ಬುಲ್ಲಿ ಬಾಯ್​ ಆ್ಯಪ್​ ಸೃಷ್ಟಿಸಿದ ಪ್ರಮುಖ ಆರೋಪಿ ಅರೆಸ್ಟ್​; ವಿವಾದಿತ ಆ್ಯಪ್​ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 4ಕ್ಕೆ ಏರಿಕೆ

ಬುಲ್ಲಿ ಬಾಯ್​ ಆ್ಯಪ್​ ಸೃಷ್ಟಿಸಿದ ಪ್ರಮುಖ ಆರೋಪಿ  ಅರೆಸ್ಟ್​; ವಿವಾದಿತ ಆ್ಯಪ್​ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 4ಕ್ಕೆ ಏರಿಕೆ
ಸಾಂಕೇತಿಕ ಚಿತ್ರ

Bulli Bai App: ಬಂಧಿತನಾಗಿರುವ ನೀರಜ್​ ಬಿಷ್ಣೋಯ್​ ಭೋಪಾಲ್​​ನಲ್ಲಿರುವ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಬಿ.ಟೆಕ್​ ವಿದ್ಯಾರ್ಥಿ. ಅಸ್ಸಾಂನ ದಿಗಂಬರ್​ ಜೊರ್ಹಾತ್​ನ ನಿವಾಸಿ.

TV9kannada Web Team

| Edited By: Lakshmi Hegde

Jan 06, 2022 | 3:50 PM

ಬುಲ್ಲಿ ಬಾಯ್​ ವಿವಾದಿತ ಆ್ಯಪ್​ ಸೃಷ್ಟಿಸಿದ 21 ವರ್ಷದ ನೀರಜ್​ ಬಿಷ್ಣೋಯ್​ ಎಂಬುವನನ್ನು ಇಂದು ದೆಹಲಿ ಪೊಲೀಸರು ಆಸ್ಸಾಂನಲ್ಲಿ ಬಂಧಿಸಿದ್ದಾರೆ. ಅಲ್ಲಿಗೆ, ಪ್ರಸ್ತುತ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈ ಬುಲ್ಲಿ ಆ್ಯಪ್​ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಇದರಲ್ಲಿ ಹಲವು ಮುಸ್ಲಿಂ ಮಹಿಳೆಯರ ಫೋಟೋವನ್ನು ಅವರಿಗೇ ಗೊತ್ತಿಲ್ಲದಂತೆ ಹಾಕಿ, ವರ್ಚ್ಯುವಲ್​ ಹರಾಜು ಕರೆಯಲಾಗಿತ್ತು. ಅಷ್ಟೇ ಅಲ್ಲ, ಮುಸ್ಲಿಂ ಸಮುದಾಯದ ಮಹಿಳೆಯರ ವಿರುದ್ಧ ಅವಹೇಳನಕಾರಿ, ಅಸಭ್ಯ ಕಾಮೆಂಟ್​ಗಳನ್ನೂ ಹಾಕಲಾಗಿತ್ತು. ಅದನ್ನೀಗ ಪೊಲೀಸರು ಬೇಧಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಹೀಗೆ ಬಂಧಿತರಾದವರೆಲ್ಲ ವಿದ್ಯಾರ್ಥಿಗಳೇ ಆಗಿದ್ದಾರೆ. ಸದ್ಯ ನಾಲ್ವರಲ್ಲಿ ಒಬ್ಬಳು ಯುವತಿ, ಇನ್ನು ಮೂವರು ಯುವಕರು. 

ಇದೀಗ ಬಂಧಿತನಾಗಿರುವ ನೀರಜ್​ ಬಿಷ್ಣೋಯ್​ ಭೋಪಾಲ್​​ನಲ್ಲಿರುವ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಬಿ.ಟೆಕ್​ ವಿದ್ಯಾರ್ಥಿ. ಅಸ್ಸಾಂನ ದಿಗಂಬರ್​ ಜೊರ್ಹಾತ್​ನ ನಿವಾಸಿ. ಅಲ್ಲಿಗೇ ಹೋಗಿ ಬಂಧಿಸಿರುವ ಪೊಲೀಸರು, ಬುಲ್ಲಿ ಬಾಯ್​ ಆ್ಯಪ್​ ತಯಾರಿಸಲು ಆತ ಬಳಸಿದ್ದ ಡಿವೈಸ್​​ನ್ನು ಕೂಡ ವಶಪಡಿಸಿಕೊಂಡಿದ್ದಾರೆ.  ಹಾಗೇ, ಅಸ್ಸಾಂನಿಂದ ಆತನನ್ನು ದೆಹಲಿಗೆ ಕರೆದುಕೊಂಡು ಹೋಗುವ ಸಿದ್ಧತೆಯೂ ನಡೆದಿದೆ. ಈ ಮೊದಲು ಬಂಧಿತರದಾವರು ಶ್ವೇತಾ ಸಿಂಗ್​ (18) , ಮಯಾಂಕ್​ ರಾವಲ್​ (21) ಮತ್ತು ವಿಶಾಲ್​ ಕುಮಾರ್ ಝಾ (21). ಇವರಲ್ಲಿ ಶ್ವೇತಾ ಮತ್ತು ಮಯಾಂಕ್​ ಉತ್ತರಾಖಂಡ್​​ನಲ್ಲಿ ಬಂಧಿಸಲ್ಪಟ್ಟಿದ್ದರೆ, ವಿಶಾಲ್​ ಕುಮಾರ್​​ನನ್ನು ಬೆಂಗಳೂರಲ್ಲಿ ಬಂಧಿಸಲಾಗಿದೆ. ಇವರನ್ನೆಲ್ಲ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬುಲ್ಲಿ ಬಾಯ್​ ಆ್ಯಪ್​ ಸೃಷ್ಟಿಯಲ್ಲಿ ಶ್ವೇತಾಳೇ ಮಾಸ್ಟರ್​ಮೈಂಡ್​ ಎಂದು ಹೇಳಲಾಗಿತ್ತು. ಆದರೆ ನಿಜಕ್ಕೂ ಈ ನೀರಜ್​ ಪ್ರಮುಖ ಆರೋಪಿ ಎಂದು ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್​​ನ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ. ಗಿಟ್​ಹಬ್​ ವೆಬ್​ಸೈಟ್​ ಮೂಲಕ ಈ ಆ್ಯಪ್​​ನ್ನು ಸೃಷ್ಟಿಸಿದ್ದಾನೆ. ಬುಲ್ಲಿ ಬಾಯ್​ ಆ್ಯಪ್​​ಗೆ ಸಂಬಂಧಪಟ್ಟ ಪ್ರಧಾನ ಟ್ವಿಟ್​ ಹ್ಯಾಂಡಲ್​ ಈತನ ಬಳಿಯೇ ಇದೆ ಎಂದೂ ಮಾಹಿತಿ ನೀಡಿದ್ದಾರೆ.  (ಗಿಟ್​​ಹಬ್ (GitHub) ಎನ್ನುವುದು ಡೆವಲಪರ್‌ಗಳು Git ಅನ್ನು ಬಳಸಿಕೊಂಡು ತಮ್ಮ ಸೋರ್ಸ್ ಕೋಡ್‌ಗಳನ್ನು ಸಂಗ್ರಹಿಸಬಹುದಾದ ಮತ್ತು ನಿರ್ವಹಿಸಬಹುದಾದ ವೆಬ್‌ಸೈಟ್ ಆಗಿದೆ. ಸಾಫ್ಟ್‌ವೇರ್‌ಗೆ ಮಾಡಿದ ಬದಲಾವಣೆಗಳನ್ನು Git ಟ್ರ್ಯಾಕ್ ಮಾಡುತ್ತದೆ, ಇದು ಪ್ರೋಗ್ರಾಮರ್‌ಗಳು ಒಟ್ಟಾಗಿ ಕಾರ್ಯನಿರ್ವಹಿಸಲು ಪರಿಣಾಮಕಾರಿಯಾಗಿ ಸಮನ್ವಯಗೊಳಿಸಲು ಸಹಾಯ ಮಾಡುತ್ತದೆ. ಗಿಟ್​ಹಬ್​​ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ. ).

ಕಳೆದ ತಿಂಗಳು ಸುಲ್ಲಿ ಡೀಲ್ಸ್​ ಎಂಬ ಆ್ಯಪ್​ ವಿವಾದ ಎಬ್ಬಿಸಿತ್ತು. ಅಂದರೆ ಇದೂ ಕೂಡ ಮಸ್ಲಿಂ ಮಹಿಳೆಯರನ್ನು ಹರಾಜು ಹಾಕಿದ್ದ ಆ್ಯಪ್​. ಸುಲ್ಲಿ ಎಂಬುದು ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡುವ ಒಂದು ಶಬ್ದವಾಗಿದೆ. ಈ ಸುಲ್ಲಿ ಡೀಲ್ಸ್ ಬೆನ್ನಲ್ಲೇ ಬುಲ್ಲಿ ಬಾಯ್​ ಆ್ಯಪ್​ ಬೆಳಕಿಗೆ ಬಂದಿದೆ. ಮೊಟ್ಟಮೊದಲು ಮುಸ್ಲಿಂ ಮಹಿಳಾ ಪತ್ರಕರ್ತರೊಬ್ಬರು ತಮ್ಮ ಫೋಟೋ ಇಲ್ಲಿ ಅಪ್​ಲೋಡ್ ಆಗಿದ್ದನ್ನು ನೋಡಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್​ಐಆರ್ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Bulli Bai App: ಬಗೆದಷ್ಟೂ ಆಳ ಬುಲ್ಲಿ ಬಾಯ್​ ಕೇಸ್​; ಅಪ್ಪ-ಅಮ್ಮ ಇಲ್ಲದ 18ವರ್ಷದ ಯುವತಿ ಇದರ ಮಾಸ್ಟರ್ ಮೈಂಡ್, ಒಟ್ಟು ಮೂವರ ಬಂಧನ​

Follow us on

Related Stories

Most Read Stories

Click on your DTH Provider to Add TV9 Kannada