘
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತ: ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಕೊಡುಗೆಯನ್ನೇ ನೀಡಿದ್ದರೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮಾತ್ರ ಸಮಾಧಾನ ಆಗಿಲ್ಲ. ಇಂದು ಸಿಲಿಗುರಿಯಲ್ಲಿ ನಡೆದ ನಾರ್ತ್ ಬೆಂಗಾಲ್​ ಉತ್ಸವದಲ್ಲಿ ಮಾತನಾಡಿದ ಅವರು ಕೇಂದ್ರ ಬಜೆಟ್​ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇವತ್ತು ಬಜೆಟ್ ಮಂಡನೆಯಾಗಿದೆ..ಈ ಬಗ್ಗೆ ತುಂಬ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಇವತ್ತು ಕೊಟ್ಟಿದ್ದನ್ನೆಲ್ಲ ಕೇಂದ್ರ ಸರ್ಕಾರ ಸೆಸ್​ ಮೂಲಕ ಎಲ್ಲವನ್ನೂ ಮರಳಿ ಪಡೆಯುತ್ತದೆ.. ಖಂಡಿತ ಬೆಲೆ ಏರಿಕೆಯಾಗುತ್ತದೆ ಎಂದು ಹೇಳಿದರು. ಕೇಂದ್ರ ಸರ್ಕಾರ ರೈತರಿಗಾಗಿ ಏನೂ ಮಾಡಿಲ್ಲ. ಪ್ರತಿದಿನ ಇಂಧನ ಬೆಲೆಯನ್ನು ಏರಿಸುತ್ತಿದ್ದಾರೆ. ಇದ್ಯಾವ ತರಹದ ಬಜೆಟ್​? ಇದೊಂದು ಸುಳ್ಳು ಬಜೆಟ್​..ರೈತ ವಿರೋಧಿ, ಜನಸಾಮಾನ್ಯ ವಿರೋಧಿ ಮತ್ತು ದೇಶ ವಿರೋಧಿ ಬಜೆಟ್​ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಪ್ರತಿಯೊಂದನ್ನೂ ಮಾರಾಟಕ್ಕೆ ಇಡುತ್ತಿದೆ. ಈಗಂತೂ ಬ್ಯಾಂಕ್​ನಲ್ಲಿಡುವ ಠೇವಣಿಯೂ ಸುರಕ್ಷಿತವೆನಿಸುತ್ತಿಲ್ಲ. ರೈಲು, ಬಿಎಸ್​ಎನ್​ಎಲ್​, ಏರ್​ ಇಂಡಿಯಾ ಸೇರಿ ಎಲ್ಲ ಸಾರ್ವಜನಿಕ ವಲಯಗಳೂ ಖಾಸಗೀಕರಣಗೊಳ್ಳುತ್ತಿವೆ. ಹಾಗಾಗಿ ಈ ಕ್ಷೇತ್ರಗಳಿನ ಉದ್ಯೋಗವೂ ಸುರಕ್ಷಿತವಲ್ಲ ಎಂದು ಹೇಳಿದರು. ಹಾಗೇ, ನಾನು ಈ ಬಜೆಟ್​ನ್ನು ವಿವರಿಸುವಂತೆ ನಮ್ಮ ಹಣಕಾಸು ಸಚಿವ ಅಮಿತ್​ ಮಿತ್ರಾ ಬಳಿ ಕೇಳಿದೆ. ಅದಕ್ಕೆ ಅವರು, ಇದೊಂದು ಮೋಸದ ಬಜೆಟ್​, ಜನರ ಕಣ್ಣಿಗೆ ಮಣ್ಣೆರಚುವಂತಹ ಬಜೆಟ್ ಎಂದು ಹೇಳಿದರು.

ನಮಗೇನೂ ಬೇಡ
ಇನ್ನು ಹೆದ್ದಾರಿ ನಿರ್ಮಾಣ, ಉನ್ನತೀಕರಣಕ್ಕೆ ಹೆಚ್ಚಿನ ಹಣ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, ನಮಗೆ ಇದೇನೂ ಬೇಕಾಗಿಲ್ಲ.. ಮೊದಲು ಹೋಗಿ ರೈತರಿಗೆ ಬೇಕಾಗಿದ್ದನ್ನು ನೀಡಲಿ ಎಂದು ಹೇಳಿದ್ದಾರೆ. ಹಾಗೇ, ಚಹಾ ಉದ್ಯಮ ನೌಕರರಿಗೆ ನೆರವು ನೀಡುವುದಾಗಿ ಈ ಹಿಂದೆಯೂ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ನಂತರ ಏನೂ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿ ವಿಶ್ಲೇಷಣೆ | ಕರ್ನಾಟಕದ ಸಂಸದೆ ನಿರ್ಮಲಾ ಸೀತಾರಾಮನ್​ ರಾಜ್ಯವನ್ನೇ ಮರೆತರೆ?

Published On - 6:53 pm, Mon, 1 February 21