Budget 2021 | ಸಿಟಿ ಬಸ್, ಮೆಟ್ರೋ ಜಾಲ ಸುಧಾರಣೆಗೆ ₹ 18,000 ಕೋಟಿ
ನಗರ ಅಭಿವೃದ್ಧಿಯ ಭಾಗವಾಗಿ ₹ 2.87 ಲಕ್ಷ ಕೋಟಿ ರೂ.ವೆಚ್ಚದಲ್ಲಿ ನಗರ ಜಲಜೀವನ್ ಯೋಜನೆಯನ್ನು ಇಂದಿನ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಸುಮಾರು 2.86 ಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕ ನೀಡುವುದನ್ನು ಈ ಸ್ಕೀಮ್ ಒಳಗೊಂಡಿದೆ.
ದೆಹಲಿ: ದೇಶದ ನಗರ ಪ್ರದೇಶಗಳ ಸಾರ್ವಜನಿಕ ಸಾರಿಗೆ ಸೌಕರ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಇಂದು ಬಜೆಟ್ನಲ್ಲಿ ನವೀನ ಪಿಪಿಪಿ (ಖಾಸಗಿ-ಸರ್ಕಾರಿ ಸಹಭಾಗಿತ್ವ) ಯೋಜನೆಯನ್ನು ಘೋಷಿಸಿದ್ದು, ಅದರ ಅನ್ವಯ ಹೊಸ ಬಸ್ಗಳ ಮಾರಾಟ ಹೆಚ್ಚಲಿದೆ.
ಆರೋಗ್ಯ ಹಾಗೂ ಪರಿಸರದ ಬಗೆಗಿನ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ನಗರಗಳಲ್ಲಿ ಸಾರ್ವಜನಿಕ ಸಾರಿಗೆಯ ಪಾಲನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಮೆಟ್ರೋ ಜಾಲವನ್ನು ವಿಸ್ತರಿಸುವ ಮತ್ತು ಸಿಟಿ ಬಸ್ಗಳ ಸೇವೆಯನ್ನು ಅಧಿಕಗೊಳಿಸಲು, 18,000 ಕೋಟಿ ರೂ.ಮೀಸಲಿಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಈ ಯೋಜನೆಯಿಂದ ಅಟೋಮೊಬೈಲ್ ವಲಯವನ್ನು ಉತ್ತೇಜಿಸಬಹುದು, ಉದ್ಯೋಗ ಸೃಷ್ಟಿಯಾಗುತ್ತದೆ, ಆರ್ಥಿಕತೆ ಅಭಿವೃದ್ಧಿಗೆ ದಾರಿಯಾಗುತ್ತದೆ ಮತ್ತು ನಗರವಾಸಿಗಳ ಚಲನೆಯೂ ಸುಲಭವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹಾಗೇ, ನಗರ ಅಭಿವೃದ್ಧಿಯ ಭಾಗವಾಗಿ ₹ 2.87 ಲಕ್ಷ ಕೋಟಿ ರೂ.ವೆಚ್ಚದಲ್ಲಿ ನಗರ ಜಲಜೀವನ್ ಯೋಜನೆಯನ್ನು ಇಂದಿನ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಸುಮಾರು 2.86 ಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕ ನೀಡುವುದನ್ನು ಈ ಸ್ಕೀಮ್ ಒಳಗೊಂಡಿದೆ.
Budget 2021 | ನಾಲ್ಕು ರಾಜ್ಯಗಳ ಚುನಾವಣೆಗೆ ‘ಹೆದ್ದಾರಿ’ ನಿರ್ಮಿಸಿದ ಕೇಂದ್ರ ಬಜೆಟ್