ರಾಹುಲ್ ಗಾಂಧಿ ಅವರ ಹೊಸ ವಿಳಾಸ; ಬಂಗಲೆ ನಂ 5, ಸುನೆಹ್ರಿ ಬಾಗ್ ರಸ್ತೆ?
ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸುನೆಹ್ರಿ ಬಾಗ್ ರಸ್ತೆಯ ಬಂಗಲೆ ಸಂಖ್ಯೆ 5 ಕ್ಕೆ ಭೇಟಿ ನೀಡಿದ ನಂತರ ರಾಹುಲ್ ಗಾಂಧಿಗೆ ಈ ಮನೆ ನೀಡಲಾಗಿದೆಯೇ ಎಂಬುದರ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ.ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗುವುದರೊಂದಿಗೆ ಅವರು ಕ್ಯಾಬಿನೆಟ್ ಸಚಿವರ ಶ್ರೇಣಿಯನ್ನು ಹೊಂದಿರುವುದರಿಂದ ಅವರು ಟೈಪ್ -8 ಬಂಗಲೆಗೆ ಅರ್ಹರಾಗಿದ್ದಾರೆ.
ದೆಹಲಿ ಜುಲೈ 27: ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರ (Rahul Gandhi) ಹೊಸ ನಿವಾಸದ ವಿಳಾಸ ಬಂಗಲೆ ಸಂಖ್ಯೆ 5, ಸುನೆಹ್ರಿ ಬಾಗ್ ರಸ್ತೆ ಎಂದು ವರದಿಯಾಗಿದೆ. ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಸುನೆಹ್ರಿ ಬಾಗ್ ರಸ್ತೆಯ ಬಂಗಲೆ ಸಂಖ್ಯೆ 5 ಕ್ಕೆ ಭೇಟಿ ನೀಡಿದ ನಂತರ ರಾಹುಲ್ ಗಾಂಧಿಗೆ ಈ ಮನೆ ನೀಡಲಾಗಿದೆಯೇ ಎಂಬುದರ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ರಾಯ್ ಬರೇಲಿ ಸಂಸದ ರಾಹುಲ್ ಅವರಿಗೆ ಆಯ್ಕೆ ಮಾಡಲು ನೀಡಲಾದ ಮೂರು-ನಾಲ್ಕು ಮನೆಗಳ ಪೈಕಿ ಈ ಮನೆಯನ್ನು ಅವರು ಆಯ್ಕೆ ಮಾಡಿದ್ದಾರೆ ಎಂದು ನ್ಯೂಸ್ 18 ಹೇಳಿಕೊಂಡಿದೆ. ಈಗಾಗಲೇ ಸರ್ಕಾರಕ್ಕೆ ಪತ್ರವನ್ನು ಸಲ್ಲಿಸಿದ್ದು, ಟೈಪ್-ಎಂಟನೇ ಬಂಗಲೆಗೆ ರಾಹುಲ್ ಗಾಂಧಿಯವರ ಅನುಮೋದನೆಯನ್ನು ನೀಡಿದೆ ಎಂದು ವರದಿ ಹೇಳಿದೆ.
ಬಂಗಲೆಗೆ ಭೇಟಿ ನೀಡಿದ ಪ್ರಿಯಾಂಕಾ
Priyanka Gandhi ji today inspected the house allotted to Rahul Gandhi, Bungalow No. 5, Sunehri Bagh Road.
If Priyanka ji would have liked this house then Rahul will definitely live in this house 😊
This Bond ❤️ pic.twitter.com/ulyZ6g5RaC
— Harsh Tiwari (@harsht2024) July 26, 2024
ಮೋದಿ ಉಪನಾಮ ಮಾನನಷ್ಟ ಪ್ರಕರಣದಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಂಡಾಗ ಕಳೆದ ವರ್ಷ, ರಾಹುಲ್ ಗಾಂಧಿ ಅವರು 12 ವರ್ಷಗಳ ಕಾಲ ತಂಗಿದ್ದ 12, ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡಿದ್ದರು. ಆಮೇಲೆ ಅವರು ತಾಯಿ ಸೋನಿಯಾ ಗಾಂಧಿಯವರ 10, ಜನಪಥ್ ನಿವಾಸಕ್ಕೆ ತೆರಳಿದರು. ಅನರ್ಹತೆ ಹಿಂಪಡೆದ ನಂತರವೂ ರಾಹುಲ್ ಗಾಂಧಿ 10, ಜನಪಥ್ ನಿವಾಸದಲ್ಲಿ ತಂಗಿದ್ದರು. 10 ಜನಪಥ್ ನಿವಾಸವು 24 ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಪರಸ್ಪರ ಸಂಪರ್ಕ ಹೊಂದಿದೆ.
ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗುವುದರೊಂದಿಗೆ ಅವರು ಕ್ಯಾಬಿನೆಟ್ ಸಚಿವರ ಶ್ರೇಣಿಯನ್ನು ಹೊಂದಿರುವುದರಿಂದ ಅವರು ಟೈಪ್ -8 ಬಂಗಲೆಗೆ ಅರ್ಹರಾಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ನವಿ ಮುಂಬೈನಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಹಲವಾರು ಮಂದಿ ಸಿಲುಕಿರುವ ಶಂಕೆ
ಬಂಗಲೆ ಸಂಖ್ಯೆ 5, ಸುನೆಹ್ರಿ ಬಾಗ್ ರಸ್ತೆಯ ಬಗ್ಗೆ
ಸುನೆಹ್ರಿ ಬಾಗ್ ನಿವಾಸದಲ್ಲಿ ಈ ಹಿಂದೆ ಕರ್ನಾಟಕದ ಬಿಜೆಪಿ ನಾಯಕ ಎ ನಾರಾಯಣಸ್ವಾಮಿ ತಂಗಿದ್ದರು. ಅವರು 2021 ರಿಂದ 2024 ರವರೆಗೆ ಸಾಮಾಜಿಕ ನ್ಯಾಯದ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ಸೋತರು. 12 ತುಘಲಕ್ ಲೇನ್ ಬಂಗಲೆಯನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ರಾಹುಲ್ ಗಾಂಧಿಗೆ ಮೊದಲು ನೀಡಲಾಯಿತು. ಆದರೆ “ವಾಸ್ತು ಸರಿಯಾಗಿಲ್ಲ , ಅದು ಅಶುಭಕರವಾಗಿಸುತ್ತದೆ” ಎಂದು ಅವರು ಆ ಮನೆಯನ್ನು ಒಪ್ಪಿಕೊಂಡಿಲ್ಲ ಎಂದು ಹೆಸರಿಸದ ಮೂಲಗಳನ್ನು ಉಲ್ಲೇಖಿಸಿದ ನ್ಯೂಸ್ 18 ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ